ಬೆಂಗಳೂರು: ಕೆಪಿಎಸ್‌ಸಿ ಹಗರಣ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಗೀತಾ ಅವರನ್ನು 13 ದಿನ ಇ.ಡಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶಿಸಿದೆ.
ಬಂಧನಕ್ಕೊಳಗಾಗಿರುವ ಶಿವಶಂಕರಪ್ಪ ಹಾಗೂ ಗೀತಾಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇಡಿ ಪರ ವಕೀಲ ಮಧುರಾವ್ ವಾದಿಸಿದರು. ಪೊಲೀಸ್ ಕಸ್ಟಡಿಗೆ ನೀಡಲು ಶಿವಶಂಕರಪ್ಪ, ಗೀತಾ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು.
ಇಡಿ ಪರ ವಕೀಲ ಮಧುರಾವ್ ವಾದಿಸಿ, ಅಭ್ಯರ್ಥಿಗಳಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ನೀಡಲು 70 ಲಕ್ಷ ಹಣ ಪಡೆದುಕೊಂಡಿದ್ದಾರೆ. ಜ.9 ರಂದು ಪರೀಕ್ಷೆ ದಿನ ಮುನ್ನ ಕೆಲ ಅಭ್ಯರ್ಥಿಗಳ ಜೊತೆ ಅಧ್ಯಕ್ಷರು ಮಾತನಾಡಿದ್ದಾರೆ. ಐಎಫ್‌ಎಸ್ ಪರೀಕ್ಷೆ ಮತ್ತು ಗೋಲ್ಡ್ ಮೆಡಲ್ ಪಡೆದ ಅಭ್ಯರ್ಥಿಗಳು 350 ಅಂಕ ಪಡೆಯುವುದಕ್ಕೆ ಕಷ್ಟ ಪಟ್ಟಿದ್ದಾರೆ. ಕಾಲೇಜಿನಲ್ಲಿ ಪದವಿಯಲ್ಲಿ ಪಡೆದ ಅಭ್ಯರ್ಥಿ ಕಡಿಮೆ ಅಂಕ ಪಡೆದು ಪಾಸ್ ಆದ ಅಭ್ಯರ್ಥಿ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ 450 ಅಂಕಗಳನ್ನು ಪಡೆದಿದ್ದಾರೆ. ಒಬ್ಬೊಬ್ಬ ಅಭ್ಯರ್ಥಿಗಳಿಗೆ ಒಂದೊಂದು ರೆಟ್ ಫಿಕ್ಸ್ ಮಾಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಪರೀಕ್ಷೆ ನಡೆದಿದೆ. ಪರೀಕ್ಷೆ ಕಂಟ್ರೋಲರ್ ಆಗಿದ್ದ ಗ್ಯಾನೇಂದ್ರ ಕುಮಾರ್ ಅಧ್ಯಕ್ಷರ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. 2022 ರಿಂದ 13 ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ. ವಿಚಾರಣೆ ವೇಳೆ ಪರೀಕ್ಷೆ ಕಂಟ್ರೋಲರ್ ಗ್ಯಾನೇಂದ್ರ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್ಗೆ ಮಾಹಿತಿ ನೀಡಿದರು.
ಕೆಪಿಎಸ್ಸಿ ಕಚೇರಿ, ಅಮಾನತುಗೊಂಡ Chairman ಹಾಗೂ ಕೆಲವು ಯಶಸ್ವಿ ಅಭ್ಯರ್ಥಿಗಳ ನಿವಾಸಗಳಲ್ಲಿ ಶೋಧ ನಡೆಸಲಾಗಿದೆ. Section 17 ಅಡಿಯಲ್ಲಿ ಶೋಧ ಮತ್ತು ಜಪ್ತಿ ಮಾಡಲಾಗಿದೆ. ಈ ವೇಳೆ ಕೆಲ ಖಾಲಿ ಚೆಕ್‌ಗಳಿಗೆ ಸಹಿ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರ ಸೋರಿಕೆ, ಹಣದ ವ್ಯವಹಾರ ಮತ್ತು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ಅಕ್ರಮಗಳ ವ್ಯಾಪ್ತಿಯನ್ನು ಗಮನಿಸಿ, ಹೆಚ್ಚಿನ ತನಿಖೆ ಹಾಗೂ ಕಂಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯವಿದೆ ಎಂದು ವಕೀಲ ಮಧುರಾವ್ ವಾದಿಸಿದರು.
ಪರೀಕ್ಷೆ ಪ್ರಕ್ರಿಯೆ ಸಂಪೂರ್ಣ ಕಂಟ್ರೋಲರ್ ಅಧೀನದಲ್ಲಿ ಬರುತ್ತದೆ. ಅಧ್ಯಕ್ಷರು ಅವರ ಪಾತ್ರವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ನಮ್ಮ ಕಕ್ಷಿದಾರರು ಸೀನಿಯರ್ ಸಿಟಿಜನ್. ಬಿಪಿ, ಹೃದಯದ ಸಮಸ್ಯೆ, ಶುಗರ್ ಇದೆ. ತನಿಖೆ ಸಹಕಾರ ನೀಡುತ್ತಾರೆ. ಈಗಾಗಲೇ ಹಲವು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಶಿವಶಂಕರಪ್ಪ ಪರ ವಕೀಲ ಪ್ರಸನ್ನ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್, ಶಿವಶಂಕರಪ್ಪ, ಗೀತಾರನ್ನು 13 ದಿನಗಳ ಕಾಲ ಇಡಿ ಕಸ್ಟಡಿಗೆ ವಹಿಸಿ ಆದೇಶಿಸಿದೆ. ಮುಂದಿನ 19ರ ತನಕ ಆರೋಪಿಗಳನ್ನು ಕಸ್ಟಡಿಗೆ ನೀಡಲಾಗಿದೆ. 19 ರಂದು 11:30ಕ್ಕೆ ಕೋರ್ಟ್‌ಗೆ ಹಾಜರುಪಡಿಸಲು ಕೋರ್ಟ್ ಸೂಚನೆ ನೀಡಿದೆ.
ನವರಾತ್ರಿಗೆ ಉಪವಾಸ ಇರಲು ಅವಕಾಶ ನೀಡುವಂತೆ ಕೋರಿ ಆರೋಪಿ ಗೀತಾ ಅವರು ವಕೀಲರ ಮುಂದೆ ಕಣ್ಣೀರಿಟ್ಟಿದ್ದಾರೆ. ಆದರೆ, ಉಪವಾಸಕ್ಕೆ ಅವಕಾಶ ನೀಡಲು ಇ.ಡಿ ನಿರಾಕರಿಸಿದೆ.
