LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್: ಯುವಕನಿಗೆ ಗಾಯ, ಆಸ್ಪತ್ರೆಗೆ ದಾಖಲು

Advertisement
Advertisement
Advertisement

ಬಾಗಲಕೋಟೆ: ಜೇಬಿನಲ್ಲಿಟ್ಟುಕೊಂಡಿದ್ದ ಪವರ್ ಬ್ಯಾಂಕ್  ಏಕಾಏಕಿ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಗಾಯಗೊಂಡಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಸಿದ್ದು ಸಾಳೊಂಕಿ (21) ಗಾಯಗೊಂಡ ಯುವಕ. ಜಮಖಂಡಿ ನಗರದ ಬಸ್ ನಿಲ್ದಾಣದ ಬಳಿಯ ಎಟಿಎಂ ಹತ್ತಿರ ಈ ಘಟನೆ ಸಂಭವಿಸಿದೆ. 

ತನ್ನ ಜೇಬಿನಲ್ಲಿ ಪವರ್ ಬ್ಯಾಂಕ್ ಇಟ್ಟುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ, ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದ ತೀವ್ರತೆಗೆ ಪವರ್ ಬ್ಯಾಂಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಯುವಕ ಧರಿಸಿದ್ದ ಟಿ-ಶರ್ಟ್ ಹಾಗೂ ಪ್ಯಾಂಟ್‌ಗೂ ಬೆಂಕಿ ವ್ಯಾಪಿಸಿದೆ.

 

ಪರಿಣಾಮವಾಗಿ ಯುವಕನ ಕಾಲು, ಹೊಟ್ಟೆ ಹಾಗೂ ಸೊಂಟದ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆತನನ್ನು ರಕ್ಷಿಸಿ ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಗಂಭೀರ ಪ್ರಾಣಾಪಾಯ ಸಂಭವಿಸಿಲ್ಲವಾಗಿದ್ದು, ಯುವಕ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
NIA ची देशभरात छापेमारी, पुणे शहरातही शिजत होता भयंकर कट? दहशतवाद प्रकरणात…ಐಪಿಸಿ ಕಂಪನಿಯಿಂದ 83 ಸಾವಿರ ಕೋಟಿ ರೂ. ಹೂಡಿಕೆಗೆ ಒಲವು: ಎಂ.ಬಿ ಪಾಟೀಲ್ಹಾವೇರಿ ಜಿಲ್ಲೆಗೆ 2 ತಿಂಗಳು ಪ್ರಮೋದ್ ಮುತಾಲಿಕ್ ಪ್ರವೇಶ ನಿರ್ಬಂಧಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ – ಡಿಕೆಶಿ ಘೋಷಣೆಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆಇನ್‌ಸ್ಟಾ ಪ್ರೇಯಸಿಗೆ ಎಂಗೇಜ್‌ಮೆಂಟ್; ಆರನೇ ಮಹಡಿಯಿಂದ ಜಿಗಿಯಲು ಮುಂದಾದ ಅಪ್ರಾಪ್ತಕೋಲಾರದಲ್ಲಿ 1,71,034 ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ: ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ರಾಜ್ಯದ 224 ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಶಿರಪುರ ಮಾದರಿ: ಅಜಯ್ ಸಿಂಗ್ಅವ್ರು IAS ಮಾಡಿದ್ರೆ ಜನ ನನ್ನನ್ನು 6 ಬಾರಿ ಶಾಸಕನನ್ನಾಗಿ ಮಾಡಿದ್ದಾರೆ: ಹಾಸನ ಡಿಸಿ ವಿರುದ್ಧ ರೇವಣ್ಣ ಕಿಡಿಕಂಟ್ರಾಕ್ಟರ್ ಆಗಿ ಅದಾನಿ ಸಿಎಂ ಭೇಟಿಯಾಗಿದ್ದಾರೆ: ಪ್ರಿಯಾಂಕ್ ಖರ್ಗೆ