LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟ್ರೆಕ್ಕಿಂಗ್ ವೇಳೆ ಈಜಲು ಹೋದ ಟೆಕ್ಕಿ ನಾಪತ್ತೆ

Advertisement

ಬೆಂಗಳೂರು: ಟ್ರೆಕ್ಕಿಂಗ್  ವೇಳೆ ಈಜಲು ಹೋದ ಟೆಕ್ಕಿ  ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ  ಬಳಿಯ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿಯಲ್ಲಿ ನಡೆದಿದೆ.

ಆಂಧ್ರ ಪ್ರದೇಶ ಮೂಲದ ವಿನಯ್ (30) ನಾಪತ್ತೆಯಾದ ಟೆಕ್ಕಿ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದರು. ಶುಕ್ರವಾರ ಗಾಂಧಿ ಜಯಂತಿ ರಜೆ ಹಿನ್ನೆಲೆ ಟ್ರೆಕ್ಕಿಂಗ್ ಪ್ಲ್ಯಾನ್ ಮಾಡಿದ್ದು, ಬಿಎಲ್‌ಆರ್ ಹೈಕ್ ಎಂಬ ಇನ್ಸ್ಟಾ ಗ್ರೂಪ್ ಮೂಲಕ ಎಂಟು ಜನರ ತಂಡ ಟ್ರೆಕ್ಕಿಂಗ್ ತೆರಳಿದ್ದರು.

ಸಂಜೆ 5:30ರ ವೇಳೆಗೆ ಕಲ್ಲು ಕ್ವಾರಿಯ ನರಿನಲ್ಲಿ ಈಜಲು ತೆರಳಿದ್ದಾರೆ. ಈಜಾಡುತ್ತಿದ್ದ ವೇಳೆ ನೀರಿನಲ್ಲಿ ವಿನಯ್ ನೀರಿನಲ್ಲಿ ಮುಳುಗಿದ್ದಾರೆ. ಉಳಿದವರು ನೀರಿನಿಂದ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಜಿಗಣಿ ಪೋಲಿಸರು ಸ್ಥಳಕ್ಕೆ ಭೇಟಿ ನಿಡಿದ್ದಾರೆ. ಅಗ್ನಿಶಾಮಕ ತಂಡ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ. ಅಗ್ನಿಶಾಮಕ ತಂಡ ಶುಕ್ರವಾರ ಸಂಜೆಯಿಂದ ವಿನಯ್‌ಗಾಗಿ ಹುಡುಕಾಡುತ್ತಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಟೆಕ್ಕಿ ವಿನಯ್‌ಗಾಗಿ ಶೋಧಕಾರ್ಯ ಮುಂದುವರಿದಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಧಾರವಾಡ ಕೋರ್ಟ್‌ ಆವರಣದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ರೌಡಿಶೀಟರ್‌ಟ್ರೆಕ್ಕಿಂಗ್ ವೇಳೆ ಈಜಲು ಹೋದ ಟೆಕ್ಕಿ ನಾಪತ್ತೆರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳಿದ್ದರೆ ಸಮಗ್ರ ತನಿಖೆ ನಡೆಸಿ: ಸಿ.ಟಿ ರವಿಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ – ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈಅನ್ಯಾಯದ ವಿರುದ್ಧ ಧ್ವನಿ ಎತ್ತಲು `ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಆರಂಭಿಸಿದ ರಾಹುಲ್ ಗಾಂಧಿಆರ್ಕೆಸ್ಟ್ರಾ ನೋಡ್ತಿದ್ದ ವೇಳೆ ದುರಂತ – ಲೈಟ್ ಕಂಬ ಬಿದ್ದು ಓರ್ವ ಸಾವು, ಮತ್ತೋರ್ವ ಗಂಭೀರಬರ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ನೋಡಲ್ ಅಧಿಕಾರಗಳನ್ನು ನಿಯೋಜಿಸಿ – ಡಿಸಿಗೆ ಹೆಚ್.ಸಿ ಬಾಲಕೃಷ್ಣ ಸೂಚನೆ