LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲೋಕಾಯುಕ್ತರಿಂದ ಫೋನ್ ಪೇ ಪರಿಶೀಲನೆ, ಅಧಿಕಾರಿಗಳು ತಬ್ಬಿಬ್ಬು

Advertisement

ಚಿಕ್ಕೋಡಿ: ಚಿಕ್ಕೋಡಿ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಪುರಸಭೆ ಅಧಿಕಾರಿಗಳ ವೇತನ ಹಾಗೂ ಹಣಕಾಸಿನ ವಹಿವಾಟಿನ ಕುರಿತು ಫೋನ್ ಪೇ ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ತಬ್ಬಿಬ್ಬಾದರು.

ಈ ವೇಳೆ ಅಧಿಕಾರಿಗಳ ಫೋನ್‌ಪೇ ವಹಿವಾಟನ್ನೂ ಪರಿಶೀಲಿಸಿದ ಉಪಲೋಕಾಯುಕ್ತರು, ಖಾತೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಣ ಜಮೆಯಾಗಿರುವುದರ ಕುರಿತು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.ಒಬ್ಬ ಅಧಿಕಾರಿ, ನನ್ನ ಮಗಳು ಹಣ ಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಮತ್ತೊಬ್ಬ ಅಧಿಕಾರಿಯ ಖಾತೆಯಲ್ಲಿಯೂ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಣ ಒಳಬಂದಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದ್ದು, ಈ ಕುರಿತು ಉಪಲೋಕಾಯುಕ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳ ಆದಾಯ ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಕಳೆದ ಎರಡು ವರ್ಷಗಳ ಎಲ್ಲ ಪುರಸಭೆ ಅಧಿಕಾರಿಗಳ ವೇತನದ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಯಲ್ಲಿ ನಿಗೂಢ ಸ್ಫೋಟ – ಗೋಡೆ ಕುಸಿದು ಅಡುಗೆ ಸಿಬ್ಬಂದಿಗೆ ಗಾಯಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳಿಗೆ 8 ಸಾವಿರ ಕೋಟಿ ನಷ್ಟ1 ಲಕ್ಷ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಗ್ನಿಶಾಮಕ ಅಧಿಕಾರಿರಾಜ್ಯದ 50 ಲಕ್ಷ ರೈತರಿಗೆ 2,500 ಇನ್‌ಪುಟ್ ಸಬ್ಸಿಡಿ: ಪರಮೇಶ್ವರ್ ಘೋಷಣೆಸಾವಿರಾರು ಮತದಾರರ ಹೆಸರು ತೆಗೆಯಲು ಅಭಯ್ ಪಾಟೀಲ್ ಪತ್ರ: ಬಂಧನಕ್ಕೆ ಹರಿಪ್ರಸಾದ್ ಆಗ್ರಹಲೋಕಾಯುಕ್ತರಿಂದ ಫೋನ್ ಪೇ ಪರಿಶೀಲನೆ, ಅಧಿಕಾರಿಗಳು ತಬ್ಬಿಬ್ಬುದ್ವಿಚಕ್ರ ವಾಹನಕ್ಕೆ ಸಿಮೆಂಟ್ ಲಾರಿ ಡಿಕ್ಕಿ – ವಿದ್ಯಾರ್ಥಿನಿ ದಾರುಣ ಸಾವುಪರಪ್ಪನ ಅಗ್ರಹಾರ ಜೈಲಿನ ವಾರ್ಡರ್‌ನಿಂದ ಹಲ್ಲೆ – ಡಾಬಾ ಮಾಲೀಕ ಸಾವುತಮಿಳುನಾಡಿಗೆ ಕಾವೇರಿ ನೀರು – ಸರ್ಕಾರದಿಂದ ನ್ಯಾಯಾಲಯದಲ್ಲಿ ಮೇಲ್ಮನವಿ: ಸಿಎಂ ಡಿಕೆಶಿಚೆನ್ನೈ – ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ; ಮೂವರು ದುರ್ಮರಣ