LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗ್ಳೂರಲ್ಲಿ ಪೊಲೀಸ್ ಕಮಿಷನರ್ ನೈಟ್ ರೌಂಡ್ಸ್ – 8000 ಸಿಬ್ಬಂದಿಯಿಂದ ಪಬ್‌ಗಳ ಮೇಲೆ ದಾಳಿ

Advertisement

ಬೆಂಗಳೂರು: ನಗರದಲ್ಲಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಪಬ್‌ಗಳ ಮೇಲೆ ದಾಳಿ ನಡೆದಿದೆ. ರಾತ್ರಿ ವೇಳೆ ಪಬ್‌ , ಕ್ಲಬ್, ರೆಸ್ಟೋರೆಂಟ್‌ಗಳ ಮೇಲೆ ದಾಳಿ  ನಡೆಸಿ ಪರಿಶೀಲನೆ ನಡೆಸಲಾಗಿದೆ.

ಅಪ್ರಾಪ್ತ ಮಕ್ಕಳ ಬಳಕೆ, ಅವಧಿ ಮೀರಿದ ಬಳಿಕ ವ್ಯವಹಾರ ಹಾಗೂ ಅಕ್ರಮ ಚಟುವಟಿಕೆಗಳ ಪತ್ತೆಗೆ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ನಗರ ಪೊಲೀಸ್ ಆಯುಕ್ತರ ಜೊತೆ ಸಿಸಿಬಿ ಹಾಗೂ ಎಲ್ಲಾ ವಿಭಾಗದ ಡಿಸಿಪಿ ಹಾಗೂ ಇತರೆ 8000 ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. 

ಆನಂದ್ ರಾವ್ ಸರ್ಕಲ್, ಕೋರಮಂಗಲದಲ್ಲಿ ಬಾರ್‌ಗಳಿರುವ ರಸ್ತೆಗಳಲ್ಲೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾರ್, ಕ್ಲಬ್, ರೆಸ್ಟೋರೆಂಟ್ ಕ್ಲೋಸ್ ಮಾಡಿ ಗ್ರಾಹಕರನ್ನು ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ.

ಪಾರ್ಟಿ ಮೂಡ್‌ನಲ್ಲಿದ್ದ ಕಪಲ್ಸ್‌ಗೆ ಶಾಕ್
ಪೊಲೀಸ್ ಆಯುಕ್ತರು, ಸಿಸಿಬಿ ಪೊಲೀಸರ ಎಂಟ್ರಿಯಿಂದ ಪಾರ್ಟಿಗೆ ಬಂದಿದ್ದ ದಂಪತಿ ಗಲಿಬಿಲಿಯಾಗಿದ್ದಾರೆ. ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪಬ್‌ನಿಂದ ಹೊರಗಡೆ ಬಿಡದೇ ಮಾಹಿತಿ ಪಡೆದ ಬಳಿಕ ಪೊಲೀಸರು ಒಬ್ಬೊಬ್ಬರನ್ನಾಗಿ ಹೊರಗೆ ಕಳುಹಿಸಿದ್ದಾರೆ.

ಲೇಡಿಸ್ ಪಬ್‌ಗಳ ಮೇಲೂ ದಾಳಿ
ಬ್ರಿಗೇಡ್ ರಸ್ತೆಯಲ್ಲಿರುವ ಲೇಡಿಸ್‌ ಪಬ್‌ಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಅಪ್ರಾಪ್ತರಿಗೆ ಅವಕಾಶ ಸೇರಿದಂತೆ ನಿಯಮ ಉಲ್ಲಂಘನೆಗಳ ಬಗ್ಗೆ ಹಾಗೂ ಅಪ್ರಾಪ್ತ ಹೆಣ್ಣು ಮಕ್ಕಳ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಲಾಯಿತು. ಡ್ರಂಕ್ & ಡ್ರೈವ್ ಸೇರಿದಂತೆ ಇತರೆ ಅಪರಾಧ ಚಟುವಟಿಕೆ ಪತ್ತೆ ಕಾರ್ಯಾಚರಣೆ ಸಹ ನಡೆಸಲಾಗಿದೆ. ಬಾರ್‌ಗಳಲ್ಲಿ ಅಕ್ರಮ ಚಟುವಟಿಕೆ ಹಾಗೂ ಅಪ್ರಾಪ್ತರಿಂದ ಮಧ್ಯಸೇವನೆಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ಸರ್ಕಾರವೂ ಬೀಳುತ್ತೆ, ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಲಿದೆ: CJP ಪ್ರತಿಭಟನೆ ಬೆನ್ನಲ್ಲೇ ರಾಹುಲ್‌ ಗಾಂಧಿ ಪ್ರತಿಕ್ರಿಯೆಮಹಾರಾಷ್ಟ್ರ | ಕಾಲುಗಳಿಗೆ ಸರಪಳಿ, ಬೀಗ ಬಿಗಿದ ಸ್ಥಿತಿಯಲ್ಲಿ ದಂಪತಿಯ ಮೃತದೇಹ ಪತ್ತೆಬೆಂಗ್ಳೂರಲ್ಲಿ ಪೊಲೀಸ್ ಕಮಿಷನರ್ ನೈಟ್ ರೌಂಡ್ಸ್ – 8000 ಸಿಬ್ಬಂದಿಯಿಂದ ಪಬ್‌ಗಳ ಮೇಲೆ ದಾಳಿಭಾಲ್ಕಿಯ ಸಹಕಾರಿ ಬ್ಯಾಂಕ್ ಮೇಲೆ ಇಡಿ ದಾಳಿ ಅಂತ್ಯರೇಣುಕಾಸ್ವಾಮಿ ಕೊಲೆ ಪ್ರಕರಣ – ಪಿಎಸ್‌ಐ ವಿನಯ್‌ಗೆ ಸಂಕಷ್ಟ? – ತನಿಖಾ ತಂಡದ ವಿರುದ್ಧವೇ ಇಲಾಖಾ ತನಿಖೆಮಸೀದಿ ಛಾವಣಿ ಮೇಲೆ ನಿಂತು ಬಿಯರ್‌ ಕುಡಿದ ಕಾನ್ಸ್‌ಟೇಬಲ್‌ – ವಿಡಿಯೋ ವೈರಲ್‌ ಬೆನ್ನಲ್ಲೇ ಸಸ್ಪೆಂಡ್‌ಮಂಡ್ಯ ಎಎಸ್‌ಪಿ ಸಿ.ಇ.ತಿಮ್ಮಯ್ಯ ನಿಧನ ಲಕ್ಕುಂಡಿ ಗ್ರಾಮ ಪಂಚಾಯತ ಮಾಜಿ ಸದಸ್ಯನ ಭೀಕರ ಕೊಲೆಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆದೇಶದಲ್ಲಿ ಅರಾಜಕತೆ ಸೃಷ್ಟಿಸಲು ಇಂಡಿ ಒಕ್ಕೂಟ, ಸಿಜೆಪಿ ಸಂಚು: ನಿತಿನ್ ನಬೀನ್‌ ವಾಗ್ದಾಳಿ