LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏಕಾಏಕಿ ಕುಸಿದ ಶೌಚಾಲಯದ ಗುಂಡಿ – ಇಬ್ಬರು ಕಾರ್ಮಿಕರು ಬಲಿ

Advertisement
Advertisement

ಮಡಿಕೇರಿ: ಶುಂಠಿ ಕೀಳಲು ತೆರಳಿದ್ದ ಮಹಿಳೆಯೋರ್ವರು ಶೌಚಾಲಯದ ಗುಂಡಿಗೆ ಬಿದ್ದು ಪರಿಣಾಮ ಅವರನ್ನು ರಕ್ಷಿಸಲು ಮುಂದಾದ ವ್ಯಕ್ತಿಯೋರ್ವ ವಿಷಾನಿಲದ ಪರಿಣಾಮ ಸಾವನ್ನಪ್ಪಿದ ದಾರುಣ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ  ತಾಲೂಕಿನ ಹೊಸತೋಟ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತರನ್ನು ಗ್ರಾಮದ ಜನಾರ್ದನ (43) ಹಾಗೂ ನಿತ್ಯ (46) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ನಿತ್ಯ ಅವರು ತಮ್ಮ ಮನೆಗೆ ಸ್ವಲ್ಪ ಶುಂಠಿ ಬೇಕೆಂದು ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ, ನಾನು ಗದ್ದೆಯಿಂದ ಶುಂಠಿ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದ ನಿತ್ಯ ಗದ್ದೆಯತ್ತ ತೆರಳಿದ್ದಾರೆ. ಗದ್ದೆಯ ಸಮೀಪದಲ್ಲಿದ್ದ ಹಳೆಯ ಶೌಚಾಲಯದ ಗುಂಡಿ ಏಕಾಏಕಿ ಕುಸಿದ ಪರಿಣಾಮ ಅವರು ಅದರೊಳಗೆ ಬಿದ್ದಿದ್ದಾರೆ.

ಇದನ್ನು ಕಂಡ ಜನಾರ್ದನ ಅವರು ನಿತ್ಯ ಅವರನ್ನು ರಕ್ಷಿಸಲು ಗುಂಡಿಯೊಳಗೆ ಇಳಿದಿದ್ದಾರೆ. ಆದರೆ, ಗುಂಡಿಯೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಡಿಕೇರಿ ಶಾಸಕ ಮಂತರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಶಾಮುಕ್ತ ಸಮಾಜಕ್ಕೆ ಯುವಜನತೆ ಸಂಕಲ್ಪ ಅಗತ್ಯ: ನಾಗರತ್ನಾಪ್ರಬಲ ಭೂಕಂಪನವು ನೆಲವನ್ನು ನಡುಗಿಸಿತು; ಇಲ್ಲಿಯವರೆಗೆ 132 ಜನರು ಸಾವನ್ನಪ್ಪಿದ್ದಾರೆ, 1500 ಕ್ಕೂ ಹೆಚ್ಚು ಮನೆಗಳು ನಾಶपक्ष कसा फुटतो, हे अमित शहांना कळणार, आता दयामया नाही; संजय राऊतांचं ओपन चँलेजಮಕ್ಕಳ ಹತ್ಯೆಗೆಂದೇ ಬೆಂಗ್ಳೂರಿನ ಸ್ಟಾರ್‌ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡಿದ್ದ ತಂದೆ ಇಮ್ರಾನ್‌?ನದಿಗೆ ರಾಸಾಯನಿಕ ತ್ಯಾಜ್ಯ – 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆಜೆಡಿಎಸ್ ಪಾದಯಾತ್ರೆಯಲ್ಲಿ ರೈತರು ಯಾರೂ ಇಲ್ಲ: ಡಿಕೆಶಿನಿದ್ದೆಗಣ್ಣಿನಲ್ಲಿ ಚಾಲಕನ ಯಡವಟ್ಟು – ಮನೆಗೆ ಡಿಕ್ಕಿ ಹೊಡೆದು ಮರಳು ಲಾರಿ ಪಲ್ಟಿವಿರಾಜಪೇಟೆಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ – ಗ್ರಾಮಸ್ಥರಿಂದ ಪ್ರತಿಭಟನೆಮಂಡ್ಯದಲ್ಲಿ ಜೈಲ್ ಭರೋ ಚಳವಳಿ – ಹೆದ್ದಾರಿ ತಡೆದ ಮಹಿಳಾ ಪ್ರತಿಭಟನಾಕಾರರನ್ನ ಹೊತ್ತೊಯ್ದ ಪೊಲೀಸರುಚಲಿಸುತ್ತಿದ್ದಾಗಲೇ ಕಳಚಿದ KSRTC ಬಸ್‌ ಚಕ್ರ – ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ