LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

E20 ಪೆಟ್ರೋಲ್‌ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ – ನಿತಿನ್ ಗಡ್ಕರಿ ಸವಾಲು

Advertisement

ನವದೆಹಲಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಟೀಕೆಗಳ ಮಧ್ಯೆ ಇ20 ಪೆಟ್ರೋಲ್‌ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸವಾಲು ಹಾಕಿದ್ದಾರೆ.

ಮಂಗಳವಾರ ವಿಕಸಿತ್ ಭಾರತ್ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ಎಥನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ಮತ್ತು ಸುಳ್ಳು ಪ್ರತಿಪಾದನೆಗಳು ಹರಡಲಾಗುತ್ತಿದೆ ಎಂದು ಆರೋಪಿಸಿದರು. 

 

ಇ20 ಪೆಟ್ರೋಲ್‌ನಿಂದ ಸಮಸ್ಯೆ ಎದುರಿಸುತ್ತಿರುವ ಯಾವ ಕಾರೂ ಇಲ್ಲ. ದೇಶದಲ್ಲಿ ಯಾವುದಾದರೂ ಕಾರು ಸಮಸ್ಯೆ ಎದುರಿಸಿದೆಯೇ? ಒಂದನ್ನಾದರೂ ಹೆಸರಿಸಿ ಎಂದು ಗಡ್ಕರಿ ಹೇಳಿದ್ದಾರೆ. ಇದು ಪ್ರಾಯೋಜಿತ ಅಭಿಯಾನವಾಗಿದೆ ಎಂದೂ ಅವರು ದೂರಿದ್ದಾರೆ. 

ಇಂಧನ ಕ್ಷಮತೆ ಕುಸಿಯುತ್ತಿದೆ. ಹಳೆಯ ವಾಹನಗಳಲ್ಲಿ ಹೊಂದಾಣಿಕೆ ಸಮಸ್ಯೆ ಉಂಟಾಗುತ್ತಿದೆ ಮತ್ತು ದೀರ್ಘಕಾಲೀನವಾಗಿ ಇಂಜಿನ್‌ಗೆ ಹಾನಿಯಾಗುತ್ತದೆ ಎಂಬ ಕಳವಳಗಳು ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ ಗಡ್ಕರಿ ಅವರ ಈ ಹೇಳಿಕೆ ಬಂದಿದೆ. 

ಇಳಿಕೆಯಾಗಿರುವ ಇಂಧನ ಕ್ಷಮತೆ, ಹಳೆಯ ವಾಹನಗಳಲ್ಲಿ ಕಂಡುಬಂದಿರುವ ಹೊಂದಾಣಿಕೆ ಸಮಸ್ಯೆ ಹಾಗೂ ಅಧಿಕ ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡುವುದರಿಂದ, ಇಂಜಿನ್ ಮೇಲೆ ಆಗಲಿರುವ ದೀರ್ಘಕಾಲೀನ ಪರಿಣಾಮಗಳ ಕುರಿತು ಕಳವಳ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. 

ಕಚ್ಚಾ ತೈಲ ಆಮದನ್ನು ಕಡಿತಗೊಳಿಸುವ, ಇಂಗಾಲ ಹೊರ ಸೂಸುವಿಕೆಯನ್ನು ತಗ್ಗಿಸುವ ಹಾಗೂ ದೇಶೀಯ ಕೃಷಿಗೆ ಬೆಂಬಲ ಒದಗಿಸುವ ತನ್ನ ಕಾರ್ಯಯೋಜನೆಯ ಭಾಗವಾಗಿ ಈಗಾಗಲೇ ಭಾರತ ಇ20 ಇಂಧನ ಎಂದೇ ಕರೆಯಲಾಗುವ ಪೆಟ್ರೋಲ್‌ಗೆ ಶೇ. 20ರಷ್ಟು ಎಥನಾಲ್ ಮಿಶ್ರಣಗೊಳಿಸುವ ಗುರಿಯನ್ನು ಸಾಧಿಸಿದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
E20 ಪೆಟ್ರೋಲ್‌ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ – ನಿತಿನ್ ಗಡ್ಕರಿ ಸವಾಲುವೈದ್ಯರ ಮೇಲೆ ಹಲ್ಲೆ – ಶಿವಸೇನೆ ಕಾರ್ಪೊರೇಟರ್ ಸೇರಿ ಆರು ಮಂದಿ ವಿರುದ್ಧ FIR, ಮೂವರ ಬಂಧನ11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಬಂಗಾಳ ಪೊಲೀಸರ ಎನ್‌ಕೌಂಟರ್‌ಗೆ ಆರೋಪಿ ಬಲಿಸಿ.ಟಿ. ರವಿ ಮೊದಲು ವಾಯ್ಸ್ ಸ್ಯಾಂಪಲ್ ಕೊಟ್ಟು ಆಮೇಲೆ ಮಾತನಾಡಲಿ: ಪ್ರಿಯಾಂಕ್ ತಿರುಗೇಟುವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಪೋಷಕರಿಂದ ವಾರ್ಡನ್‌ಗೆ ಥಳಿತಮದ್ವೆಯಾದ ಐದೇ ತಿಂಗಳಿಗೆ ಹೆಲ್ಮೆಟ್‌ನಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿಚನ್ನಪಟ್ಟಣ ತಹಶೀಲ್ದಾರ್ ಮೇಲಿನ ಹಲ್ಲೆ ಪ್ರಕರಣ ಪರಿಶೀಲನೆ; ಕ್ರಮದ ಭರವಸೆ ನೀಡಿದ ಪ್ರಿಯಾಂಕ್ ಖರ್ಗೆಉಗ್ರ ಸಂಘಟನೆಗಳ ಜೊತೆ ನಂಟು – ಬಳ್ಳಾರಿಯ ಅಬ್ದುಲ್ ಸಲಾಮ್ ಮನೆ ಮೇಲೆ ಎನ್‌ಐಎ ದಾಳಿನಡೆದುಕೊಂಡು ಹೋಗುತ್ತಿದ್ದಾಗ ಲಾರಿ ಡಿಕ್ಕಿ – ವಿದ್ಯಾರ್ಥಿನಿ ಗ್ರೇಟ್ ಎಸ್ಕೇಪ್ಅಂಬುಲೆನ್ಸ್‌ಗೆ ದಾರಿ ಬಿಡದೆ ವೀಲಿಂಗ್ – 6 ಅಪ್ರಾಪ್ತರು ಪೊಲೀಸರ ವಶಕ್ಕೆ