LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಂಡ ಅಂತ್ಯಸಂಸ್ಕಾರಕ್ಕೆ ಬರಬಾರದು – ಡೆತ್‌ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ

Advertisement
Advertisement
Advertisement

ಚಿಕ್ಕಬಳ್ಳಾಪುರ: ವರದಕ್ಷಿಣೆ  ಕಿರುಕುಳ ಹಾಗೂ ಕೌಟುಂಬಿಕ ಕಲಹದಿಂದ ಮನನೊಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ  ಜಿಲ್ಲೆಯ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಮಮತಾಶ್ರೀ (26) ಮೃತ ದುರ್ದೈವಿ. ಕಳೆದ 5 ವರ್ಷಗಳ ಹಿಂದೆ ಮೋಹನ್ ರೆಡ್ಡಿ ಹಾಗೂ ಮಮತಾಶ್ರೀ ವಿವಾಹವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಗಂಡು ಮಗುವಿದ್ದು, ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ವಾಸವಾಗಿದ್ದರು. ಕಳೆದ ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ವೈಮನಸ್ಸು ಹಾಗೂ ಕೌಟುಂಬಿಕ ಕಲಹದಿಂದ ಮನನೊಂದಿದ್ದ ಮಮತಾಶ್ರೀ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. 

ಡೆತ್‌ನೋಟ್‌ನಲ್ಲಿ ತಮ್ಮ ಮಗುವನ್ನು ಪೋಷಕರ ವಶಕ್ಕೆ ನೀಡುವಂತೆ ಹಾಗೂ ತನ್ನ ಅಂತ್ಯಸಂಸ್ಕಾರದಲ್ಲಿ ಪತಿ ಪಾಲ್ಗೊಳ್ಳಬಾರದು ಎಂದು ಬರೆದಿದ್ದಾರೆ ಎನ್ನಲಾಗಿದೆ. ಮೃತ ಮಮತಾಶ್ರೀ ತಂದೆ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SIR ನಮೂನೆ ಹಿಂದಿರುಗಿಸಲು ಇಂದೇ ಕೊನೆಯ ದಿನ; ತಪ್ಪಿದ್ರೆ ಮತದಾರರ‌ ಪಟ್ಟಿಯಿಂದ ಹೆಸರು ಡಿಲೀಟ್ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು – ನಿವೃತ್ತ ಶಿಕ್ಷಕನ ಬರ್ಬರ ಹತ್ಯೆಅಪಾರ್ಟ್‌ಮೆಂಟ್ ಮನೆ ಬೀಗ ಮುರಿದು 1.55 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳವುಹೆಂಡತಿಯ ಹತ್ಯೆಗೈದ BSF ಯೋಧ – ಮಹಡಿಯಿಂದ ಬಿದ್ದು ಸಾವು ಎಂದು ಬಿಂಬಿಸಲು ಯತ್ನಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ; ಮನೆಗಳ ಬಳಿಯೇ ಮರಿಗಳ ಓಡಾಟಗಂಡ ಅಂತ್ಯಸಂಸ್ಕಾರಕ್ಕೆ ಬರಬಾರದು – ಡೆತ್‌ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ2 ಕೋಟಿ ಮೌಲ್ಯದ ಕಟ್ಟಿಂಗ್ ಟೂಲ್ಸ್ ಕಳ್ಳತನ – ಐವರು ಅರೆಸ್ಟ್‌ಹೂಳಿನಲ್ಲಿ ಸಿಲುಕಿ ಬೋಟ್ ಮುಳುಗಡೆ; ನಾಲ್ವರು ಮೀನುಗಾರರ ರಕ್ಷಣೆಕಾನೂನು ಹೇಳಿದಂತೆ ನಡೆಯುತ್ತೇವೆ – ನೈಸ್ ಯೋಜನೆ ಬಗ್ಗೆ ಹೆಚ್‌ಡಿಕೆ ಪತ್ರಕ್ಕೆ ಡಿಕೆಶಿ ಪ್ರತಿಕ್ರಿಯೆಕೊಲೆ ಆರೋಪಿ ಪವಿತ್ರಾಗೌಡ ಜೈಲಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌