ಚಿಕ್ಕಬಳ್ಳಾಪುರ: ಹೆಣ್ಣೆಂದು ಸ್ವಂತ ಮಗುವನ್ನೇ ಸಂಪ್‌ಗೆ ಹಾಕಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಶಾಂತಿನಗರದಲ್ಲಿ ನಡೆದಿದೆ.
ತಂದೆ ಇಮ್ರಾನ್ ಹಾಗೂ ತಾಯಿ ಮುಸ್ಕಾನ್‌ಗೆ 13 ದಿನಗಳ ಹಿಂದೆ ಹೆಣ್ಣು ಜನಿಸಿತ್ತು.
ಬುಧವಾರ ರಾತ್ರಿ (ಜು.22) ಆರೋಪಿ ಇಮ್ರಾನ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಸಂಪ್‌ಗೆ ಹಾಕಿದ್ದಾನೆ. ಬಳಿಕ ತಾಯಿ ಎದ್ದು ಮಗು ಎಲ್ಲಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಆನಂತರ ಮನೆಯವರ ಜೊತೆ ಹುಡುಕಾಡುವ ನಾಟಕ ಆಡಿದ್ದಾನೆ.
ಕೊನೆಗೆ ಸಂಪ್ ನೀರು ಹೊರ ಹಾಕಿ ನೋಡಿದಾಗ ಮಗು ಶವವಾಗಿ ಪತ್ತೆಯಾಗಿದೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಪಿ ತಂದೆ ಇಮ್ರಾನ್‌ನನ್ನು ವಶಕ್ಕೆ ಪಡೆದಿದ್ದಾರೆ.




