ನಾಡಿನ ಅರಣ್ಯ ಮತ್ತು ವನ್ಯಜೀವಿಗಳ ಸಂಪತ್ತನ್ನು ಸಂರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಹುತಾತ್ಮತರಿಗೆ ಅವರ ತ್ಯಾಗ ಬಲಿದಾನವನ್ನು ಮಾಡಿದ ಹುತಾತ್ಮರಾದ ಅರಣ್ಯ ಸಿಬ್ಬಂದಿ ಗಳಿಗೆ ಇಂದು ಅರಣ್ಯ ಇಲಾಖೆ ಗೌರವ ನಮನಗಳನ್ನು ಸಲ್ಲಿಸಿತು.
ಖಾನಾಪುರ ಉಪ ವಿಭಾಗದ ಇಲಾಖೆಯ ಸಂಕೀರ್ಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಪರೇಡ್ ಗೌರವ ವಂದನೆ ಸಲ್ಲಿಸಲಾಯಿತು.
ಹಾಗೂ ಉಪಸ್ಥಿತ ಅತಿಥಿಗಳು ಹಾಗೂ ಮುಖ್ಯ ಅತಿಥಿಗಳು ಇಲಾಖೆಯ ಅಧಿಕಾರಿ ವರ್ಗ, ಅರಣ್ಯ ಹುತಾತ್ಮರವರಿಗೆ
ಹೂ ಗುಚ್ಚ ಅರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಖಾನಾಪುರ್ ಉಪ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿಗಳು ಹಾಗೂ ಎಸಿಎಫ್ ಬೈಲ್ಹೊಂಗಲ್ ಸಾಮಾಜಿಕ , ವಲಯ ಅಧಿಕಾರಿಗಳು ಖಾನಾಪುರ್ ನಾಗರಾಜ್ ಬಾಳೆಹೊಸೂರ್ ವಲಯ ಅರಣ್ಯ ಅಧಿಕಾರಿ ಲೋಂಡಾ, ನಾಗರಾಜ್ ಭೀಮಗೋಳ ಹಾಗೂ ಅರಣ್ಯ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು