LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಸರ್ಕಾರಿ ನೌಕರರಿಗೆ ಇಲ್ವಾ ಗ್ಯಾರಂಟಿ?

Advertisement

ಬೆಂಗಳೂರು: ರಾಜ್ಯ ಸರ್ಕಾರ  ಇದೀಗ ಗ್ಯಾರಂಟಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಸದ್ಯ ಗ್ಯಾರಂಟಿ ಪರಿಷ್ಕರಣೆ ನಡೆಯುತ್ತಿದ್ದು, ಇದೇ ಹೊತ್ತಲ್ಲಿ ಸರ್ಕಾರಿ ನೌಕರರನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡಲು ಚಿಂತನೆ ನಡೆಸಿದೆ.

 

ಗ್ಯಾರಂಟಿ ಪ್ರಾಧಿಕಾರ ಈ ಬಗ್ಗೆ ಚಿಂತನೆ ನಡೆಸಿದ್ದು, ಸರ್ಕಾರಿ ನೌಕರರ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳಿಂದ ಕಡಿತಗೊಳಿಸುವ ಬಗ್ಗೆ ಚರ್ಚಿಸುತ್ತಿದೆ. ಸದ್ಯ ಪ್ರಾಧಿಕಾರವು ಸರ್ಕಾರಿ ನೌಕರರಿಗೆ ಸ್ವಯಂ ಪ್ರೇರಿತವಾಗಿ ಗ್ಯಾರಂಟಿ ಸೌಲಭ್ಯ ಬಿಟ್ಟುಕೊಡಿ ಎಂದು ಸಲಹೆ ನೀಡಿದೆ.

ಈ ಕುರಿತು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ರೇವಣ್ಣ  ಅವರು  ಮಾತನಾಡಿ, ಜಿಎಸ್‌ಟಿ ಬರುವವರಿಗೆ ಹಾಗೂ ಐಟಿ ಅವರಿಗೆ ಕೊಡಬಾರದು ಅಂತಿದೆ. ಈ ಕುರಿತು ಸರ್ಕಾರಿ ನೌಕರರ ಜೊತೆ ಚರ್ಚೆ ಮಾಡುತ್ತೇವೆ. ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಸರ್ಕಾರಿ ನೌಕರರ ಸಂಘ ಮತ್ತು ಇತರೆ ಸಂಘಗಳೊಂದಿಗೆ ಚರ್ಚೆ ನಡೆಸುವುದು ಕೂಡ ಗ್ಯಾರಂಟಿ ಪ್ರಾಧಿಕಾರದ ಅಜೆಂಡಾ ಆಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಪ್ರತಿಕ್ರಿಯೆ ನೀಡಿದ್ದು, ಗ್ಯಾರಂಟಿ ಪ್ರಾಧಿಕಾರ ನಮ್ಮ ಬಳಿ ಚರ್ಚೆ ಮಾಡಿದ್ರೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಗ್ಯಾರಂಟಿ ಕೊಡಿ ಅಂತಾ ನಾವು ಕೇಳಿರಲಿಲ್ಲ, ಅವರೇ ಕೊಟ್ಟಿದ್ದಾರೆ. ಈಗ ವಾಪಾಸ್ ತೆಗೆದುಕೊಳ್ಳುತ್ತೇವೆ ಅಂತಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳಾ ನೌಕರರಿಗೆ ಅನುಕೂಲ ಆಗುತ್ತಿದೆ. ನಮ್ಮ ಬಳಿ ಚರ್ಚೆ ಮಾಡಿದಾಗ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಸರ್ಕಾರಿ ನೌಕರರಿಗೆ ಇಲ್ವಾ ಗ್ಯಾರಂಟಿ?ಜೈಲಿನಲ್ಲಿ ಪ್ರಾಣಾಯಾಮ, ಶವಾಸನ ಮಾಡಿದ ದರ್ಶನ್‌ಮೈಸೂರು ರೈಲು ನಿಲ್ದಾಣದಲ್ಲಿ 40ಕ್ಕೂ ಹೆಚ್ಚು ಶಂಕಿತ ಬಾಂಗ್ಲಾ ವಲಸಿಗರು ಪತ್ತೆ – ತೀವ್ರ ವಿಚಾರಣೆಅಡ್ಡ ಮತದಾನ ಮಾಡಿದ್ದು ಸಾಬೀತಾದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಚಂದ್ರು ಲಮಾಣಿ51 ವರ್ಷಗಳಿಂದ ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ದೇವಸ್ಥಾನ ಮತ್ತೆ ಗೋಚರ!ಮನೆಯ ಬೀಗ ಮುರಿದು ಕಳ್ಳತನ – 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ದೋಚಿ ಪರಾರಿಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟುಹೆಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಗೆ ಬಿಗ್ ಶಾಕ್: ಕ್ಲಿನಿಕಲ್ ಟ್ರಯಲ್ ನಡೆಸದಂತೆ ಕೇಂದ್ರ ಸರ್ಕಾರದಿಂದ 2 ವರ್ಷ ನಿಷೇಧಶೀಘ್ರವೇ ಬಸ್‌ ಟಿಕೆಟ್ ದರ ಏರಿಕೆ – BMTC 44%, KSRTC 33% ರಷ್ಟು ಹೆಚ್ಚಳಕ್ಕೆ ಪ್ರಸ್ತಾಪಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ, ರೈತರ ಜೊತೆ ಮಾತನಾಡೋಣ – ಡಿಕೆಶಿಗೆ ಹೆಚ್‌ಡಿಕೆ ಸವಾಲು