ಬೆಂಗಳೂರು: ರಂಗಭೂಮಿ ಕ್ಷೇತ್ರದಲ್ಲಿ ದೀರ್ಘಕಾಲದಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಗೂ ಪ್ರತಿಭಾವಂತ ಕಲಾವಿದರನ್ನು ಗೌರವಿಸುವ ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿನಿಧಿ ಪುರಸ್ಕಾರಗಳ ಪಟ್ಟಿ ಪ್ರಕಟವಾಗಿದೆ.
ಕನ್ನಡ ರಂಗಭೂಮಿ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮ ವಿಶಿಷ್ಟ ಅಭಿನಯ, ಕಂಠಸಿರಿ ಮತ್ತು ವಿಭಿನ್ನ ಪಾತ್ರಗಳ ಮೂಲಕ ಮನೆಮಾತಾಗಿರುವ ಹಿರಿಯ ನಟ ಡಾ. ಮುಖ್ಯಮಂತ್ರಿ ಚಂದ್ರು ಅವರು ಈ ಬಾರಿಯ ಪ್ರತಿಷ್ಠಿತ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ರಂಗಭೂಮಿಗೆ ಅವರು ನೀಡಿರುವ ದಶಕಗಳ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಅತ್ಯುನ್ನತ ಗೌರವ ಸಮರ್ಪಿಸಲಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ರಂಗಭೂಮಿಯ ವಿವಿಧ ಮಗ್ಗುಲುಗಳಲ್ಲಿ (ನಟನೆ, ನಿರ್ದೇಶನ, ರಂಗಸಜ್ಜಿಕೆ, ಸಂಗೀತ ಇತ್ಯಾದಿ) ಗಣನೀಯ ಸೇವೆ ಸಲ್ಲಿಸಿರುವ 25 ಹಿರಿಯ ಹಾಗೂ ಪ್ರತಿಭಾವಂತ ರಂಗಕರ್ಮಿಗಳನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ರಂಗಭೂಮಿಯ ವಿಶಿಷ್ಟ ಸಾಧನೆಗಳನ್ನು ಪ್ರೋತ್ಸಾಹಿಸಲು ನೀಡಲಾಗುವ ವಿವಿಧ ಮಹತ್ವದ ದತ್ತಿನಿಧಿ ಪುರಸ್ಕಾರಗಳನ್ನೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.
ಯಾರಿಗೆ ಪ್ರಶಸ್ತಿ?
ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ (ಧಾರವಾಡ), ರಮೇಶ ತಿಪ್ಪಣ್ಣ ಚಿತ್ರಗಾರ (ಇಳಕಲ್, ಬಾಗಲಕೋಟೆ), ಶಿವಾನಂದ ತಗಡೂರು (ಬೆಂಗಳೂರು), ಆರ್. ರಾಮಕೃಷ್ಣ (ಚನ್ನಯ್ಯ) (ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ), ಶ್ರೀಮತಿ ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ (ಲಕ್ಕುಂಡಿ), ಅಯ್ಯಣ್ಣ ಸ್ವಾಮಿ ಹಿರೇಮಠ (ಕಲಬುರಗಿ), ಶ್ರೀಮತಿ ಫಜೀಯಮ್ಮ ಹೆಚ್.ಎಸ್. (ಸಾಗರ), ಮಲ್ಲಪ್ಪ ಭರಮಪ್ಪ ಕುರಿ (ಕೊಪ್ಪಳ), ಕೆ.ಬಿ. ಸ್ವಾಮಿ (ಮಂಡ್ಯ), ಶ್ರೀಮತಿ ಸುಶೀಲಾ ಹೆಗಡೆ ಮೂಡೇರು (ಸಿದ್ಧಾಪುರ, ಉತ್ತರ ಕನ್ನಡ), ರಾಜಕುಮಾರ್ ಎಸ್. (ಬೆಂಗಳೂರು ನಗರ).
ಡಾ. ಎಂ. ಗಣೇಶ್ ಬೇಗೂರು (ಸಾಗರ), ಪ್ರದೀಪ್ ಚಂದ್ರ ಕುತ್ಪಾಡಿ (ಉಡುಪಿ), ಎನ್.ಟಿ. ಕೃಷ್ಣಪ್ಪ (ಬೆಂಗಳೂರು ನಗರ), ಪುರುಷೋತ್ತಮ ಹಂಡ್ಯಾಳ್ (ಬಳ್ಳಾರಿ), ಡಾ. ಎಸ್.ವಿ. ಸುಷ್ಮಾ (ಬೆಂಗಳೂರು ನಗರ), ಶ್ರೀಮತಿ ನಂದಾ ಹಳೆಮನೆ (ಮೈಸೂರು), ಶ್ರೀನಿವಾಸ್ (ರಾಮನಗರ), ಶ್ರೀಮತಿ ವೈ.ಎನ್. ಉಮಾ (ಯಲಹಂಕ, ಬೆಂಗಳೂರು ನಗರ), ಗದಿಗೆಯ್ಯ ಬಿ. ಹಿರೇಮಠ (ಬೈಲಹೊಂಗಲ), ಶ್ರೀಮತಿ ಜಿ. ಭಾರತಿ (ಹೊಸ್ಲಿಗಿ, ವಿಜಯನಗರ), ಶ್ರೀಮತಿ ಬಿ. ಸಾವಿತ್ರಮ್ಮ (ದಾವಣಗೆರೆ), ಎಂ.ಸಿ. ಶಿವರುದ್ರಪ್ಪ (ತುಮಕೂರು), ವೇಣುಗೋಪಾಲ್ ಕೆ. (ಬೆಂಗಳೂರು ನಗರ), ಎನ್.ಎಂ. ಲಕ್ಷ್ಮಯ್ಯ (ಮಾಲೂರು, ಕೋಲಾರ).
ದತ್ತಿ ಪುರಸ್ಕಾರ ಪುರಸ್ಕೃತರ ಪಟ್ಟಿ
ಎಸ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ: ಶ್ರೀ ಬಿ.ಜಿ. ಶ್ರೀಧರ್ (ಬೆಂಗಳೂರು ನಗರ)
ಇ.ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರ: ಶ್ರೀ ಅಶ್ಫಾಕ್ ಹುಸೇನ್ ಹಾ. ಜಾಗೀರದಾರ್ (ವಿಜಯಪುರ)
ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಡಾ. ಎಂ. ಚಂದ್ರಪ್ಪ (ಟಿ. ನರಸೀಪುರ, ಮೈಸೂರು)
ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ಶ್ರೀ ದಯಾನಂದ ಚ ಬೆಳಗಿ (ಗದಗ)
ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ: ಶ್ರೀ ಗಂಗಾಧರ ರೆಡ್ಡಿ ಬಿ.ಆರ್. (ಕುಣಿಗಲ್, ತುಮಕೂರು)
ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ಶ್ರೀ ವೈ.ಎನ್. ಶಿವಣ್ಣ (ತುಮಕೂರು)
ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ: ಶ್ರೀಮತಿ ಚಂದ್ರಮ್ಮ (ಸಾಣೇಹಳ್ಳಿ, ಚಿತ್ರದುರ್ಗ).




