LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೆಡಿಎಸ್ ಪಾದಯಾತ್ರೆ ಅಲ್ಲ, ಅದು ಪ್ರಾಯಶ್ಚಿತ ಯಾತ್ರೆ : ಬಾಲಕೃಷ್ಣ ತಿರುಗೇಟು

Advertisement
Advertisement

ರಾಮನಗರ: ಬಿಡದಿ ಟೌನ್‌ಶಿಪ್‌ ಯೋಜನೆ (Bidadi Township) ವಿರೋಧಿಸಿ ಜೆಡಿಎಸ್‌ (JDS) ಕೈಗೊಂಡಿರುವ ಪಾದಯಾತ್ರೆ ವಿಚಾರವಾಗಿ ಶಾಸಕ ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಇದು ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಪಾಪಕ್ಕೆ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ ಯಾತ್ರೆ’ ಎಂದು ವ್ಯಂಗ್ಯವಾಡಿದ್ದಾರೆ.

ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಅವರೇ ತಂದ ಯೋಜನೆಗೆ ಅವರೇ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಆರಂಭಿಸಿದ್ದೇ ಕುಮಾರಸ್ವಾಮಿ ಅವರು. ಈ ಯೋಜನೆ ಮಾಡಿ ಎಂದು ಯಾರಾದರೂ ಅವರನ್ನು ಕೇಳಿದ್ದರಾ ಎಂದು ಪ್ರಶ್ನಿಸಿದರು.

ತಾವು ತಂದ ಯೋಜನೆಯ ವಿರುದ್ಧವೇ ಈಗ ರಾಜಕೀಯ ಪಾದಯಾತ್ರೆ ಮಾಡುತ್ತಿರುವುದು ದುರಾದೃಷ್ಟಕರ. ರೈತರು ಪಾದಯಾತ್ರೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ಜೆಡಿಎಸ್‌-ಬಿಜೆಪಿಯವರು ಕೂತು ಕೂತು ದಪ್ಪ ಆಗಿದ್ದಾರೆ. ಸ್ವಲ್ಪ ಎಕ್ಸರ್ಸೈಸ್ ಆಗಲಿ ಎಂದು ವಾಕಿಂಗ್ ಮಾಡುತ್ತಿದ್ದಾರೆ. ವಾಕಿಂಗ್ ಮಾಡಲಿ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಟಾಂಗ್ ನೀಡಿದರು. 

ಯಾರ ಆಡಳಿತ ಅವಧಿಯಲ್ಲಿ ಏನೇನು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನೊಳಗೊಂಡ ಜಾಹೀರಾತನ್ನು ಶೀಘ್ರದಲ್ಲೇ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷದ ವತಿಯಿಂದ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಜೆಡಿಎಸ್‌ ಪಾದಯಾತ್ರೆಯನ್ನು ಮೇಕೆದಾಟು ಪಾದಯಾತ್ರೆಗೆ ಹೋಲಿಸಿದ ಕುಮಾರಸ್ವಾಮಿ ಅವರ ಹೇಳಿಕೆಗೂ ಬಾಲಕೃಷ್ಣ ತಿರುಗೇಟು ನೀಡಿದರು. ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದು ರಾಜ್ಯಕ್ಕೆ ನೀರು ಬೇಕು ಎಂಬ ಸತ್ಕಾರಣಕ್ಕಾಗಿ. ನೀರಿಗಾಗಿ ಮಾಡಿದ ಪಾದಯಾತ್ರೆಗೂ, ಇವರ ರಾಜಕೀಯ ಪಾದಯಾತ್ರೆಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ನೈಸ್‌ ರಸ್ತೆ ಯೋಜನೆ ಆರಂಭವಾಗಿದ್ದೇ ಹೆಚ್.ಡಿ. ದೇವೇಗೌಡರ ಕಾಲದಲ್ಲಿ ಎಂದು ಹೇಳಿದ ಬಾಲಕೃಷ್ಣ, ದೇವೇಗೌಡರು ನೈಸ್‌ ರಸ್ತೆ ಮಾಡದಿದ್ದರೆ ಇವತ್ತು ಈ ಚರ್ಚೆಯೇ ಇರುತ್ತಿರಲಿಲ್ಲ. ಟೋಲ್ ಕಟ್ಟಬೇಡಿ ಎಂದು ಹೇಳಲು ಕುಮಾರಸ್ವಾಮಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡುತ್ತಿದ್ದಾರಾ? ಕಾನೂನುಬದ್ಧವಾಗಿ ಹೋರಾಟ ಮಾಡಲಿ. ಜನರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುವುದು, ಗುಂಪು ಕಟ್ಟುವುದು ಕ್ಷುಲ್ಲಕ ರಾಜಕಾರಣ. ಅಲ್ಲಿ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಜವಾಬ್ದಾರಿ? ಅವರು ತಮ್ಮ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಗುರಿ ತಲುಪಲು ನಾವು ಯಾವುದೇ ಅಡ್ಡಿಪಡಿಸುವುದಿಲ್ಲ. ಪಾದಯಾತ್ರೆಗೆ ಸಂಪೂರ್ಣ ಅನುಮತಿ ನೀಡುತ್ತೇವೆ ಎಂದು ಬಾಲಕೃಷ್ಣ ವ್ಯಂಗ್ಯವಾಗಿ ಹೇಳಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಗಲು ವಿಶ್ರಾಂತಿ, ರಾತ್ರಿ ವೇಳೆ ಪುಂಡಾಟ – ಸಿಕ್ಕಸಿಕ್ಕ ವಾಹನ, ಜನರ ಮೇಲೆ ʻಗಜಾಸುರʼನ ಅಟ್ಟಹಾಸಹಗಲು ವಿಶ್ರಾಂತಿ, ರಾತ್ರಿ ವೇಳೆ ಪುಂಡಾಟ – ಸಿಕ್ಕಸಿಕ್ಕ ವಾಹನ, ಜನರ ಮೇಲೆ ʻಗಜಾಸುರʼನ ಅಟ್ಟಹಾಸಪಾದಯಾತ್ರೆಗೆ ಬಿಜೆಪಿಯಿಂದ ನೈತಿಕ ಬೆಂಬಲ -ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖಂಡರು ಭಾಗಿ: ಹೆಚ್‌ಡಿಕೆಅಂಬ್ಲಿಗೋಳ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಂಸದ ರಾಘವೇಂದ್ರಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ರಸ್ತೆ ಅಪಘಾತ – ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಮೇಳಕ್ಕೆ ಈಶ್ವರ ಖಂಡ್ರೆ ಸೂಚನೆಸ್ನ್ಯಾಕ್ಸ್ ಪ್ಯಾಕೆಟ್‌ಗಲ್ಲಿ ಗಾಂಜಾ ಚಾಕ್ಲೆಟ್ ಇಟ್ಟು ಮಾರಾಟ – ಆರೋಪಿ ಅರೆಸ್ಟ್ಹೋಟೆಲ್‌ಗಳ ಮೇಲೆ ಮುಂದುವರೆದ ಫುಡ್ ಸೇಫ್ಟಿ ರೇಡ್; 26 ಕಡೆ ದಾಳಿ, 11 ರೆಸ್ಟೋರೆಂಟ್‌ಗಳಿಗೆ ನೋಟಿಸ್ಅಧಿಕಾರ ಕೊಟ್ಟವರು ಮುಖ್ಯಮಂತ್ರಿಗಳು, ಅವ್ರು ಹೇಳಿದ ಹಾಗೆ ಕೇಳ್ತೀನಿ: ಅಧಿಕಾರ ವಾಪಸ್ ಪ್ರಶ್ನೆಗೆ ಬಾಲಕೃಷ್ಣ ರಿಯಾಕ್ಷನ್ನಮಗೆ ನಿಮ್ಮ ಮೇಲೆ ನಂಬಿಕೆ ಇದೆ, ದೇಶಕ್ಕೆ ನಿಮ್ಮ ಅಗತ್ಯವಿದೆ – ʻಕಾಕ್ರೋಚ್‌ʼ ಪ್ರತಿಭಟನೆ ಬಳಿಕ ಜೆನ್-ಝಿ ಉದ್ದೇಶಿಸಿ ಪ್ರಧಾನಿಯ ಮೊದಲ ಭಾಷಣ