ಬೆಳಗಾವಿ: ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಚುನಾವಣೆ ಆಯೋಗ ವಿರುದ್ಧ ಕೈ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ್ ಶಿಗಾಂವಿ ಹಾಗೂ ಬೆಳಗಾವಿ ಮಹಾ ನಗರ ಅಧ್ಯಕ್ಷ ರಾಜಾ ಸಲೀಂ ಮಹಿಳಾ ಘಟಕದ ಅಧ್ಯಕ್ಷ ಲತಾ ಮನೆ ಇವರ ನೇತೃತ್ವದಲ್ಲೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಬೆಳಗಾವಿ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ ನಡಿಗೆ ಮುಖಾಂತರ ಸಾಗಿದ ಪ್ರತಿಭಟನೆ ಕೋರ್ಟ್ ಅವರ್ನದ ದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರು ಮುಖ್ಯ ಚುನಾವಣಾ ಆಯೋಗ ಜ್ಞಾನೇಶ್ ಕುಮಾರ್ , ಅವರ ಪ್ರತಿಕೃತಿ ದಹನ ಮಾಡಲಾಯಿತು ಟಾಯರಗೆ ಬೆಂಕಿ ಹಚ್ಚಿ ಕೆಲ ಹೊತ್ತು ರಸ್ತೆ ತಡೆಯಲಾಯಿತು
ನಂತರ ಜಿಲ್ಲಾಧಿಕಾರಿಗಳ ಕಚೇರಿ ತರಳಿ ರಾಷ್ಟ್ರಪತಿ ದ್ರೌಪದಿ ಮುರುಮು, ರಾಜ್ಯ ರಾಜ್ಯಪಾಲರಿಗೆ ಮತ್ತು ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಅವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ನೀಡಲಾಯಿತು
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಚನ್ನರಾಜ ಹಟ್ಟಿಹೊಳಿ ಮಧ್ಯಮ ಜೊತೆ ಮಾತನಾಡುತ್ತಾ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ ಅದರಂತೆ ಹದಿಮೂರು ಕೋಟಿ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದ ಎಸ್ಐಆರ್ ನಡೆಯುತ್ತಿರುವುದನ್ನು ರದ್ದುಗೊಳಿಸಬೇಕು ಮತದಾನದ ಹಕ್ಕನ್ನು ಪುನಸ್ಥಪಿಸಿಕೊಳ್ಳಬೇಕು ಮುಖ್ಯ ಚುನಾವಣಾ ಆಯೋಗ ಜ್ಞಾನೇಶ ಕುಮಾರ್ ಅವರು ಏಕ ಪಕ್ಷೀಯ ನಿರ್ಣಯ ಕೈಗೊಳ್ಳುತ್ತಿರುವುದು ಹಾಗೂ ಒಂದು ಪಕ್ಷಕ್ಕೆ ಪೂರಕವಾಗಿ ಕಾರ್ಯನಿರ್ತಿರುವುದು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ ಎಂದುಗಂಭೀರ ಅಪರಾಧವನ್ನು ಎಸಗಿದ್ದಾರೆ ಕೂಡಲೇ ಅವರು ಕೈಗೊಂಡಿರುವಂತಹ, ಎಸ್ಆರ್ ಐ ರದ್ದು ಮಾಡಿ ಚುನಾವಣಾ ಆಯೋಗ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು
ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟಿಲ್ ಮಾತನಾಡಿ ಕೇಂದ್ರ ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದರು ಪ್ರತಿಭಟನೆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಶಿಗ್ಗಾಂವಿ, ಬೆಳಗಾವಿ ಮಹಾನಗರ ಅಧ್ಯಕ್ಷ ರಾಜಾ ಸಲೀಂ, ಬೆಳಗಾವಿ ಮಹಾನಗರ ಮಹಿಳಾ ಅಧ್ಯಕ್ಷ ಲತಾ ಮನೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್ ಪರಶುರಾಮ್ ವಗ್ಗನ್ನವರ, ಅಟ್ರಾಸಿಟಿ ಕಮಿಟಿ ಸದಸ್ಯ ಮಲ್ಲೇಶ್ ಚೌಗುಲೆ, ಖಾನಾಪುರ್ ಮಹಿಳಾ ಅಧ್ಯಕ್ಷ ದೀಪ ಪಾಟೀಲ್
ಸಮೀರ್ ಬಾಳೆಕುಂದ್ರಿ, ಅಲ್ಲಾಭಕ್ಷ ಇನಾಮ್ದಾರ್, ಪ್ರವೀಣ್ ಮನುಲ್ಕರ್, ಐಶ್ವರ್ಯ ಸಾಧನವರ್ ಯುವ ಕಾಂಗ್ರೆಸ್ ಮಹಿಳಾ ಅಧ್ಯಕ್ಷ, ಎನ್ ಎಸ್ ಹವಾಲ್ದಾರ್ ಮನೋಹರ್ ಬೆಳಗಾಂಕರ ಮಹೇಶ್ ಪಾಟೀಲ್, ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಹಾಗೂ ಯುವ ಕಾಂಗ್ರೆಸ್ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು
