ಉತ್ತರ ಮತಕ್ಷೇತ್ರದ ಶಾಸಕರಿಗೆ ಮಹಾನಗರ ಪಾಲಿಕೆಯ ಕುರಿತು ಜ್ಞಾನ ಹಾಗೂ ಅನುಭವ ಇಲ್ಲ ಈ ಹೇಳಿಕೆಗೆ ಟಾಂಗ್ ನೀಡಿದ ಉತ್ತರ ಮತಕ್ಷೇತ್ರದ ಶಾಸಕ ನನಗೆ ಎಷ್ಟು ಗೊತ್ತಿದೆ ಎಷ್ಟು ಗೊತ್ತಿಲ್ಲ ಯಾರು ಏನು ಮಾಡುತ್ತಾ ಇದ್ದಾರೆ ಎನ್ನುವುದು ಇಡಿ ಬೆಳಗಾವಿ ಜನತೆಗೆ ತಿಳಿದಿರುವ ವಿಷಯ.
138 ಪೌರಕಾರ್ಮಿಕರ ಕಳೆದ ಡಿಸೆಂಬರ್ ದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಷಯದ ಕುರಿತು ನಾನು ಮಹಾನಗರ ಪಾಲಿಕೆ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಜೂನ್ 22 ರಿಂದ ಮೂರು ತಿಂಗಳದ ಸಲುವಾಗಿ ಇವರು ನೇಮಕ ಮಾಡಲಾಗಿದೆ ಎಂದು ದಾಖಲಾತಿ ಗಳಿವೆ, ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ರಾಜಕೀಯ ಮಾಡಬಾರದು ಇದರಿಂದ ಯಾರಿಗೆ ತೊಂದರೆ ಆಗಲಿದೆ ಪೌರ ಕಾರ್ಮಿಕರಿಗೆ ಸಮಸ್ಯೆ ಆಗಲಿದೆ ನಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತನಿಖೆ ನಡೆಸಲು ಕೇಳಿಕೊಂಡಿದ್ದೇನೆ. ಪೌರಕಾರ್ಮಿಕರಿಗೆ ಆದಷ್ಟು ಬೇಗ ವೇತನ ಸಿಗುವ ವ್ಯವಸ್ಥೆ ಆಗಬೇಕೆಂದು ತಿಳಿಸಿದರು