LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕ್ಷಣಾರ್ಧದ ಮಳೆಗೆ ಪಣತ್ತೂರು ಅಂಡರ್‌ಪಾಸ್ ಜಲಾವೃತ- ನೀರಿನಲ್ಲಿ ತೇಲಾಡಿದ ಕಾರು

Advertisement

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪೂರ್ವ ಭಾಗದಲ್ಲಿ ಸುರಿದ ದಿಢೀರ್ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪಣತ್ತೂರು ರೈಲ್ವೆ ಅಂಡರ್‌ಪಾಸ್ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಅಂಡರ್‌ಪಾಸ್‌ನಲ್ಲಿ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ಕಾರೊಂದು ನೀರಿನಲ್ಲಿ ತೇಲಾಡಿದ ಆತಂಕಕಾರಿ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲವೇ ಗಂಟೆಗಳ ಕಾಲ ಅಬ್ಬರಿಸಿದ ಮಳೆಗೆ ಅಂಡರ್‌ಪಾಸ್ ಕೆರೆಯಂತಾಗಿ ಮಾರ್ಪಟ್ಟಿದೆ. ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲದಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ.

ಅಂಡರ್‌ಪಾಸ್‌ನಿಂದ ನೀರು ಸರಾಗವಾಗಿ ಹೊರಹೋಗಲು ಈ ಹಿಂದೆ ಸಣ್ಣ ಚರಂಡಿ ಹಾಗೂ ಪೈಪ್‌ಲೈನ್ ಅಳವಡಿಕೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಕಾಮಗಾರಿ ನೆಪದಲ್ಲಿ ಅದೇ ಪೈಪ್‌ಲೈನ್‌ಗಳ ಮೇಲೆ ರಾಶಿಗಟ್ಟಲೆ ಮಣ್ಣನ್ನು ಸುರಿದು ಮುಚ್ಚಲಾಗಿದೆ. ಮಣ್ಣಿನ ರಾಶಿ ಬಿದ್ದ ಪರಿಣಾಮ ನೀರು ಹರಿದು ಹೋಗುವ ದಾರಿ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಮಳೆ ಸುರಿದ ಕೆಲವೇ ಕ್ಷಣಗಳಲ್ಲಿ ನೀರು ಹೊರಹೋಗಲಾಗದೆ ಅಂಡರ್‌ಪಾಸ್ ಒಳಗೆ ನಿಂತು ಅವಾಂತರ ಸೃಷ್ಟಿಯಾಗಿದೆ.

ಸದ್ಯ ಅಂಡರ್‌ಪಾಸ್‌ನಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಾಹನ ಸವಾರರು ಮತ್ತು ಸ್ಥಳೀಯರು ಜಿಬಿಎ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಂಗಾರತಿ ಮಾದರಿ ಕಾವೇರಿ ಮಾತೆಗೆ ಆರತಿ; ಪೂಜೆ ನೆರವೇರಿಸಿದ ಸಿಎಂ ಡಿಕೆಶಿಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಮಂಡನೆಗೆ ಮುನ್ನ ಸರ್ವಪಕ್ಷ ಸಭೆ ನಡೆಸಿ – ಮೋದಿಗೆ 4ನೇ ಬಾರಿಗೆ ಖರ್ಗೆ ಪತ್ರಕೆಂಪೇಗೌಡ ಏರ್‌ಪೋರ್ಟ್‌ನಲ್ಲೂ ಭಿಕ್ಷಾಟನೆ ಕಾಟ; ಇಬ್ಬರ ಬಂಧನಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು3 ಲಕ್ಷ ಲಂಚ ಪಡೆಯುವಾಗ ʻಲೋಕಾʼ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಎಸ್‌ಐಟಿ ತನಿಖೆಯಾಗಲಿ: ಪ್ರಹ್ಲಾದ್ ಜೋಶಿ ಆಗ್ರಹಪಿಜಿಸಿಇಟಿ ಫಲಿತಾಂಶ ಪ್ರಕಟ, ಶುಲ್ಕ ಕಟ್ಟಲು ಅ.19 ಕೊನೆ ದಿನ: ಕೆಇಎರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ – ಹೊಸ ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ: ಸಿಎಂಹಾವು ಕಚ್ಚಿ ಎರಡು ವರ್ಷದ ಮಗು ದುರ್ಮರಣನೆಲಮಂಗಲ ಹೆದ್ದಾರಿಯಲ್ಲಿ ಹಿಟ್‌ & ರನ್‌ಗೆ ಕೇರಳದ ಯುವತಿ ಬಲಿ