LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವ ಚಾಂಪಿಯನ್‌ಶಿಪ್‌ಗೆ ಬೆಳಗಾವಿಯ ಇಬ್ಬರು ಸ್ಕೇಟರ್‌ಗಳ ಆಯ್ಕೆ

Advertisement

ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್‌ಗಳಾದ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಭುವನೇಶ್ವರ (ಒಡಿಶಾ) ಹಾಗೂ ಮೊಹಾಲಿ (ಚಂಡೀಗಢ)ದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ಉತ್ತಮ ಪ್ರದರ್ಶನ ನೀಡಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ದೇವೇನ್ ಬಾಮಣೆ ಅವರು ಕೆಎಲ್‌ಎಸ್ ಜಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸೈರಾಜ್ ಮೆಂಡಕೆ ಅವರು ಆರ್‌ಎಲ್‌ಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇಬ್ಬರೂ ಕಳೆದ 12 ವರ್ಷಗಳಿಂದ ಸ್ಕೇಟಿಂಗ್‌ನಲ್ಲಿ ನಿರಂತರ ತರಬೇತಿ ಪಡೆಯುತ್ತಿದ್ದು, ಹಗಲು-ರಾತ್ರಿ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ.

ಆಯ್ಕೆ ಪರೀಕ್ಷೆಯಲ್ಲಿ ಸ್ಪೀಡ್ ಸ್ಲಾಲಂ ಹಾಗೂ ಆಲ್ಪೈನ್ ವಿಭಾಗಗಳಲ್ಲಿ ಸ್ಪರ್ಧಿಸಿ ಗಮನಾರ್ಹ ಪ್ರದರ್ಶನ ನೀಡಿದರು.

ಅಕ್ಟೋಬರ್ 2ರಿಂದ 18ರವರೆಗೆ ದಕ್ಷಿಣ ಅಮೆರಿಕಾದ ಪರಾಗ್ವೆ ನಗರದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದೇವೇನ್ ಮತ್ತು ಸೈರಾಜ್ ಅವರು ಭಾರತವನ್ನು ಪ್ರತಿನಿಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ದೇವೇನ್ ಅವರು ಸ್ಕೇಟಿಂಗ್ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಸೈರಾಜ್ ಅವರು ಸೂರ್ಯಕಾಂತ ಹಿಂಡಲಗೇಕರ, ಮಂಜುನಾಥ ಮಂಡೋಳಕರ, ಯೋಗೇಶ್ ಕುಲಕರ್ಣಿ, ವಿಠ್ಠಲ ಗಗನೆ ಹಾಗೂ ಸೋಹಂ ಹಿಂಡಲಗೇಕರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈ ಸಾಧನೆಗೆ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ ಕಾರ್ಯದರ್ಶಿ ಇಂದುಧರ ಸೀತಾರಾಮ, ಆರ್‌ಎಲ್‌ಎಸ್ ಕಾಲೇಜಿನ ಪ್ರಾಚಾರ್ಯ ವಿಶ್ವನಾಥ ಕಾಮಗೋಳ, ಕೆಎಲ್‌ಎಸ್ ಜಿಐಟಿ ಕಾಲೇಜಿನ ಪ್ರಾಚಾರ್ಯ ಡಾ. ವಿಜಯ್ ಅಥವಾಳೆ, ದಿಂಗಂಬರ್ ಕುಲಕರ್ಣಿ, ಡಾ. ಜಾರ್ಜ್ ರೋಡ್ರಿಗಸ್, ಬೆಳಗಾವಿ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್‌ ಅಧ್ಯಕ್ಷ ಉಮೇಶ್ ಕಳಘಟಗಿ, ಪ್ರಸಾದ್ ತೆಂಡೂಲ್ಕರ್, ವಿನೋದ್ ಬಾಮಣೆ, ಜ್ಯೋತಿ ಬಾಮಣೆ, ಶ್ರೀಕಾಂತ್ ಮೆಂಡಕೆ ಹಾಗೂ ಅರ್ಚನಾ ಮೆಂಡಕೆ ಅವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾ ಆಯೋಗದ ಕಚೇರಿ ಮೆಟ್ಟಿಲಲ್ಲೇ ಸಿಎಂ, ಸಚಿವರ ಧರಣಿ; ಎಫ್‌ಐಆರ್‌ಗೆ ಪಟ್ಟುಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡೇ 40 ಸಾವಿರ ಕಿಮೀ ಪಾದಯಾತ್ರೆ ಮಾಡಿದ ಗೀತಾ ಮಾತಾಜಿ!ನೈಸ್‌ ವಿಚಾರವಾಗಿ ಡಿಕೆಶಿ ಭೇಟಿಯಾಗಿದ್ದು ಸತ್ಯ – ಸಿದ್ದಲಿಂಗ ಮಹಾಸ್ವಾಮಿಗಳಿಂದ ಸ್ಪಷ್ಟನೆಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ: ಛಲವಾದಿಸಚಿವ ಬಾಲಕೃಷ್ಣ ನಕಲಿ ದಾಖಲೆ ಸೃಷ್ಟಿಸಿ 36 ಎಕರೆ ಜಾಗ ಕಬಳಿಸಿದ್ದಾರೆ: ಮಂಜುನಾಥ್ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ; ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆ, ಹಲವೆಡೆ ಹಾನಿರೈತರಿಗೆ 25 ಸಾವಿರ ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ಭಾಗಿ- ಛಲವಾದಿವಿಧಾನಸೌಧದ ಮೆಟ್ಟಿಲ ಮೇಲೆ ಉರ್ದು ಭಾಷಾ ಹಬ್ಬ ಇಲ್ಲ: ಸಿಎಂ ಕಚೇರಿಲಾರಿ, KSRTC ಬಸ್‌ ನಡುವೆ ಮುಖಾಮುಖಿ ಡಿಕ್ಕಿ – ಮಗು ಸಾವು, 10 ಮಂದಿಗೆ ಗಾಯ