ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತಂಡ ಚುರುಕುಗೊಳಿಸಿದ್ದಾರೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ 50 ಮಂದಿಗೆ ಸಿಐಡಿ ತಂಡ ನೋಟಿಸ್ ನೀಡಿದ್ದು, ಇಂದು ಅಧಿಕಾರಿಗಳು ಪ್ರತಿಯೊಬ್ಬರನ್ನು ವಿಚಾರಣೆ ನಡೆಸಲಿದ್ದಾರೆ.
ವಿಚಾರಣೆಗೆ ಬರುವಾಗ ನೇಮಕಾತಿ ಪ್ರವೇಶದ ಅಸಲು ಪ್ರವೇಶ ಪತ್ರ ಹಾಗೂ ಎರಡನೇ ಪರೀಕ್ಷೆ ಬರೆದಾಗ ತೆಗೆದುಕೊಂಡಿರೋ ಕಾರ್ಬನ್ ಪ್ರತಿ ಕಡ್ಡಾಯವಾಗಿದೆ.
ಇನ್ನು ಪ್ರತಿಯೊಬ್ಬರ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ದಾಖಲು ಮಾಡಿಕೊಳ್ಳಲಿರುವ ಸಿಐಡಿ ಅಧಿಕಾರಿಗಳು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.