LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ – 8 ಜನರ ವಿರುದ್ಧ FIR, ಖಾಕಿ ಹದ್ದಿನ ಕಣ್ಣು

Advertisement
Advertisement
Advertisement

ಬೆಂಗಳೂರು: ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಬಸವನಗುಡಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣ ಸಂಬಂಧ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಬುಧವಾರ ಈದ್ ಮಿಲಾದ್ ಹಬ್ಬವಿದ್ದು, ಬೆಂಗಳೂರಿನ ನಾನಾ ಭಾಗಗಳಿಂದ ಮುಸ್ಲಿಮರು ಮೆರವಣಿಗೆಗಳಲ್ಲಿ ಬಂದು ಖುದ್ದೂಸ್ ಸಾಬ್ ಈದ್ಗಾ ಮೈದಾನಕ್ಕೆ ಸೇರುತ್ತಿದ್ದರು. ಬಸವನಗುಡಿಯ ಕೆ.ಆರ್ ರಸ್ತೆಯಲ್ಲಿ ಬನಶಂಕರಿ ಕಡೆಯಿಂದ ಮೆರವಣಿಗೆ ಮಾಡುತ್ತ ಬರುತ್ತಿದ್ದ ಗುಂಪು ಪುನೀತ್ ಕೆರೆಹಳ್ಳಿ ಆಫೀಸ್ ಬಳಿ ಬಂದಾಗ ಜೋರಾಗಿ ಘೋಷಣೆ ಕೂಗೋಕೆ ಶುರು ಮಾಡಿದೆ. ಈ ವೇಳೆ ಪುನೀತ್ ಕೆರೆಹಳ್ಳಿ & ಟೀಂ ಜೈ ಶ್ರೀರಾಮ್, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಆಗ ಎರಡು ಗುಂಪುಗಳ ನಡುವೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಿರಿಕ್ ಆಗಿದೆ. 

ಹಿಂದೂ-ಮುಸ್ಲಿಮರ ಗಲಾಟೆಯಲ್ಲಿ ಹಿಂದೂ ಕರ‍್ಯರ‍್ತ ಪುನೀತ್ ಗೌಡ ತಲೆಗೆ ಗಂಭೀರ ಹಲ್ಲೆ ನಡೆಸಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಪೋಲಿಸರು ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪುನೀತ್ ಕೆರೆಹಳ್ಳಿ ಗ್ಯಾಂಗ್ ಹಲ್ಲೆ ಮಾಡಿದವರನ್ನ ಬಂಧಿಸಬೇಕು ಎಂದು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪೋಲಿಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. 

ಗಲಭೆಯಲ್ಲಿ ಭಾಗಿಯಾಗಿದ್ದ ಎರಡು ಗುಂಪುಗಳ ವಿರುದ್ಧ ಮೂರು ಎಫ್‌ಐಆರ್ ದಾಖಲಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. 

ಇನ್ನೂ ಮುಂಜಾಗ್ರತಾ ಕ್ರಮವಾಗಿ ಘಟನೆ ನಡೆದ ಸ್ಥಳದಲ್ಲಿ ಗಿರಿನಗರ, ಜೆಜೆ ನಗರ ಶಂಕರಪುರ, ಹನುಮಂತ ನಗರ ಹಾಗೂ ಬಸವನಗುಡಿ ಠಾಣಾ ಇನ್ಸ್ಪೆಕ್ಟರ್‌ಗಳು ಸೇರಿದಂತೆ ಮೂರು ಕೆಎಸ್‌ಆರ್‌ಪಿ ತುಕಡಿ ಹಾಗೂ ನೂರಕ್ಕೂ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉಡುಪಿ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ವೇಗ; ಬೀಚ್‌ಗಳು, ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತುಸಿಇಟಿ ಪ್ರವೇಶ ಮತ್ತು ಸೀಟು ರದ್ದತಿಗೆ ಆ.29 ಕೊನೆ ದಿನ: ಕೆಇಎRSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರು ಅಮಾನತು180 ಕೋಟಿ ಹೈಕಮಾಂಡ್‌ಗೆ ಹೋಗಿರೋದು ಬಾಯಿಬಿಟ್ರೆ ಕಷ್ಟ ಅಂತ ನಾಗೇಂದ್ರನನ್ನ ಕ್ಯಾಬಿನೆಟ್‌ಗೆ ತಗೊಂಡ್ರಾ? – ಅಶೋಕ್ ಪ್ರಶ್ನೆನಾಡಗೀತೆ ಧಾಟಿ, ಅವಧಿ ನಿಗದಿ ವಿಚಾರ – ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರಅಸ್ಸಾಂನಲ್ಲಿ 168 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ಡ್ರಗ್ ಪೆಡ್ಲರ್ ಅರೆಸ್ಟ್ಅನೈತಿಕ ಸಂಬಂಧದ ಶಂಕೆ; ಮಹಿಳೆಯ ಕುಟುಂಬಸ್ಥರಿಂದ ವ್ಯಕ್ತಿಯ ಭೀಕರ ಕೊಲೆಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಯುವಕ ಆತ್ಮಹತ್ಯೆಬೆಂಗಳೂರಿನ 11 ಮಂದಿ ಸೇರಿ ಕರ್ನಾಟಕದ 13 ಮಂದಿ ವಿವರ ಲಭ್ಯರಾಜ್ಯದ 101 ತಾಲೂಕುಗಳಲ್ಲಿ ಬರ; ಸರ್ಕಾರ ಅಧಿಕೃತ ಘೋಷಣೆ – 1 ಲಕ್ಷದವರೆಗೆ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹ