LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಧಾನಸೌಧದ ಮೆಟ್ಟಿಲ ಮೇಲೆ ಉರ್ದು ಭಾಷಾ ಹಬ್ಬ ಇಲ್ಲ: ಸಿಎಂ ಕಚೇರಿ

Advertisement

ಬೆಂಗಳೂರು: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಭಾಷಾ ಹಬ್ಬ ಆಯೋಜಿಸಲಾಗುತ್ತಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿಗಳ ಸಚಿವಾಲಯ  ಸ್ಪಷ್ಟವಾಗಿ ತಳ್ಳಿಹಾಕಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾವುದೇ ಸರ್ಕಾರಿಯೇತರ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಸಿಎಂ ಕಚೇರಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಮಾಧ್ಯಮಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಯಲಿದೆ ಎಂದು ಬಿಂಬಿಸುತ್ತಿರುವುದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. ಸರ್ಕಾರ ಅಂತಹ ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ.

ಹಿಂದೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ವಿಚಾರವಾಗಿ ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ವಿಧಾನಸೌಧದ ಮುಂಭಾಗದಲ್ಲೇ ಉರ್ದು ಹಬ್ಬ ಆಚರಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಪರ-ವಿರೋಧದ ತೀವ್ರ ಚರ್ಚೆ ಆರಂಭವಾಗಿತ್ತು.

ನವೆಂಬರ್ 9 ರ ‘ಉರ್ದು ದಿನಾಚರಣೆ’ಯ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಿದ್ಧತೆಗಳು ನಡೆದಿವೆ ಎನ್ನಲಾಗಿತ್ತು. ಈ ಕುರಿತು ಮಾತನಾಡಿದ್ದ ಸಚಿವ ಯು.ಟಿ. ಖಾದರ್, “ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಪ್ರಕಾರಗಳನ್ನು ರಾಜ್ಯದ ಎಲ್ಲಾ ಸಮುದಾಯಗಳಿಗೆ ಪರಿಚಯಿಸುವುದೇ ಈ ಕಾರ್ಯಕ್ರಮದ ಉದ್ದೇಶ” ಎಂದು ತಿಳಿಸಿದ್ದರು. ಆದರೆ, ಈ ಕಾರ್ಯಕ್ರಮ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿದೆ ಎಂಬ ಊಹಾಪೋಹಗಳಿಗೆ ಇದೀಗ ಸಿಎಂ ಕಚೇರಿ ಅಧಿಕೃತವಾಗಿ ತೆರೆ ಎಳೆದಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾ ಆಯೋಗದ ಕಚೇರಿ ಮೆಟ್ಟಿಲಲ್ಲೇ ಸಿಎಂ, ಸಚಿವರ ಧರಣಿ; ಎಫ್‌ಐಆರ್‌ಗೆ ಪಟ್ಟುಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡೇ 40 ಸಾವಿರ ಕಿಮೀ ಪಾದಯಾತ್ರೆ ಮಾಡಿದ ಗೀತಾ ಮಾತಾಜಿ!ನೈಸ್‌ ವಿಚಾರವಾಗಿ ಡಿಕೆಶಿ ಭೇಟಿಯಾಗಿದ್ದು ಸತ್ಯ – ಸಿದ್ದಲಿಂಗ ಮಹಾಸ್ವಾಮಿಗಳಿಂದ ಸ್ಪಷ್ಟನೆಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ: ಛಲವಾದಿಸಚಿವ ಬಾಲಕೃಷ್ಣ ನಕಲಿ ದಾಖಲೆ ಸೃಷ್ಟಿಸಿ 36 ಎಕರೆ ಜಾಗ ಕಬಳಿಸಿದ್ದಾರೆ: ಮಂಜುನಾಥ್ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ; ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆ, ಹಲವೆಡೆ ಹಾನಿರೈತರಿಗೆ 25 ಸಾವಿರ ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ಭಾಗಿ- ಛಲವಾದಿವಿಧಾನಸೌಧದ ಮೆಟ್ಟಿಲ ಮೇಲೆ ಉರ್ದು ಭಾಷಾ ಹಬ್ಬ ಇಲ್ಲ: ಸಿಎಂ ಕಚೇರಿಲಾರಿ, KSRTC ಬಸ್‌ ನಡುವೆ ಮುಖಾಮುಖಿ ಡಿಕ್ಕಿ – ಮಗು ಸಾವು, 10 ಮಂದಿಗೆ ಗಾಯ