LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾಯ್‌ಫ್ರೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್‌ ಬೆದರಿಕೆ – ಸ್ನೇಹಿತೆ ಅರೆಸ್ಟ್‌

Advertisement

ಬೆಂಗಳೂರು: ನಿಜವಾದ ಸ್ನೇಹಿತರನ್ನ ಹೊಂದಿರುವುದು ವರದಾನ, ಆದರೆ ಇತ್ತೀಚಿನ ದಿನಗಳಲ್ಲಿ ನಿಜವಾಗಿಯೂ ಇತರರ ಬಗ್ಗೆ ಕಾಳಜಿ ವಹಿಸುವ ಮತ್ತು ಬೆಂಬಲಿಸುವ ಜನರನ್ನು ಕಂಡುಹಿಡಿಯುವುದು ಕಷ್ಟ. ನಮ್ಮೊಂದಿಗಿರುವವರು ಶತ್ರುಗಳಾ ಮಿತ್ರರಾ ಎಂಬುದು ನಮಗೆ ತಿಳಿದಿರುವುದಿಲ್ಲ. ಒಳ್ಳೆಯವರಂತೆ ನಟಿಸುವ ವಿಷಕಾರಿ ಜನರೊಂದಿಗೆ ನಾವು ಇರಬಹುದು. ಇದಕ್ಕೆ ಚಾಮರಾಜಪೇಟೆಯಲ್ಲಿ (Chamrajpet) ನಡೆದಿರುವ ಘಟನೆ ತಾಜಾ ಉದಾಹರಣೆಯಾಗಿದೆ.

ಬಾಯ್‌ಫೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೋದ ಮಹಿಳೆ ಈಗ ಜೈಲು ಸೇರಿದ್ದಾಳೆ. ತನ್ನ ಸ್ನೇಹಿತೆಯ ಖಾಸಗಿ ಫೋಟೋಗಳನ್ನ ವೈರಲ್‌‌ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶ್ವೇತಾ ಎಂಬ ಮಹಿಳೆ ಬಂಧಿತ ಆರೋಪಿ.
ಶ್ವೇತಾಳ ಬಾಯ್‌ಫ್ರೆಂಡ್‌ ಜೊತೆ ಆಕೆಯ ಸ್ನೇಹಿತೆ ಸಲುಗೆಯಿಂದ ಇದ್ದಳು. ಇದು ಇಬ್ಬರ ವೈಯಕ್ತಿಕ ಜಗಳಕ್ಕೆ ಕಾರಣವಾಗಿದೆ. ತನ್ನ ಬಾಯ್‌ಫ್ರೆಂಡ್‌ ಸ್ನೇಹಿತೆಯ ಜೊತೆಗೆ ಇರುವ ಫೋಟೋ ಕಂಡ ಶ್ವೇತ, ಆಕೆಯೊಂದಿಗೆ ಜಗಳವಾಡಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ, ಸ್ನೇಹಿತೆ ವಿರುದ್ಧ ಸೇಡು ತೀರಿಸಿಕೊಳ್ಳಳು ಬಾಯ್‌ಫ್ರೆಂಡ್‌ ಫೋನ್‌ನಲ್ಲಿದ್ದ ಫೋಟೋಗಳನ್ನ ಕಳವು ಮಾಡಿದ್ದಾಳೆ. ಕದ್ದ ಖಾಸಗಿ ಫೋಟೋಳನ್ನ ಸ್ನೇಹಿತೆಯ ಗಂಡನಿಗೆ ಕಳಿಸಿ, ಸಂಸಾರದಲ್ಲಿ ಉಳಿ ಹಿಂಡಿದ್ದಾಳೆ. ಇದರಿಂದ ಶ್ವೇತಾ ಸ್ನೇಹಿತೆ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

 

ಇಷ್ಟಕ್ಕೆ ಸುಮ್ಮನಾಗದ ಶ್ವೇತಾ, ಇನ್ನಷ್ಟು ಫೋಟೋಳಿವೆ, ವೈರಲ್‌ ಮಾಡೋದಾಗಿಯೂ ಬೆದರಿಕೆ ಹಾಕಿದ್ದಾಳೆ. ಕೂಡಲೇ ಮಹಿಳೆಯ ಪತಿ ಚಾಮರಾಜಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ಐಟಿ ಕಾಯ್ದೆ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು ಶ್ವೇತಾಳನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಶ್ವೇತಾಳ ಮೊಬೈಲ್‌ನಲ್ಲಿ ಹಲವು ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲ ರಾಜಕಾರಣಿಗಳು ಫೋಟೋಗಳಲ್ಲಿದ್ದಾರಂತೆ. ಮುಂದಿನ ವಿಚಾರಣೆ ಕೈಗೊಂಡಿರುವ ಚಾಮರಾಜಪೇಟೆ ಪೊಲೀಸ್ರು ಶ್ವೇತಾಳ ಹಿನ್ನೆಲೆ ಕೆದಕುತ್ತಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧಾರವಾಡ ಕೋರ್ಟ್‌ಗೆ ಇ-ಮೇಲ್ ಬಾಂಬ್ ಬೆದರಿಕೆ – ಕಲಾಪ ಸ್ಥಗಿತನಡು ರಸ್ತೆಯಲ್ಲಿ ತಲ್ವಾರ್‌ನಿಂದ ಬೃಹತ್ ಕೇಕ್‌ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್‌ – ಪುಂಡನ ವಿರುದ್ಧ ಎಫ್‌ಐಆರ್‌ಗ್ರಾಹಕನ ಸೋಗಿನಲ್ಲಿ ಬಂದು ಸಿನಿಮಾ ಶೈಲಿಯಲ್ಲಿ ಚಿನ್ನದ ಸರ ಕದ್ದು ಪರಾರಿಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿವಿದ್ಯುತ್‌ ಶಾರ್ಟ್ ಸರ್ಕ್ಯೂಟ್- ಚಿಕ್ಕೋಡಿಯ ಬಟ್ಟೆ ಅಂಗಡಿಗೆ ಬೆಂಕಿಭೀಕರ ಅಪಘಾತ – ಇಬ್ಬರು ದುರ್ಮರಣ, ಮೂವರು ಗಂಭೀರಅಡ್ಡ ಮತದಾನದ ಬಗ್ಗೆ ಮೊದಲೇ ಮಾಹಿತಿ ಇತ್ತು, ಪರೀಕ್ಷಿಸಲೆಂದೇ ಅಭ್ಯರ್ಥಿ ಹಾಕಿದೆ: ಹೆಚ್‌ಡಿಕೆರಾಮ ಮಂದಿರ ದೇಣಿಗೆ ಕಳ್ಳತನ – ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ರೂ ಕ್ರಮ ನಿಶ್ಚಿತ: ಸಿಎಂ ಯೋಗಿ ಎಚ್ಚರಿಕೆಚಿನ್ನದ ಓಲೆಗಾಗಿ 80 ವರ್ಷದ ಅಜ್ಜಿಯ ಕೊಲೆ – ಕಿವಿ ಕತ್ತರಿಸಿ ಪರಾರಿಯಾದ ಕಳ್ಳಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತಲಾ ಒಂದು ಕೋಟಿ ಪರಿಹಾರ ನೀಡಿ – ಮೋದಿಗೆ ʻಕಾಕ್ರೋಚ್‌ʼ ಪತ್ರ