LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಮಣ್ಣು ಸಾಗಾಟ – ಇಡೀ ಗ್ರಾಮವೇ ಧೂಳುಮಯ!

ದಾವಣಗೆರೆ: ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಜನರು ಮನೆಲೀ ನೆಮ್ಮದಿಯಿಂದ ಊಟ ಮಾಡೋದಿರಲಿ, ನೆಮ್ಮದಿಯಿಂದ ಮಲಗೋಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಎಲ್ಲೆ ಮುಟ್ಟಿದರೂ ಧೂಳು ಅಂಟಿಕೊಳ್ಳುತ್ತಿದ್ದು, ಈ ಧೂಳು ಗ್ರಾಮಸ್ಥರ ನೆಮ್ಮದಿ ಹಾಳು ಮಾಡಿದೆ.

ಹಗಲು ರಾತ್ರಿ ಎನ್ನದೇ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಇದಕ್ಕಾಗಿ ನಿರಂತರವಾಗಿ ಟ್ರ್ಯಾಕ್ಟರ್‌ಗಳು ಓಡಾಡುತ್ತಿದ್ದು, ಶಬ್ದದ ಜೊತೆಗೆ ಧೂಳಿನಿಂದಾಗಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ವಿಶಾಲವಾಗಿ ಹರಡಿಕೊಂಡಿರುವ ಚಿನ್ಮುಲಾದ್ರಿ ಪರ್ವತ ಮಳೆಗಾಲ ಬಂತೆದರೆ ಸಾಕು ಹಚ್ಚಹರಿಸಿನಿಂದ ಕಂಗೊಳಿಸುತ್ತದೆ. ಸಾಕಷ್ಟು ಪ್ರಾಣಿ ಪಕ್ಷಿಗಳ ಆವಾಸಸ್ಥಾನವಾಗಿರುವ ಚಿನ್ಮುಲಾದ್ರಿ ಪರ್ವತದಲ್ಲಿ ಇದೀಗ ಅಕ್ರಮ ಮಣ್ಣುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಹೌದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಸಮೀಪದ ಚಿನ್ಮುಲಾದ್ರಿ ಪರ್ವತದಲ್ಲಿ ಅಕ್ರಮ ಮಣ್ಣುಗಣಿಗಾರಿಕೆ ನಡೆಯುತ್ತಿದೆ. ಪ್ರತಿನಿತ್ಯ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಇಲ್ಲಿಂದ ಮಣ್ಣನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಮಣ್ಣನ್ನು ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸುತ್ತಿದ್ದು ಟ್ರ್ಯಾಕ್ಟರ್‌ ಶಬ್ದದ ಜೊತೆಗೆ ಧೂಳಿನಿಂದಾಗಿ ಕುಂಬಳೂರು ಗ್ರಾಮಸ್ಥರು ಅಕ್ಷರಶಃ ನಲುಗಿ ಹೋಗಿದ್ದಾರೆ. 

ಮನೆಯಲ್ಲಿ ನೆಮ್ಮದಿಯಿಂದ ಕೂರಲೂ ಆಗದೇ, ಮಲಗಲು ಆಗದೇ, ಊಟ ಮಾಡಲು ಆಗದೇ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟ್ರ್ಯಾಕ್ಟರ್‌ಗಳು ಶಬ್ದದ ಜೊತೆಗೆ ಧೂಳನ್ನು ನಿಯಂತ್ರಿಸಲು ಟ್ರ್ಯಾಕ್ಟರ್‌ಗಳು ಗ್ರಾಮದ ಒಳಗೆ ಬಾರದಂತೆ ಗ್ರಾಮಸ್ಥರು ಅಡ್ಡ ಹಾಕಿದರೆ ಟ್ಯಾಕ್ಟರ್ ಚಾಲಕರು ಗ್ರಾಮಸ್ಥರೊಂದಿಗೆ ಜಗಳ ತೆಗೆಯುವುದರ ಜೊತೆಗೆ ರಸ್ತೆಗೆ ಟ್ಯಾಕ್ಸ್ ಕಟ್ತೀವಿ ಎಂದು ದಬ್ಬಾಳಿಕೆ ಮಾಡುತ್ತಾರಂತೆ, ಇದರಿಂದಾಗಿ ಗ್ರಾಮಸ್ಥರು ಹಾಗೂ ಟ್ರ್ಯಾಕ್ಟರ್‌ ಚಾಲಕನ ನಡುವೆ ಸಾಕಷ್ಟು ಬಾರಿ ಗಲಾಟೆಗಳೂ ಕೂಡ ನಡೆದಿವೆ.

ಅಕ್ರಮ ಮಣ್ಣು ಸಾಗಾಟ ಮಾಡುವುದರ ಜೊತೆಗೆ ಟ್ರ್ಯಾಕ್ಟರ್‌ಗಳಲ್ಲಿ ಟೇಪ್ ರೆಕಾರ್ಡರ್ ಹಾಕಿಕೊಂಡು ಓಡಿಸುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿನ ಧೂಳೆಲ್ಲಾ ಮನೆ ಸೇರುತ್ತಿದ್ದು ವಯಸ್ಸಾದವರು, ಚಿಕ್ಕ ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಅಕ್ರಮ ಮಣ್ಣು ಗಣಿಗಾರಿಕೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ

Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಗ್ಲಾ ವಲಸಿಗರು ಎಂಬ ಶಂಕೆ: ತನಿಖೆ ನಡೆಸಿ 20 ಜನರನ್ನು ಬಿಟ್ಟು ಕಳುಹಿಸಿದ ಬೆಳಗಾವಿ ಪೊಲೀಸರುಬಕ್ರೀದ್ ಸಂದರ್ಭದಲ್ಲಿ ಗೋ ಹತ್ಯೆ ತಡೆಯುವಂತೆ ಕಮಿಷನರ್ ಗೆ ಮನವಿಬಾದಾಮಿ ಅಗಸ್ತ್ಯ ಹೊಂಡದಲ್ಲಿ ಈಜಲು ಹೋದ ಯುವಕ ನಾಪತ್ತೆವರದಕ್ಷಿಣೆ ಕಿರುಕುಳ ಆರೋಪ – ನೇಣು ಬಿಗಿದು ಕಾನ್‌ಸ್ಟೇಬಲ್ ಪತ್ನಿ ಆತ್ಮಹತ್ಯೆಕುಟುಂಬ ಸಮೇತ ರಾಯರ ದರ್ಶನ ಪಡೆದ ಕೆ.ಎಸ್.ಈಶ್ವರಪ್ಪವಿಮಾನ ಟಿಕೆಟ್ ಬುಕ್ಕಿಂಗ್ ಶುಲ್ಕ ದುಪ್ಪಟ್ಟು – ತನಿಖೆಗೆ ಜೋಶಿ ಆದೇಶಕುಡಿದ ಮತ್ತಲ್ಲಿ ಟ್ರಾಫಿಕ್‌ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ವಿಡಿಯೋ ವೈರಲ್‌ಎಲ್ಲಾ ಹೊರೆ ಜನರ ಮೇಲೆ ಹಾಕ್ತಿದ್ರೆ, ಮೋದಿ ಯಾವಾಗ ಜವಾಬ್ದಾರಿ ತಗೋತಾರೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆಆರ್‌ಡಿಪಿಆರ್ ಕಚೇರಿಯಲ್ಲಿ ಗುಂಡು, ತುಂಡು ಪಾರ್ಟಿ: ಎಇಇ ಸೇರಿ ಮೂವರು ಅಮಾನತು