spot_img
spot_img
spot_img
32.1 C
Belagavi
Tuesday, June 6, 2023
spot_img

ಹೊಸ ಆರ್‍ಟಿಓ ಕಚೇರಿಗಳ ಸ್ಥಾಪನೆ ಇಲ್ಲ : ಸಚಿವ ಶ್ರೀರಾಮುಲು

ಬೆಳಗಾವಿ : ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯು ಬಹುತೇಕ ಕಡೆಗಳಲ್ಲಿ ಸಾರಿಗೆ ಶಿಬಿರಗಳನ್ನು ನಡೆಸುತ್ತಿದೆ.ಸುಮಾರು 30 ಸೇವೆಗಳನ್ನು ಆನ್‍ಲೈನ್ ಮೂಲಕವೇ ಒದಗಿಸಲಾಗುತ್ತಿದೆ.

ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡದೇ ಸಂಪರ್ಕ ರಹಿತವಾಗಿ ಸೇವೆಗಳನ್ನು ಪಡೆಯುವ ಸೌಲಭ್ಯಗಳಿರುವುದರಿಂದ ರಾಜ್ಯದಲ್ಲಿ ಹೊಸದಾಗಿ ಪ್ರಾದೇಶಿಕ ಸಾರಿಗೆ (ಆರ್‍ಟಿಓ)ಕಚೇರಿಗಳನ್ನು ಸ್ಥಾಪಿಸುವುದಿಲ್ಲ ಎಂದು ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಬೈಂದೂರು ಶಾಸಕ ಸುಕುಮಾರಶೆಟ್ಟಿ ಬಿ.ಎಂ.ಅವರ ಪ್ರಶ್ನೆಗೆ ಉತ್ತರಿಸುತ್ತ ಈ ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯ ಕುಂದಾಪುರ , ಬೈಂದೂರು ತಾಲೂಕುಗಳು ಮತ್ತು ಸುತ್ತಮುತ್ತಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಕುಂದಾಪುರದಲ್ಲಿ ಪ್ರತಿ ಮಂಗಳವಾರ ಸಾರಿಗೆ ಶಿಬಿರ ನಡೆಯುತ್ತಿದೆ.ರಾಜ್ಯದ ಇತರೆಡೆಗಳಲ್ಲಿಯೂ ಅವಶ್ಯಕತೆಗೆ ಅನುಗುಣವಾಗಿ ನಿಯಮಿತವಾಗಿ ಸಾರಿಗೆ ಶಿಬಿರಗಳು ನಡೆಯುತ್ತಿವೆ.

ಕುಂದಾಪುರದಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪಿಸಬೇಕೆಂಬ ಪ್ರಸ್ತಾವ ಸರ್ಕಾರದ ಗಮನಕ್ಕೆ ಬಂದಿದ್ದು,ಅಲ್ಲಿ ಕಚೇರಿ ಸ್ಥಾಪನೆಗೆ ಮಾನದಂಡಗಳು ಪೂರೈಕೆಯಾಗಿಲ್ಲ ಎಂಬ ಎಂದು ಉಡುಪಿ ಆರ್‍ಟಿಓ ವರದಿ ಸಲ್ಲಿಸಿದ್ದಾರೆ.

ಹೊಸ ಆರ್‍ಟಿಓ ಅಥವಾ ಎಆರ್‍ಟಿಓ ಕಚೇರಿಗಳನ್ನು ತೆರೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸುವ ಕುರಿತು ಪರಿಶೀಲಿಸಿ ವರದಿ ನೀಡಲು ಅಪರ ಸಾರಿಗೆ ಆಯುಕ್ತರು ಹಾಗೂ ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು, ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಶಿಬಿರಗಳನ್ನು ನಡೆಸುತ್ತಿದೆ,ಸುಮಾರು 30 ಸೇವೆಗಳನ್ನು ಆನ್‍ಲೈನ್ ಸೇವೆಗಳನ್ನಾಗಿ ಮಾರ್ಪಡಿಸಲಾಗಿದೆ. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡದೇ ಸಂಪರ್ಕರಹಿತವಾಗಿ ಸೇವೆಗಳನ್ನು ಪಡೆಯಲು ಅವಕಾಶಗಳಿರುವದರಿಂದ ಹೊಸ ಆರ್‍ಟಿಓ ಕಚೇರಿಗಳ ಸ್ಥಾಪನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬ ಅಭಿಪ್ರಾಯ ನೀಡಿದೆ.

ಸಾರ್ವಜನಿಕರಿಗೆ ವಾಹನ ಅನುಜ್ಞಾ ಪತ್ರ,ವಾಹನ ನೋಂದಣ ಯ ಸ್ಮಾರ್ಟ್ ಕಾರ್ಡ್‍ಗಳನ್ನು ಅವರ ಮನೆಯ ವಿಳಾಸಗಳಿಗೆ ಅಂಚೆ ಮೂಲಕ ತಲುಪಿಸಲಾಗುತ್ತಿದೆ.ವಾಹನ-4,ಸಾರಥಿ-4 ಮತ್ತು ಇ-ಪೇಮೆಂಟ್ ಆಫ್ ಟ್ಯಾಕ್ಸ್‍ನಂತಹ ಆನ್‍ಲೈನ್ ಸೇವೆಗಳನ್ನು ರಾಜ್ಯದ ಎಲ್ಲಾ ಕಚೇರಿಗಳಲ್ಲಿ ಜಾರಿಗೊಳಿಸಲಾಗಿದೆ.

ಕರ್ನಾಟಕ -1,ಬೆಂಗಳೂರು -1 ಮತ್ತು ಮೊಬೈಲ್-1 ಆ್ಯಪ್‍ಗಳ ಮೂಲಕವೂ ವಾಹನಗಳ ಮಾಹಿತಿ,ವಿವರಗಳನ್ನು ಪಡೆಯಬಹುದಾಗಿದೆ.ಇ-ಆಡಳಿತ ಇಲಾಖೆಯ ಗ್ರಾಮ ಒನ್ ಮತ್ತು ಜನಸೇವಕ ಯೋಜನೆಗಳಡಿಯೂ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಸಾರಿಗೆ ಇಲಾಖೆಯಲ್ಲಿ ಯಾವುದೇ ಹೊಸ ಕಚೇರಿಗಳನ್ನು ಪ್ರಾರಂಭಿಸುವ ಅವಶ್ಯಕತೆ ಉದ್ಭವಿಸುವುದಿಲ್ಲ ಎಂದು ಸಚಿವ ಬಿ.ಶ್ರೀರಾಮುಲು ಸದನದಲ್ಲಿ ವಿವರಿಸಿದರು.

Related News

ಬೆಳಗಾವಿಯಲ್ಲಿ ಬ್ರಿಡ್ಜ್ ಮೇಲಿಂದ ಉರುಳಿಬಿದ್ದ ಟ್ಯಾಂಕರ್ ಅದೃಷ್ಟವಶಾತ್ ಬದುಕುಳಿದ ಚಾಲಕ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ವಾಹನವೊಂದು ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಮೇಲಿಂದ ಬಿದ್ದಿರುವ ಘಟನೆ ಎಂ.ಕೆ ಹುಬ್ಬಳ್ಳಿ ಸಮೀಪದಲ್ಲಿ ನಡೆದಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಹಾರಾಷ್ಟ್ರ ಮೂಲದ ರಾಮದಾಸ್...

ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಐವರ ಸಾವು

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಚಿ) ನಲ್ಲಿ ನಡೆದಿದೆ. ಮುನೀರ್(40), ನಯಾಮತ್ (40), ಮುದ್ದತ್ ಶಿರ್ (12), ರಮಿಜಾ ಬೇಗಂ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -