ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಐಆರ್ ಮೊದಲ ಹಂತ ಮುಕ್ತಾಯ ಆಗಿದೆ. ಈಗ ಮತ್ತೊಂದು ಹಂತದ ಪ್ರಕ್ರಿಯೆಗೆ ಮುಂದಾಗಿದ್ದು, ಮ್ಯಾಪಿಂಗ್ ಆಗದ ಗೊಂದಲಮಯ ಆಗಿರುವ ಮತದಾರರಿಗೆ ನೋಟಿಸ್ ನೀಡಲಿದ್ದಾರೆ.
ಒಟ್ಟು 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ ಅಂತಾ ಗುರುತು ಮಾಡಲಾಗಿದ್ದು, ಈ ಪೈಕಿ 43,84 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ಈ ಮತದಾರರು ಗುರತು, ಪೌರತ್ವ ಮತ್ತು ಜನ್ಮದಿನಾಂಕ ಸಾಬೀತುಪಡಿಸಬೇಕಿದೆ. 43.84 ಲಕ್ಷ ಮತದಾರರ ಪೈಕಿ 23.45 ಲಕ್ಷ ಮತದಾರರು ಮ್ಯಾಪಿಂಗ್ ಲಭ್ಯವಿಲ್ಲ. ಜೊತೆಗೆ ಗೊಂದಲಮಯವಾಗಿರುವ 20.35 ಲಕ್ಷ ಮತದಾರರಿಗೆ ಕೂಡ ನೋಟಿಸ್ ಬರಲಿದೆ.
ನೋಟಿಸ್‌ಗೆ ಉತ್ತರ ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಜೊತೆಗೆ ಫಾರಂ 6 ಅಡಿ ಕೂಡ ಹೆಸರು ಸೇರ್ಪಡೆಗೆ ಮಾಡಿಕೊಳ್ಳಬಹುದು. ಮನೆ ಮನೆ ಪರಿಶೀಲನೆ ಬಳಿಕ 4.46 ಕೋಟಿ ಮತದಾರರ ಹೆಸರು ಮತದಾರರು ಕರಡು ಪಟ್ಟಿಯಲ್ಲಿ ಪ್ರಕಟ ಆಗಲಿದೆ. ಬೆಂಗಳೂರಿನ 1.03 ಕೋಟಿ ಮತದಾರರ ಪೈಕಿ 56 ಲಕ್ಷ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟ ಆಗಲಿದೆ. ಉಳಿದದ್ದು ಎಎಸ್‌ಡಿಡಿಒ ಅಂತಾ ಗುರುತು ಮಾಡಲಾಗಿದೆ. 23 ಲಕ್ಷ ಮತದಾರರಿಗೆ ನೋಟಿಸ್ ಕೊಡುವ ಸಾಧ್ಯತೆ ಇದೆ.




