ಸತತವಾಗಿ ಮಳೆ ಸುರಿತಾ ಇರುವುದರಿಂದ ಬೆಳಗಾವಿ ಜಿಲ್ಲೆಯಾದ್ಯಂತ ನದಿಗಳ ನೀರಿನ ಹೆಚ್ಚುತ್ತಿರುವುದು ಹಾಗೂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೂಡ ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ ಜನರ ಜೀವನ ಅಸ್ತವ್ಯಸ್ತ ವಾಗಿದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಅವರು ಖಾನಾಪುರ್ ಹಾಗೂ ಬೆಳಗಾವಿ ನಗರ ಪ್ರದೇಶಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಚೋರ್ಲಾ ಹೆದ್ದಾರಿ ಕುಸಮಳಿ ಬಳಿ ಮಲಪ್ರಭಾ ನದಿಯ ಹಳೆ ಸೇತುವೆ ಸಿಂಧನೂರು ಹಿಮ್ಮಡಗ ಹೆದ್ದಾರಿಯ ಅಲಾತ್ರ ಹಳ್ಳದ ಸೇತುವೆಗಳನ್ನು ಮಳೆ ನಿಂತ ಮೇಲೆ ಮರು ನಿರ್ಮಾಣ ಮಾಡಲಾಗುವುದು. ಖಾನಾಪುರ್ ಸಾರ್ವಜನಿಕರಿಂದ ಜನರ ಅಹವಾಲ ಸ್ವೀಕರಿಸಿದರು.
ಮಳೆಯಿಂದ ಮನೆಗಳ ಹಾನಿ ಹಾಗೂ ರಸ್ತೆಗಳ ಹಾನಿ ಕುರಿತು ಅಧಿಕಾರಿಗಳ ಜೊತೆ ಚರ್ಚೆ ಮಾಡಿದರು ಈ ಸಂದರ್ಭದಲ್ಲಿ ಖಾನಾಪುರ ಶಾಸಕರಾದ ವಿಠ್ಠಲ ಹಾಲಿಗೇಕರ
ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಶಾಸಕಿ ಅಂಜಲಿ ನಿಂಬಾಳಕರ ಹಾಗೂ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಗಳೆ, ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ,
ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ , ಎಸ್. ಪಿ .ಭೀಮಶಂಕರ್ ಗುಳೇದ, ಅಧಿಕಾರಿಗಳು
ಜನಪ್ರತಿನಿಧಿಗಳು ಸ್ಥಳೀಯರು ಉಪಸ್ಥಿತರಿದ್ದರು