LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚುನಾವಣಾ ಆಯೋಗದ ಕಚೇರಿ ಮುಂದೆ ನಾನು ಪ್ರತಿಭಟನೆ ಮಾಡಿಯೇ ಇಲ್ಲ: ಡಿಕೆಶಿ

Advertisement

ಬೆಂಗಳೂರು: ನಾನು ನಿನ್ನೆ (ಅ.1) ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿಯೇ ಇಲ್ಲ. ಮಾಧ್ಯಮದವರು ಅದನ್ನು ಪ್ರತಿಭಟನೆ ಅಂತ ತೋರಿಸಿದರೆ ನಾನೇನು ಮಾಡಲಿ ಎಂದು ಸಿಎಂ ಡಿ.ಕೆ ಶಿವಕುಮಾರ್‌ ಹಳಿದ್ದಾರೆ.

ನಗರದಲ್ಲಿ  ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಮ್ಮ ಹಕ್ಕುಗಳನ್ನು ಪ್ರಶ್ನೆ ಮಾಡುವುದಕ್ಕೆ ಹೋಗಿದ್ದೆ ಅಷ್ಟೇ. ಆಗಿರುವ ಅನ್ಯಾಯವನ್ನು ಸರಿಪಡಿಸಿ ಅಂತ ಅಲ್ಲೇ ಕುಳಿತುಕೊಂಡಿದ್ದೆ. ಎಫ್ಐಆರ್ ಮಾಡುವುದಿದ್ದರೆ ನನ್ನ ಮೇಲೆ ಮಾಡಲಿ ತೊಂದರೆ ಇಲ್ಲ‌ ಎಂದಿದ್ದಾರೆ. 

ಕಾನೂನು ಕ್ರಮ ಕೈಗೊಳ್ಳಿ ಎಂದಾಗ ಇನ್ನೊಂದು ದಿನ ಬನ್ನಿ ಎಂದು ಮನವಿ ಮಾಡಿದರು. ಆಗೋದಿಲ್ಲ ಈಗಲೇ ಕ್ರಮ ಕೈಗೊಳ್ಳಿ ಎಂದು ನಾನು ಮನವಿ ಮಾಡಿ ಕುಳಿತುಕೊಂಡಿದ್ದೆ ಅಷ್ಟೇ ಎಂದು ತಿಳಿಸಿದ್ದಾರೆ.

ನಿನ್ನೆ ಆಗಿದ್ದೇನು?
ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಹಾಗೂ ಸಚಿವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ  ಕಚೇರಿಯಲ್ಲೇ ಧರಣಿ ಕುಳಿತಿದ್ದರು.

ನಕಲಿ ‘ಫಾರ್ಮ್-7’ ಸಲ್ಲಿಸಿ ಮತದಾರರ ಹೆಸರು  ಡಿಲೀಟ್ ಮಾಡಲು ಯತ್ನಿಸಿದವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳು ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಒತ್ತಾಯಿಸಿದ್ದರು.

ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ, ಸಚಿವರಾದ ಜಿ. ಪರಮೇಶ್ವರ್, ಎನ್. ಚಲುವರಾಯಸ್ವಾಮಿ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್, ಮಧು ಬಂಗಾರಪ್ಪ, ಶಾಸಕರಾದ ಲಕ್ಷ್ಮಣ ಸವದಿ, ಶಿವಲಿಂಗೇಗೌಡ, ರಿಜ್ವಾನ್ ಅರ್ಷದ್, ಬೈರತಿ ಸುರೇಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಸ್ಥಳಕ್ಕೆ ಆಗಮಿಸಿ ಧರಣಿಯಲ್ಲಿ ಭಾಗಿಯಾಗಿದ್ದರು. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರಾಮಸ್ಥರೊಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಅಭಿವೃದ್ಧಿ ಸಂವಾದಬಿಜೆಪಿ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಿರಿ: ಮುರಘೇಂದ್ರಗೌಡ ಪಾಟೀಲಮಹಾತ್ಮ ಗಾಂಧೀಜಿ ಜಯಂತಿ ಪಂಚಾಯಿತಿ ಅಧಿಕಾರಿಗಳ ಗೈರುಹಾಜರಿಹಾವೇರಿ ಜಿಲ್ಲಾಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಇಲ್ಲದೆ ಬಡರೋಗಿಗಳ ಪರದಾಟಚುನಾವಣಾ ಆಯೋಗದ ಕಚೇರಿ ಮುಂದೆ ನಾನು ಪ್ರತಿಭಟನೆ ಮಾಡಿಯೇ ಇಲ್ಲ: ಡಿಕೆಶಿನೀವೆಲ್ಲ ಗಲಾಟೆ ಮಾಡೋಕೆ ಬಂದಿದ್ದೀರಾ? – ಶ್ರೇಯಸ್‌ ಪಟೇಲ್ ಬೆಂಬಲಿಗರ ಮೇಲೆ ಶಿವಲಿಂಗೇಗೌಡ ಗರಂಸಾಗರ | ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್ – 8 ಮಹಿಳೆಯರಿಗೆ ಗಾಯಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು – ತುಂಡು ತುಂಡಾದ ದೇಹಪರಿಷ್ಕರಣೆ ಬಳಿಕ 1 ತಿಂಗಳಲ್ಲಿ 1.37 ಲಕ್ಷ ಮತದಾರರ ಹೆಚ್ಚಳ – ರಾಜ್ಯದಲ್ಲಿ 84,900 ಫಾರ್ಮ್‌ 7 ಸಲ್ಲಿಕೆಕಿಡ್ನ್ಯಾಪ್‌ ನಾಟಕವಾಡಿ 90 ಲಕ್ಷಕ್ಕೆ ಡಿಮ್ಯಾಂಡ್‌ – ತಂದೆಗೆ ಯಾಮಾರಿಸಲು ಯತ್ನಿಸಿದ ಮಗ ಅರೆಸ್ಟ್‌