ಬೈಲಹೊಂಗಲ: ನ್ಯಾಯದಾನದ ಕಾರ್ಯದಲ್ಲಿ ವಿಳಂಬ ಹಾಗೂ ಅಸಡ್ಡೆ ಮಾಡುವ ಸಿಂಬ್ಬದಿಗಳನ್ನ ಸರಿದಾರಿಗೆ ತರಲು ನನ್ನ ಕಛೇರಿ ದಿನದ 24ಘಂಟೆ ತೆರೆದಿರುತ್ತದೆ ಎಂದು ನ್ಯಾಯಾಲಯದ ಸಿಬ್ಬಂದಿಗೆ ಚುರುಕು ಮುಟ್ಟಿಸಿದ ಜಿಲ್ಲಾ ಸತ್ರ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮೀ ಹೇಳಿದರು.
ಪಟ್ಟಣದ ನ್ಯಾಯವಾದಿಗಳ ಸಂಘಕ್ಕೆ ಶನಿವಾರ ಬೆಟ್ಟಿ ನೀಡಿ ಮಾತನಾಡಿ, ನ್ಯಾಯವಾದಿಗಳು ಕಕ್ಷಿದಾರರಿಗೆ ನ್ಯಾಯ ನೀಡುವಲ್ಲಿ ನ್ಯಾಯಲಯದ ಸಿಬ್ಬಂದಿಯ ಶ್ರಮ ಅತ್ಯಂತ ಮಹತ್ವದ್ದಾಗಿದೆ. ಜೀವನದಲ್ಲಿ ನೊಂದ ಜನಕ್ಕೆ ನ್ಯಾಯ ನೀಡುವಾಗ ನ್ಯಾಯಂಗ ವ್ಯವಸ್ಥೆಯನ್ನು ಚುರುಕುಗೊಳಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಅದನ್ನು ಎಲ್ಲರು ಸೇರಿ ಮಾಡುವ ಗುರುತರ ಜವಾಬ್ದಾರಿಯನ್ನು ನಿಭಾಯಿಸೋಣ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ನ್ಯಾಯಾಧೀಶ
ಮುರಳಿ ಮೋಹನ ರೆಡ್ಡಿ ಮಾತನಾಡಿ,
ನ್ಯಾಯಂಗ ವ್ಯವಸ್ಥೆ ವಿಶಾಲಾರ್ಥ ಹೊಂದಿದ್ದು ಕೇವಲ ನ್ಯಾಯಾಲಯದಲ್ಲಿ ನ್ಯಾಯಧೀಶರು ಮುಂದೆ ವಕೀಲರ ವಾದ ವಿವಾದಗಳ ಮುಖಾಂತರ ಮಾತ್ರ ನ್ಯಾಯ ತಿರ್ಮಾನವಷ್ಟೆ ಅಲ್ಲದೆ ನೊಂದ ಕಕ್ಷಿದಾರರ ಆಪ್ತಸಮಾಲೋಚನೆ ಮಾಡುವ ಮೂಲಕ ತ್ವರಿತವಾಗಿ ನ್ಯಾಯನೀಡುವ ಮೂಲಕ ಕಕ್ಷಿದಾರರು ತಮ್ಮ ವಿವಾದಗಳನ್ನು ಸೌಹಾರ್ದವಾಗಿ ಇತ್ಯಾರ್ಥ ಮಾಡಿಕೊಮಡು ಮತ್ತೆ ಒಂದಾಗಿ ತಮ್ಮ ಜೀವನದಲ್ಲಿ ಸುಖ ಸಂತೋಷದಿಂದ ಜೀವನ ಸಾಗಿಸಲು ಲೊಕಾದಾಲತ್ ಮೂಲಕ ತಮ್ಮ ನ್ಯಾಯ ಕಂಡುಕೊಳ್ಳಬೇಕೆಂದರು. ಗ್ರಾಮೀಣ ಮಟ್ಟದಲ್ಲಿ ನ್ಯಾಯಾಲಯ ತೆರೆಯುವ ಮೂಲಕ ತ್ವರಿತ ನ್ಯಾಯ ಇತ್ಯಾರ್ಥಕ್ಕಾಗಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಅನೇಕ ನೊಂದ ಜನ ನ್ಯಾಯಲಯಕ್ಕೆ ತಮ್ಮ ಪ್ರಕರಣ ದಾಖಲು ಮಾಡುವದೆ ಇಲ್ಲ. ಅಲ್ಲದೆ ಸಮಾಜದಲ್ಲಿ ರಾಜಕಾರಣಿಗಳು, ಪೋಲಿಸರ್ ಹಾಗೂ ಅನೇಕ ಸಮಾಜಘಾತಕ ಶಕ್ತಿಗಳು ನೊಂದ ಜನರ ಪ್ರಕರಣ ಇತ್ಯಾರ್ಥಗೊಳಿಸುವದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮೀಣ ಮಟ್ಟದ ನ್ಯಾಯಾಲಯ ತೆರೆಯುವ ಮೂಲಕ ಜನತೆಗೆ ಕಡಿಮೆ ವೇಳೆಯಲ್ಲಿ ನ್ಯಾಯ ನೀಡುವ ಉದ್ದೇಶ ಹೊಂದಲಾಗಿದೆ ಎಂದರು. ಭಾರತ ವೇಗವಾಗಿ ಬೆಳೆಯುತ್ತಿದ್ದು ಅಷ್ಟೆ ವೇಗವಾಗಿ ಪ್ರಕರಣಗಳನ್ನು ಇತ್ಯಾರ್ಥಗೊಳಿಸುವತ್ತ ನಾವೆಲ್ಲ ಗಮನ ಹರಿಸಿಬೇಕಾಗಿದೆ ಎಂದರು.
ಸೆ9ರಂದು ನಡೆಯುವ ಲೊಕ್ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕು ಎಂದರು. ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ದೇಶದಲ್ಲಿ ಒಂದು ಪ್ರಕರಣ ಒಂದು ದಿನಕ್ಕೆ ಸರಿ ಸುಮಾರು 2ಸಾವಿರ ರೂಪಾಯಿಗಳಷ್ಟು ಸರ್ಕಾರ ಖರ್ಚು ಮಾಡುತ್ತಿದೆ ಎಂದರು.
ಹಿರಿಯ ಶ್ರೇಣಿ ನ್ಯಾಯಧೀಶೆ ಉಷಾರಾಣಿ ಆರ್. ಪ್ರಧಾನ ನ್ಯಾಯಾಧೀಶ ಮನುಶರ್ಮ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ.ಅನಿಗೋಳ ಮಂಜು ಸೋಮಣ್ಣವರ ಇದ್ದರು.
ಕಾರ್ಯಕ್ರಮದಲ್ಲಿ ಜೆ.ಕೆ.ರೀಜಾ, ಎ.ಎ.ಅಥಣಿ, ಎಮ್.ಆರ್.ಮೆಳವೆಂಕಿ, ಎಮ್.ಎಸ್.ದೇಶಪಾಂಡೆ, ಎಮ್.ಎಮ್.ಅಬ್ಬಾಯಿ, ಸಿ.ಎಸ್. ಅಷ್ಟಗಿಮಠ, ಜಯಶ್ರೀ ಬೂದಿಹಾಳ ಎಫ್.ಎಸ್.ಸಿದ್ದನಗೌಡರ ಎಸ್.ಜಿ.ಬುದಯ್ಯನವರಮಠ, ಆಯ್.ಬಿ.ಮೆಟಿ, ರಮೇಶ ಕುರಬರ, ಯ್.ಬಿ.ಸಿದ್ದಣ್ಣವರ, ಜಗದೀಶ ಚಿಕ್ಕೊಪ್ಪ, ವಿ.ಡಿ.ಮರಕಟ್ಟಿ, ಆಯ್.ಎಸ್.ಪಾಟೀಲ, ಎಸ್.ವಿ.ಬೆಳಗಾವಿ, ಸಿದ್ದಲಿಂಗ ಬೋಳಶೆಟ್ಟಿ ಮುಂತಾದವರು ಇದ್ದರು.
ದಿಲಾವಾರ ಶಿಲ್ಲೆದಾರ ಪ್ರಾರ್ಥಿಸಿದರು. ಬಸವರಾಜ ದೊತರ ಸ್ವಾಗತಿಸಿದರು. ಎಸ್.ಎಸ್.ಆಲದಕಟ್ಟಿ ನಿರೂಪಿಸಿದರು
ಡಿ.ವಾಯ್ ಗರಗದ ವಂದಿಸಿದರು