LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ

Advertisement
ನವದೆಹಲಿ: ಹೇಜಲ್‌ವುಡ್‌, ಭುವನೇಶ್ವರ್ ಬೌಲಿಂಗ್‌ ಅಬ್ಬರ, ಸಂಘಟಿತ ಫೀಲ್ಡಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌  ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು  ತಂಡ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.‌

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 16.3 ಓವರ್‌ನಲ್ಲಿ 75 ರನ್‌ಗಳಿಸಿ ಆಲೌಟ್‌ ಆಯಿತು. 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 6.3 ಓವರ್‌ನಲ್ಲಿಯೇ 77 ರನ್‌ಗಳಿಸುವ ಮೂಲಕ ಗೆಲುವು ಸಾಧಿಸಿದೆ.

ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಗೆಲುವಿನ ಭರವಸೆಯೊಂದಿಗೆ ಆಟ ಶುರು ಮಾಡಿತು. ಜಾಕೋಬ್‌ ಬೆಥೆಲ್‌ 11 ಎಸೆತಗಳಲ್ಲಿ 20 ರನ್‌, ವಿರಾಟ್‌ ಕೊಹ್ಲಿ 15 ಎಸೆತಗಳಲ್ಲಿ 23 ರನ್‌ ಹಾಗೂ ದೇವದತ್‌ ಪಡಿಕ್ಕಲ್‌ 13 ಎಸೆತಗಳಲ್ಲಿ 34 ರನ್‌ ಗಳಿಸಿದರು. ಇನ್ನೂ 81 ರನ್‌ ಬಾಕಿಯಿರುವಾಗಲೇ ಆರ್‌ಸಿಬಿ ಭರ್ಜರಿ 9 ರನ್‌ಗಳಿಂದ ಗೆಲುವು ಸಾಧಿಸಿತು. ಡೆಲ್ಲಿ ಪರ ಬೌಲಿಂಗ್‌ ಮಾಡಿದ ಕೈಲ್‌ ಜೇಮಿಸನ್‌ 1 ವಿಕೆಟ್‌ ಪಡೆದುಕೊಂಡರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆರ್‌ಸಿಬಿಯ ಹೇಜಲ್‌ವುಡ್‌, ಭುವನೇಶ್ವರ್‌ ಮಾರಕ ಬೌಲಿಂಗ್‌ಗೆ ಡೆಲ್ಲಿ ಬ್ಯಾಟರ್‌ಗಳು ತತ್ತರಿಸಿ ಹೋದರು. ಪಂದ್ಯದ ಆರಂಭದಲ್ಲೇ ವಿಕೆಟ್‌ಗಳು ತರಗೆಲೆಯಂತೆ ಉದುರಿದವು.

ಮೊದಲ ಓವರ್‌ನಲ್ಲಿ 2ನೇ ಎಸೆತಕ್ಕೆ ಭುವಿ ಮೊದಲ ವಿಕೆಟ್‌ ಪಡೆದು ಸಂಭ್ರಮಿಸಿದರು. 2ನೇ ಓವರ್‌ನಲ್ಲಿ ಮೊದಲೆರಡು ಎಸೆತಕ್ಕೆ ಕೆಎಲ್‌ ರಾಹುಲ್‌, ಸಮೀರ್‌ ರಿಜ್ವಿ ವಿಕೆಟ್‌ಗಳನ್ನು ಹೇಜಲ್‌ವುಡ್‌ ಬೀಳಿಸಿ ಅಬ್ಬರಿಸಿದರು. ತಂಡದ ಮೊತ್ತ 43 ರನ್‌ ಇದ್ದಾಗಲೇ 7 ವಿಕೆಟ್‌ ಕಳೆದುಕೊಂಡು ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ಈ ನಡುವೆ ಅಭಿಷೇಕ್ ಪೊರೆಲ್ 30, ಡೇವಿಡ್‌ ಮಿಲ್ಲರ್‌ 19, ಕೈಲ್ ಜೇಮಿಸನ್ 12 ರನ್‌ಗಳ ನಿಧಾನಗತಿಯ ಆಟದಿಂದ ಡೆಲ್ಲಿ ಅರ್ಧಶತಕ ರನ್‌ ಗಡಿ ದಾಟಲು ನೆರವಾದರು. ಅಂತಿಮವಾಗಿ ಅಕ್ಷರ್‌ ಪಟೇಲ್‌ ಪಡೆ 75 ರನ್‌ ಗಳಿಸಿ ಆಲೌಟ್‌ ಆಯಿತು. ಇನ್ನುಳಿದಂತೆ ನಿತೀಶ್‌ ರಾಣಾ ಹಾಗೂ ಕೆಎಲ್‌ ರಾಹುಲ್‌ 1 ರನ್‌ಗೆ ಔಟಾದರು. ಸ್ಟಬ್ಟ್‌ 5 ರನ್‌, ಕುಲದೀಪ್‌ ಯಾದವ್‌ 3 ರನ್‌, ಸಾಹಿಲ್‌ ಪರಾಖ್‌, ರಿಜ್ವಿ ಹಾಗೂ ಅಕ್ವರ್‌ ಪಟೇಲ್‌ ಡಕೌಟ್‌ ಆದರು.

ಆರ್‌ಸಿಬಿ ಪರ ಬೌಲಿಂಗ್‌ ಮಾಡಿದ ಹೇಜಲ್‌ವುಡ್‌ 4 ವಿಕೆಟ್‌ ಕಿತ್ತರು. ಭುವನೇಶ್ವರ್ ಕುಮಾರ್‌ 3 ವಿಕೆಟ್‌, ರಸಿಕ್‌ ಸಲಾಂ, ಸುಯೇಶ್‌ ಶರ್ಮಾ ಹಾಗೂ ಕೃನಾಲ್‌ ಪಾಂಡ್ಯ ತಲಾ 1 ವಿಕೆಟ್‌ ಪಡೆದುಕೊಂಡರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರ್ನಾಲ್ಕು ದಿನಗಳಿಂದ ಮಳೆ ಬರುತ್ತಿರುವುದರಿಂದ ಆಶಾಭಾವ ಮೂಡಿದೆ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೂಳಿಬೆಂಗಳೂರಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ – ಮಾರಕಾಸ್ತ್ರಗಳು ಪತ್ತೆಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ 1,470 ಕ್ಯೂಸೆಕ್ ಒಳಹರಿವುರಾಜ್ಯದ ಹಲವೆಡೆ 2-3 ದಿನ ಮಳೆ ಮುನ್ಸೂಚನೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮಜೈಶ್‌ ಉಗ್ರರ ಜೊತೆ ನಂಟು; ಗುಜರಾತಲ್ಲಿ 8 ಮಂದಿ ಅರೆಸ್ಟ್‌ಪತಿಯ ಕೊಂದು ಬಾತ್ ರೂಂನಲ್ಲೇ ಹೂತಿದ್ದ ಪತ್ನಿಬಿಎಲ್‌ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಭರ್ತಿ ಮಾಡಿಸ್ತಿದ್ದಾರೆ: ಸಾ.ರಾ.ಮಹೇಶ್ ಆರೋಪಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲುSIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಅಪಘಾತ – ವಿಎ ಸಾವು ಬದುಕಿನ ನಡುವೆ ಹೋರಾಟ