ಬೆಳಗಾವಿ: 10 ದಿನಗಳ ಗಣಪತಿ ಭಕ್ತರ ಆತಿತ್ಯವನ್ನು ಸ್ವೀಕರಿಸಿ ಇಂದು ನಿರ್ಗಮನ ವಾಗುತ್ತಿದ್ದಾನೆ. ಗಣಪತಿ ಭಕ್ತರು ಹತ್ತು ದಿನಗಳವರೆಗೆ ವಿವಿಧ ಸೇವೆ ಸಲ್ಲಿಸಿ ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ಬೆಳಗಾವಿ ನಗರಕ್ಕೆ ಗಣಪತಿ ಆಗಮನ ಮತ್ತು ನಿರ್ಗಮನ ವಿಶೇಷವಾದ ಮಹತ್ವವನ್ನು ಪಡೆದಿದೆ.
ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಗಣೇಶ್ ವಿಸರ್ಜನೆಯ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.
ವಿವಿಧ ಮಂಡಲಗಳಲ್ಲಿ ಸ್ಥಾಪಿತವಾದ ಗಣೇಶ ಅದ್ದೂರಿ ಮೆರವಣಿಗೆಯ ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಶೋಭಾ ಸೋಮ್ನಾಚೆ ಹಾಗೂ ಉಪ ಮಹಾಪೌರ್ ರೇಷ್ಮಾ ಪಾಟೀಲ್ ಅವರು ಗಣೇಶ್ ಮೆರವಣಿಗೆಯ ವಾಹನಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಯ ಚಾಲನೆ ನೀಡಿದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ ರಾಜು ಸೆಟ್ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ್, ಬೆಳಗಾವಿ ಜಿಲ್ಲಾಧಿಕಾರಿಗಳಾದ ನಿತಿಶ್ ಪಾಟೀಲ್ ಪೊಲೀಸ್ ಆಯುಕ್ತರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ರಾಜಕೀಯ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು