2022 ಸಪ್ಟಂಬರ್ ರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಭರತ್ ಜೋಡು ಯಾತ್ರೆಯನ್ನು ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ 4000 k.m ಪಾದಯಾತ್ರೆ ಮೂಲಕ ಭಾರತ ಭೂಮಿಯನ್ನು ಸಂಚರಿಸಿದ ಸಂದರ್ಭದಲ್ಲಿ ದೇಶದ ರೈತರು, ಯುವಕ ಯುವತಿಯರು ಕಾರ್ಮಿಕ ವರ್ಗ, ಕೃಷಿ ಕಾರ್ಮಿಕ ವರ್ಗ, ಮತ್ತು ಜನರ ಜೊತೆ ನೇರ ಸಂಪರ್ಕ ಸಾಧಿಸುತ್ತಾ ಅವರ ಸಮಸ್ಯೆಗಳನ್ನು ಆಲಿಸುತ್ತಾ ಭಾರತ್ ಜೋಡಿ ಯಾತ್ರೆ ಮುಂದೆ ಸಾಗಿತ್ತು.
ಕರ್ನಾಟಕದಲ್ಲಿ ಭಾರತ್ ಜೋಡೆಯಾತ್ರೆ, ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಬಲ ಮತ್ತು ಉತ್ಸಾಹವನ್ನು ತುಂಬಿತ್ತು ಅದರ ಫಲ ಸ್ಮೃತಿಯಾಗಿ 2023 ರಲ್ಲಿ ಪ್ರಚಂಡ ಬಹುಮತ ದಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಬೆಳಗಾವಿಯಲ್ಲಿ ಭಾರತ್ ಜೋಡು ಯಾತ್ರೆ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅದರಂತೆ 2024ರಲ್ಲಿ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಯಾಕೆಂದರೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಈಗ ಜನರಿಗೆ ತಲುಪುತ್ತಾ ಇವೆ ಮತ್ತು 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳನ್ನು ಪೂರೈಸಿರುವ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎನ್ನುವುದರಲ್ಲಿ ಸಂಶಯವಿಲ್ಲ .ಜನ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಕೇಂದ್ರ ಸರ್ಕಾರ ರಚನೆ ಮಾಡುವುದಕ್ಕೆ ಆಶೀರ್ವಾದ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನವಲಗಟ್ಟಿ, ಹಾಗೂ ಕಾಂಗ್ರೆಸ ನಾಯಕಿ ಆಯುಷಾ ಸನದಿ ಉಪಸ್ಥಿತರಿದ್ದರು.