ಸಪ್ಟಂಬರ್ 9ರಂದು ಭಾರತ್ ಜೋಡು ಯಾತ್ರೆ ಮೊದಲ ವಾರ್ಷಿಕೋತ್ಸವದ ನೆನಪಿಗಾಗಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಭಾರತ್ ಜೋಡು ಯಾತ್ರೆಯ ವಾರ್ಷಿಕ ಉತ್ಸವ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಕೆ ಪಿ ಸಿ ಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ .ಶಿವಕುಮಾರ್ ಅವರು ಆದೇಶ ಮಾಡಿದ್ದಾರೆ.
ಅದರಂಗವಾಗಿ ಬೆಳಗಾವಿಯಲ್ಲಿ ಸಪ್ಟೆಂಬರ್ 9 /2023 ಸಾಯಂಕಾಲ 4:ಗಂಟೆಯಿಂದ ಸಾಯಂಕಾಲ 6:00 ವರೆಗೆ ಭಾರತಜೋಡು ಯಾತ್ರೆ, ಬೆಳಗಾವಿ ಕಾಂಗ್ರೆಸ್ ಭವನದಿಂದ ಪ್ರಾರಂಭವಾಗಲಿದೆ ಹಾಗೂ ಪಾದಯಾತ್ರೆಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ( ರಾಜು )ಆಸಿಫ್ ಸೇಟ ಮಾಜಿ ಶಾಸಕರುಗಳು ವಿಧಾನಪರಿಷತ್ ಸದಸ್ಯರುಗಳು ಬ್ಲಾಕ್ ಅಧ್ಯಕ್ಷರುಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಮಾಹಿತಿ ನೀಡಿದರು.