LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂತೋಷದ ಬದುಕಿಗೆ ಯೋಗ ದಾರಿ : ವೀರಣ್ಣ ಚರಂತಿಮಠ

Advertisement

ಬಾಗಲಕೋಟೆ : ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಧಿಸುವ ಜೀವನ ವಿಧಾನವಾಗಿದೆ. ಇಂದಿನ ವೇಗದ ಜೀವನದಲ್ಲಿ ಯೋಗವು ಒತ್ತಡವನ್ನು ಕಡಿಮೆ ಮಾಡಿ, ಆರೋಗ್ಯಕರ ಹಾಗೂ ಸಂತೋಷದ ಬದುಕಿಗೆ ದಾರಿ ತೋರಿಸುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮೈದಾನದಲ್ಲಿ ವಿವಿಧ ಮಹಾವಿದ್ಯಾಲಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹನ್ನೆರಡನೇಯ ಯೋಗದಿನದಲ್ಲಿ ಪಾಲ್ಗೊಂಡು ಮಾತನಾಡಿ ಅವರು ಆರೋಗ್ಯಕರ ವಯೋವೃದ್ಧಿಗಾಗಿ ಯೋಗ ಈ ವರ್ಷದ ಧ್ಯೇಯವಾಕ್ಯ ಅದರಂತೆ ನಾವು ಪ್ರತಿದಿನ ಕೆಲವೇ ನಿಮಿಷಗಳಾದರೂ ಯೋಗಕ್ಕೆ ಮೀಸಲಿಟ್ಟರೆ, ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು. ಯೋಗದ ಸಂದೇಶವಾದ ಆರೋಗ್ಯ, ಶಾಂತಿ ಮತ್ತು ಸಾಮರಸ್ಯವನ್ನು ಎಲ್ಲೆಡೆ ಹರಡಬೇಕು.ಯೋಗವು ಭಾರತದ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ.ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ, ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರೂ ಯೋಗದ ಪ್ರಯೋಜನವನ್ನು ಪಡೆಯಿರಿ ಎಂದರು.

ಗಮನ ಸೇಳೆದ ಆಸನಗಳು:
ದೇಹದ ಸಮತೋಲನ ಮತ್ತು ಭಂಗಿಯನ್ನು ಸುಧಾರಿಸುವ ತಾಡಾಸನ,ಏಕಾಗ್ರತೆ ಮತ್ತು ಸಮತೋಲನ ಹೆಚ್ಚಿಸುವ ವೃಕ್ಷಾಸನ,ದೇಹದ ನಮ್ಯತೆಯನ್ನು ಹೆಚ್ಚಿಸುವ ತ್ರಿಕೋಣಾಸನ,ಧ್ಯಾನ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿಯ ಪದ್ಮಾಸನ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ವಜ್ರಾಸನ ಸೇರಿದಂತೆ ಸೇತುಭಂದಾಸನ ಸುಖಾಸನ,ಭುಜಂಗಾಸನ,ಶಲಭಾಸನ,ಧನುರಾಸನ,ಪವನಮುಕ್ತಾಸನ,ಸರ್ವಾಂಗಾಸನ,ಹಲಾಸನ,ಶವಾಸನ,ಮಕರಾಸನದ ಭಂಗಿಗಳು ಗಮನ‌ ಸೆಳೆದವು.

ಯೋಗದಿನಾಚಾರಣೆಯಲ್ಲಿ ಬಿವಿವಿ ಸಂಘದ ಕಾಲೇಜುಗಳ‌ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ, ಮಲ್ಲಿಕಾರ್ಜುನ ಸಾಸನೂರ ಸೇರಿದಂತೆ ಸಂಘದ ಸದಸ್ಯರು, ವಿವಿಧ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಕ್ಕೋಡಿಯ ಸಿಟಿಇ ಸಂಸ್ಥೆಯ ಡಿ.ಕೆ.ಶಹಾ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ; ಗಣ್ಯರಿಂದ ಸತ್ಕಾರಗ್ಯಾರಂಟಿ ಪರಿಷ್ಕರಣೆ ಅನಿವಾರ್ಯ, ಆದರೆ ನಿಲ್ಲಿಸಲ್ಲ: ಸಚಿವ ಸತೀಶ್ ಜಾರಕಿಹೊಳಿಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರಬೈಕ್ ಪಾರ್ಕಿಂಗ್ ವಿಚಾರಕ್ಕೆ ಜಗಳ – ಚಾಕು ಇರಿದು ಮಹಿಳೆ ಹತ್ಯೆ, ಪತಿಗೆ ಗಂಭೀರ ಗಾಯಬೆಂಗಳೂರಿನಲ್ಲಿ ಕಳಪೆ ರಸ್ತೆ ಕಾಮಗಾರಿ – ಕೃಷ್ಣ ಬೈರೇಗೌಡ ಕ್ಲಾಸ್‌ ಬೆನ್ನಲ್ಲೇ ಅಧಿಕಾರಿ ಅಮಾನತು, ಗುತ್ತಿಗೆದಾರನಿಗೆ ದಂಡ!ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯ: ಯು.ಟಿ ಖಾದರ್ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ತರಬೇಕು, ಯತ್ನಾಳ್‌ರನ್ನ ವಿಪಕ್ಷ ನಾಯಕನನ್ನಾಗಿ ಮಾಡಬೇಕು: ಕುಮಾರ್‌ ಬಂಗಾರಪ್ಪನಾನು ಅಡ್ಡ ಮತದಾನ ಮಾಡಿಲ್ಲ, ಮುಜುಗರ ಉಂಟು ಮಾಡಬೇಡಿ: ಚಂದ್ರು ಲಮಾಣಿ2 ಕೋಟಿ ವಿಮೆಗಾಗಿ ಗಂಡನನ್ನು ಕೊಂದ ಮಗಳು ಅರೆಸ್ಟ್ – ಊರಲ್ಲಿ ತಲೆ ಎತ್ತಲಾಗದೆ ತಾಯಿ ಆತ್ಮಹತ್ಯೆಸಂತೋಷದ ಬದುಕಿಗೆ ಯೋಗ ದಾರಿ : ವೀರಣ್ಣ ಚರಂತಿಮಠ