ಬೆಳಗಾವಿ: ರಾಜ್ಯದ ಎರಡು ಪ್ರಬಲ ಸಮುದಾಯದವಾಗಿರುವ ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಕೆಟಗರಿ ಮಾಡಿದೆ.
3ಎನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2C ಕೆಟಗರಿ ಹಾಗೂ 3ಬಿನಲ್ಲಿದ್ದ ಲಿಂಗಾಯತರಿಗೆ 2ಡಿ ಕೆಟಗರಿ ರಚಿಸಲು ಇಂದು ನಡೆದ ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ.
ಒಕ್ಕಲಿಗ ಹಾಗೂ ಪಂಚಮಸಾಲಿ 2ಎ ಕೆಟಗರಿಯಲ್ಲಿ ಸೇರುವಂತೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ 2ಸಿ ಮತ್ತು 2ಡಿ ಕೆಟಗರಿ ರಚಿಸುವ ಮೂಲಕ ಚುನಾವಣೆ ಹೊತ್ತಲ್ಲಿ ಎರಡು ಪ್ರಬಲ ಸಮುದಾಯಗಳ ಮೀಸಲಾತಿ ಬೇಡಿಕೆ ಪರಿಹರಿಸಲು ಈ ಹೊಸ ಸೂತ್ರ ಹೆಣೆದಿದೆ. ಇದರೊಂದಿಗೆ ಒಂದೇ ಕಲ್ಲಿನ ಎರಡು ಹಕ್ಕಿಗಳನ್ನು ಹೊಡೆದಿದೆ.