LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವ್ರೇ ನಮ್ಮ ಕ್ಯಾಪ್ಟನ್‌: ಸತೀಶ್‌ ಜಾರಕಿಹೊಳಿ

Advertisement

ಮೈಸೂರು: ಸಿದ್ದರಾಮಯ್ಯ  ಅವರ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮಗೆ ಆರ್ಮಿ ಕ್ಯಾಪ್ಟನ್‌, ನಾನು ವೈಸ್‌ ಕ್ಯಾಪ್ಟನ್‌ ಎಂದು ಸಚಿವ ಸತೀಶ್‌ ಜಾರಕಿಹೊಳಿ  ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮ್ಮ ಕ್ಯಾಪ್ಟನ್‌. ಇದರ ಬಗ್ಗೆ ಯಾರಿಗು ಅನುಮಾನ ಬೇಡ. ನಾನು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ. ನಾವು ಹಿಂದೆಯೂ ಪ್ರತಿ ಬಾರಿ ಭೇಟಿಯಾಗುತ್ತಿರಲಿಲ್ಲ. ಪದೇ ಪದೇ ಜೊತೆಯಲ್ಲಿ ಇರುತ್ತಿರಲಿಲ್ಲ. ಅವಶ್ಯಕತೆ ಇದ್ದಾಗ ಭೇಟಿಯಾಗುತ್ತೇವೆ ಈಗಲೂ ಅಷ್ಟೇ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇಡಿ ದಾಳಿ ನಂತರ ಯತೀಂದ್ರ ಸಿದ್ದರಾಮಯ್ಯ  ನನ್ನನ್ನು ಭೇಟಿಯಾಗಿದ್ದರು. ಮನೆಯಲ್ಲಿ ಒಬ್ಬರು ಸಾಂತ್ವಾನ ಹೇಳಿದ್ದಾರೆ ಸಾಕು. ಮನೆಯಲ್ಲಿ ಎಲ್ಲರೂ ನಮಗೆ ಸಾಂತ್ವಾನ ಹೇಳಬೇಕೆಂದು ಬಯಸಬಾರದು. ಯಾರದ್ದಾದ್ರೂ ಮದುವೆಗೆ ಗೃಹ ಪ್ರವೇಶಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ. ಎಲ್ಲರೂ ಬರಬೇಕೆಂದು ನೀರಿಕ್ಷೆ ಮಾಡಿದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ರು.

ಇನ್ನೂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದು ಅಹಿಂದ ಸಮಾವೇಶ ಅಲ್ಲ. ಅದು ಕೇವಲ ಹಿಂದುಳಿದವರ ಸಮಾವೇಶ. ಸಮಾವೇಶ ಆಯೋಜನೆ ಮಾಡಿದವರು ನನ್ನನ್ನ ಕರೆದಿಲ್ಲ. ಯಾಕೆ ನನ್ನನ್ನು ಕರೆದಿಲ್ಲ ಎಂದು ಕೇಳಲು ಆಗುತ್ತಾ? ಆಹಿಂದ ಸಂಘಟನೆ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ದಿವಾಳಿಯಾಗಿಲ್ಲ
ಇನ್ನೂ ಆರ್ಥಿಕ ಇಲಾಖೆಯ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್ಥಿಕ ಇಲಾಖೆ ಸರ್ಕಾರ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಿಲ್ಲ. ಬಜೆಟ್ ನಲ್ಲಿ ಏನು ಘೋಷಣೆ ಮಾಡಿದ್ದೇವೆ ಅಷ್ಟಕ್ಕೆ ಮಾತ್ರ ನಮ್ಮ ಬಳಿ ಹಣ ಇದೆ ಎಂದು ಹೇಳಿದ್ದಾರೆ. ಹೊಸ ಘೋಷಣೆಗಳಿಗೆ ಹಣ ಹೊಂದಿಸುವುದು ಕಷ್ಟ ಎಂದು ಹೇಳಿದೆ. ಇದನ್ನ ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತೆ. ಹೊಸ ಘೋಷಣೆ ಮಾಡುವಾಗ ಯೋಚನೆ ಮಾಡಿ ಘೋಷಿಸಿ ಎಂದು ಹೇಳಿದ್ದಾರೆ. ಅದನ್ನು ನಾವು ಗಮನಿಸುತ್ತೇವೆ. ಕೆಲವೊಂದು ಇಲಾಖೆಗಳಲ್ಲಿ ಹಣ ವೆಚ್ಚಾಗುವುದಿಲ್ಲ. ಆ ಹಣವನ್ನ ಹೊಸ ಘೋಷಣೆಗಳಿಗೆ ಬಳಸುತ್ತೇವೆ. ಆರ್ಥಿಕ ಇಲಾಖೆ ಪತ್ರದ ಅರ್ಥ ಸರ್ಕಾರ ದಿವಾಳಿಯಾಗಿದೆ ಎಂಬುದು ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನೂ ತಮ್ಮ ಮೇಲಿನ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕ್ಷಣದಲ್ಲಿ ಇಡಿಯಿಂದ ನನಗೆ ನೋಟಿಸ್ ಬರಬಹುದು. ನೋಟಿಸ್ ಬಂದೇ ಬರುತ್ತದೆ, ಬಂದಾಗ ಹೋಗಿ ಉತ್ತರ ಕೊಡುತ್ತೇನೆ. ವಿದೇಶದಲ್ಲಿ ನಾವು ಹಣ ಹೂಡಿಕೆ ಮಾಡಿದ್ದೇವೊ ಇಲ್ಲವೊ ಎಂಬುದನ್ನ ನಾನು ಇಲ್ಲಿ ಮಾತನಾಡುವುದಿಲ್ಲ, ಇಡಿ ಮುಂದೆ ಉತ್ತರ ಕೊಡುತ್ತೇನೆ. ಯಾವುದೋ ಕಮಿಷನ್ ವಿಚಾರಕ್ಕೆ ದಾಳಿಯಾಗಿದೆಯೋ ಬೇರೆ ವಿಚಾರಕ್ಕೆ ದಾಳಿಯಾಗಿದೆಯೋ ಅದನ್ನ ಇಡಿಗೆ ಹೇಳುತ್ತೇನೆ ಎಂದಿದ್ದಾರೆ.

ಇಡಿಯದ್ದು ಸಂಪೂರ್ಣ ರಾಜಕೀಯ ದಾಳಿ
ಇಡಿಯದ್ದು ಸಂಪೂರ್ಣವಾಗಿ ರಾಜಕೀಯ ದಾಳಿ. ಕಳೆದ 14 ವರ್ಷಗಳಿಂದ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಮೇಲೆ ಒಂದೇ ಒಂದು ಇಡಿ ದಾಳಿಯೂ ಆಗಿಲ್ಲ. ನನ್ನ ಮೇಲೆ ಯಾರೇ ದೂರು ಕೊಟ್ಟಿರಲಿ ಅದು ಪ್ರಶ್ನೆ ಅಲ್ಲ. ಆದ್ರೆ ಇದು ರಾಜಕೀಯವಾಗಿ ಮಾಡಿರುವ ದಾಳಿ. ಯಾರು ದೂರು ಕೊಟ್ಟಿದ್ದಾರೆ ಏನು ಹಿನ್ನಲೆ ಎಂಬುದನ್ನ ಗಮನಿಸುತ್ತಿದ್ದೇನೆ. ಎಲ್ಲವೂ ನನಗೆ ಗೊತ್ತಾಗುತ್ತಿದೆ, ಇಡಿ ದಾಳಿಯಿಂದ ನಾನೇನು ಮಾನಸಿಕವಾಗಿ ಕುಂದಿಲ್ಲ. ಎಲ್ಲವನ್ನೂ ನಾನು ರಾಜಕೀಯವಾಗಿ ಹೆದರಿಸುತ್ತೇನೆ ಎಂದಿದ್ದಾರೆ ಜಾರಕಿಹೊಳಿ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
11 ದಿನಗಳ ಸಂಭ್ರಮಕ್ಕೆ ಭಾವಪೂರ್ಣ ತೆರೆ; ಕಣ್ಣೀರಲ್ಲೇ ಗಣೇಶನಿಗೆ ವಿದಾಯ ಹೇಳಿದ ಬೆಳಗಾವಿಕೆ.ಆರ್‌ ಪೇಟೆ ಪುರಸಭೆಯ 18,093 ರೂ. ಗಳ ಚೆಕ್‌ ಬೌನ್ಸ್; ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕರಲ್ಲಿ ಆತಂಕ!ಯುವಕನ ಬ್ಲ್ಯಾಕ್ ಮೇಲ್‌ಗೆ ಹೆದರಿ ಗೃಹಿಣಿ ಆತ್ಮಹತ್ಯೆಆಂಟಿ ಖಾಸಗಿ ಫೋಟೋ ಇಟ್ಕೊಂಡು 9 ಲಕ್ಷ ಸುಲಿಗೆ ಆರೋಪ – ಟ್ಯಾಟೂ ಅರ್ಜುನ್‌ ವಿರುದ್ಧ FIRಚುನಾವಣಾ ಆಯೋಗದ ಪರ ಸಮರ್ಥನೆ – ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವ್ರೇ ನಮ್ಮ ಕ್ಯಾಪ್ಟನ್‌: ಸತೀಶ್‌ ಜಾರಕಿಹೊಳಿಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಮೋದಿಬಿಹಾರದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ – ಒಂದೇ ವಾರದಲ್ಲಿ 3ನೇ ಕೇಸ್‌77,360 ಬಾಕಿ ಕಟ್ಟದ್ದಕ್ಕೆ ಕರೆಂಟ್‌ ಕಟ್‌ – ಹೆಸ್ಕಾಂ ಸಿಬ್ಬಂದಿ ಮೇಲೆ ಚನ್ನರಾಜ್‌ ಹಟ್ಟಿಹೊಳಿ ಹಲ್ಲೆ ಆರೋಪ