LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೆರಿಟ್ ಅಭ್ಯರ್ಥಿಗಳಿಂದಲೂ ಹಣ ಪೀಕಿದ ಕೆಪಿಎಸ್‌ಸಿ ಗ್ಯಾಂಗ್!

Advertisement

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ  ನಡೆಸುತ್ತಿರುವ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ.

ಪರೀಕ್ಷೆ ಮುಗಿದ ನಂತರ ಬಿಡುಗಡೆಯಾಗುವ 1:3 ಮೆರಿಟ್ ಲಿಸ್ಟ್‌ನಲ್ಲಿ ಅಭ್ಯರ್ಥಿಗಳು ಗಳಿಸಿದ ಗೌಪ್ಯ ಅಂಕಗಳ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಕೋಟಿ ಕೋಟಿ ಹಣ ದೋಚುತ್ತಿದ್ದುದು ಬಯಲಾಗಿದೆ.

ಐಎಎಸ್ ಅಧಿಕಾರಿ ಹಾಗೂ ಮಾಜಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಕೆಪಿಎಸ್‌ಸಿ ಸದಸ್ಯರು ಈ ಜಾಲದಲ್ಲಿದ್ದರು. ಮೆರಿಟ್ ಆಧಾರದಲ್ಲಿ ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಕೆಲಸ ಗಿಟ್ಟಿಸಿಕೊಳ್ಳುವ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು, ‘ನಮ್ಮ ಪ್ರಭಾವದಿಂದಲೇ ನಿಮಗೆ ಕೆಲಸ ಸಿಗುತ್ತಿದೆ’ ಎಂದು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಲಂಚ ವಸೂಲಿ ಮಾಡುತ್ತಿದ್ದರು.

ಕಂಪ್ಯೂಟರ್, ಸಿ-3 ಹಾಗೂ ಕಾರ್ಯದರ್ಶಿಗಳ ಕಚೇರಿಯಲ್ಲಿದ್ದ ಅಧಿಕಾರಿಗಳು ಈ ಗೌಪ್ಯ ಮಾಹಿತಿಯನ್ನು ಕೆಪಿಎಸ್‌ಸಿ ಸದಸ್ಯರು ಮತ್ತು ಮಧ್ಯವರ್ತಿಗಳಿಗೆ ಸೋರಿಕೆ ಮಾಡುತ್ತಿದ್ದರು. ಸ್ವಂತ ಶ್ರಮದಿಂದ ಆಯ್ಕೆಯಾಗುವ ಅಭ್ಯರ್ಥಿಗಳಿಗೂ ಮೋಸ ಮಾಡಿ ಹಣ ಪೀಕುತ್ತಿದ್ದ ಅಧಿಕಾರಿಗಳ ಈ ಕಳ್ಳಾಟ ಈಗ ಇ.ಡಿ ತನಿಖೆಯಿಂದ ಸಂಪೂರ್ಣವಾಗಿ ಅನಾವರಣಗೊಂಡಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೆರಿಟ್ ಅಭ್ಯರ್ಥಿಗಳಿಂದಲೂ ಹಣ ಪೀಕಿದ ಕೆಪಿಎಸ್‌ಸಿ ಗ್ಯಾಂಗ್!‘108’ ಅಂಬುಲೆನ್ಸ್‌ ಮೇಲೆ ಅವಲಂಬನೆ ಆಗಬೇಡಿ: ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿಕೆಸ್ಮಿತ್‌ ಮಚ್ಚಾರ್‌ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಆಪ್ತರಾಗಿದ್ದ ಮಾಲ್ಡೀವ್ಸ್‌ನ ಇಬ್ಬರು ಸಹ-ಪೈಲಟ್‌ಗಳು ವಶಕ್ಕೆಸ್ಯಾಲರಿ ಹಣಕ್ಕೆ ಅತ್ತೆ, 1 ಕೋಟಿ ಮೌಲ್ಯದ ಫ್ಲಾಟ್‌ಗಾಗಿ ಮಾವನಿಂದ ಒತ್ತಾಯ – ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆಮಾಡೆಲ್‌ ಗೆಳತಿಯಿಂದ ಬ್ಲ್ಯಾಕ್‌ಮೇಲ್? – ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಉದ್ಯಮಿ ಸಾವುಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಾದಕ ವಸ್ತು ಜಪ್ತಿ – ಇಬ್ಬರು ಅರೆಸ್ಟ್14 ವರ್ಷಗಳ ಕಾನೂನು ಹೋರಾಟ – ಪಂಕ್ಚರ್ ಆದ BMW ಕಾರಿಗೆ 70 ಲಕ್ಷ ಇನ್ಶೂರೆನ್ಸ್ ಪಡೆದ ಮಾಲೀಕಕರ್ನಾಟಕಕ್ಕೆ ಸುಧಾ ಯಾದವ್‌ ನೂತನ ರಾಜ್ಯಪಾಲರು; 6 ರಾಜ್ಯಗಳಿಗೆ ಹೊಸ ಗವರ್ನರ್‌ಗಳ ನೇಮಕಕುಡಿಯುವ ನೀರಿಗೂ ಪರದಾಟ; ಕೆರೆಯ ಕಲುಷಿತ ನೀರೇ ಆಧಾರ, 29 ಕುಟುಂಬಗಳ ಗೋಳು ಕೇಳೋರಿಲ್ಲಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 18 ಲಕ್ಷ ಮೌಲ್ಯದ 29 ದ್ವಿಚಕ್ರ ವಾಹನ ವಶಕ್ಕೆ