LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

KRS ಖಾಲಿ ಖಾಲಿ – ಇನ್ನಿರೋದು ಕೇವಲ 11 ಟಿಎಂಸಿ ನೀರು

Advertisement
Advertisement

ಮಂಡ್ಯ: ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಆರಂಭದಲ್ಲೇ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಇದರ ಬೆನ್ನಲ್ಲೇ ಬರದ ಆತಂಕದಲ್ಲಿರೋ ಮಂಡ್ಯ ಜಿಲ್ಲೆಯ ರೈತರಿಗೆ ಜಿಲ್ಲಾಡಳಿತ ಮತ್ತೊಂದು ಬಿಗ್ ಶಾಕ್ ನೀಡಿದೆ.

ಕೃಷ್ಣರಾಜಸಾಗರ ಜಲಾಶಯ ನಾಡಿಗೆ ನೀರುಣಿಸುವ ಡ್ಯಾಂ. ಮಂಡ್ಯ, ಮೈಸೂರು ಕೊಡಗು ಭಾಗದ ರೈತರನ್ನು ಕಾಪಾಡುವ ಜೀವನದಿ. ಬೆಂಗಳೂರಿಗರು ಕುಡಿಯುವ ಹನಿ ಹನಿ ನೀರು ಕೂಡ ಇದೇ ಡ್ಯಾಂನಿಂದ ಬರೋದು. ಜೀವನದಿ ಎಂಬ ಕಾವೇರಿ ಈಗ ಜೀವಕಳೆ ಕಳೆದುಕೊಂಡಿದ್ದಾಳೆ. ಮುಂಗಾರು ಮಳೆ ಆರಂಭದಲ್ಲಿಯೇ ನಿರಾಸೆ ಉಂಟುಮಾಡಿದೆ. ಇದರ ಮಧ್ಯೆಯೇ ಬರದ ಆತಂಕದಲ್ಲಿರುವ ಮಂಡ್ಯ, ಮೈಸೂರು ಜಿಲ್ಲೆ ರೈತರಿಗೆ  ಈಗ ಜಿಲ್ಲಾಡಳಿತ ನಿರ್ಧಾರದಿಂದ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.


ಕೆಆರ್‌ಎಸ್ ಅಣೆಕಟ್ಟಿನಲ್ಲಿ ಈಗ ಉಳಿದಿರೋದು ಕೇವಲ 11 ಟಿಎಂಸಿ ನೀರು. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೆಜ್. ಬಳಕೆಗೆ ಸಿಗೋದು ಕೇವಲ 6 ಟಿಎಂಸಿ ನೀರು. ಹೀಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿರುವ ಜಿಲ್ಲಾಡಳಿತ ಮುಂದಿನ 3 ತಿಂಗಳು ಕುಡಿಯುವ ನೀರಿನ ನಿರ್ವಹಣೆಗಾಗಿ ನಿರ್ಧಾರಕ್ಕೆ ಬಂದಿದೆ. ಹೀಗಾಗಿ 3 ತಿಂಗಳು ರೈತರ ಬೆಳೆಗೆ ಕಾವೇರಿ ನೀರು ಸಿಗೋದು ಬಹುತೇಕ ಡೌಟ್. 

 

ಮೂರು ಜಿಲ್ಲೆಯ ರೈತರು ಬಹುತೇಕ ಕಾವೇರಿ ನದಿ ನೀರನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಕಾವೇರಿ ನೀರು ನಾಲೆಗೆ ಹರಿಯದಿದ್ದರೆ, ಮಂಡ್ಯ ಮೈಸೂರು ಭಾಗದ ಭೂಮಿಗಳು ಹಸಿರನ್ನು ಕಳೆದುಕೊಳ್ಳುತ್ತವೆ. ಈಗಾಗಲೇ ಮುಂಗಾರು ಆರಂಭದಲ್ಲಿಯೇ ಕೈಕೊಟ್ಟಿದೆ. ಈಗ ನಾಲೆಗೆ ನೀರು ಹರಿಸುವುದಿಲ್ಲ ಎಂದು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದ್ದು ರೈತರು ಪರದಾಡುವಂತಾಗಿದೆ.

ಅತ್ತ ಮಳೆಯೂ ಇಲ್ಲದೆ, ಇತ್ತ ಡ್ಯಾಂನಿಂದ ನೀರು ಇಲ್ಲದೇ ಬೆಳೆದು ನಿಂತುವ ಕಬ್ಬು ಒಣಗುತ್ತಿದೆ. ಸದ್ಯಕ್ಕೆ ವರುಣದೇವ ಕರುಣೆ ತೋರದಿದ್ದರೆ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಶೀಘ್ರವೇ ಮಳೆರಾಯ ಕೃಪೆ ತೋರಿ ಕೆಆರ್‌ಎಸ್ ಭರ್ತಿಯಾಗಲಿ ಅನ್ನೋದೇ ಈಗ ರೈತರ ಪ್ರಾರ್ಥನೆಯಾಗಿದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಡದಿ ಟೌನ್‌ಶಿಪ್‌ ಜಟಾಪಟಿ – ಭೂಸ್ವಾಧೀನ ಆದೇಶ ತಕ್ಷಣ ಕೈ ಬಿಡಬೇಕು: ವಿಜಯೇಂದ್ರ ಆಗ್ರಹಸಿಎಂ ಆದ್ಮೇಲಾದ್ರೂ ಬ್ಲೂಫಿಲ್ಮ್ ಮಾಡ್ಸೋದು, ಪೋಸ್ಟರ್ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ: ಹೆಚ್‌ಡಿಕೆ ಕಿಡಿಎದೆ ಉರಿಯಿಂದ 4 ವರ್ಷದ ಬಾಲಕ ಸಾವು – ಹೃದಯಾಘಾತ ಶಂಕೆಕಾಂಗ್ರೆಸ್, ಮೈತ್ರಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್ ಜಟಾಪಟಿ – ಪೋಸ್ಟರ್ ವಾರ್ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವದ ಸಾಧನೆ – 1.78 ಲಕ್ಷ ಕೋಟಿ ರೂ. ತಲುಪಿದ ಉತ್ಪಾದನೆನಾನು ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ: ಪ್ರಕಾಶ್‌ ರಾಜ್‌ಭಾನುವಾರ ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್‌ಗೆ ಸೇರ್ಪಡೆಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಬಿಜೆಪಿ ನಿಯೋಗ ಭೇಟಿ – ಕಾಂಗ್ರೆಸ್ ವಿರುದ್ಧ ವಾಗ್ದಾಳಿಸುಳ್ಳು ಸುದ್ದಿ ಹರಡಿದವರ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣಇಡೀ ಸಮಾಜವಾದಿ ಪಕ್ಷ ಬಿಜೆಪಿ ಜೊತೆ ಸೇರಲು ಕಾದು ಕುಳಿತಿದೆ – ಓಂ ಪ್ರಕಾಶ್ ರಾಜ್‌ಭರ್