LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ H1N1; ಇಬ್ಬರು ಶಿಕ್ಷಕರಿಗೆ ಸೋಂಕು ದೃಢ

Advertisement
Advertisement
Advertisement

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1  ದೃಢಪಟ್ಟಿದ್ದು, ಆತಂಕ ಮೂಡಿಸಿದೆ.

ಸದ್ಯಕ್ಕೆ ಹೈಸ್ಕೂಲ್ ಮಾತ್ರ ಬಂದ್ ಮಾಡಲಾಗಿದೆ. ಮಕ್ಕಳಿಗೆ ಆನ್‌ಲೈನ್ ಮೂಲಕ ಕ್ಲಾಸ್ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಪ್ರೈಮರಿ ಶಾಲೆ ಸದ್ಯ ಓಪನ್ ಆಗಿದೆ. ಹಂತ ಹಂತವಾಗಿ ಶಾಲೆ ರಿ-ಓಪನ್ ಆಗಲಿದೆ. ಒಟ್ಟು 500 ಮಕ್ಕಳಿಗೆ ಶೀತ ಜ್ವರ ಬಂದಿತ್ತು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಷನ್ ಮಾಡಿದ್ದೇವೆ. ಆತಂಕ ಬೇಡ.. ಮಕ್ಕಳಿಗೆ ಯಾರಿಗೂ H1N1 ಕಾಣಿಸಿಕೊಂಡಿಲ್ಲ. ಸುತ್ತಮುತ್ತ ಬೀದಿಬದಿ ಆಹಾರ ತಯಾರಿ ಮಾಡುತ್ತಾರೆ. ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಹೀಗಾಗಿ ನಾವು ದೂರು ಕೊಟ್ಟಿದ್ದೇವೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ. 

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಹೆಚ್1ಎನ್1 ಕಾಣಿಸಿಕೊಂಡಿಲ್ಲ. ಇಬ್ಬರು ಶಿಕ್ಷಕರಲ್ಲಿ ಎಚ್1ಎನ್1 ಕಾಣಿಸಿಕೊಂಡಿತ್ತು. ಮಕ್ಕಳಿಗೆ ಟೆಸ್ಟ್ ಮಾಡಿಸಿ ಅಂತಾ ಪೋಷಕರಿಗೆ ಶಾಲೆ ಆಡಳಿತ ಮಂಡಳಿ ಸೂಚನೆ ನೀಡಿದೆ. 2000 ಮಕ್ಕಳಿಗೆ ಟೆಸ್ಟ್ ಆಗಿದ್ದು, ಯಾರಿಗೂ ಹೆಚ್1ಎನ್1 ಇಲ್ಲ. ನೆಗಡಿ, ಕೆಮ್ಮು ಮತ್ತು ಜ್ವರ ಇದೆ. ಆದರೆ ಎಚ್1ಎನ್1 ಇಲ್ಲ. ಆರೋಗ್ಯ ಹಿತದೃಷ್ಟಿಯಿಂದ ಮೂರು ದಿನ ಶಾಲೆ ಕ್ಲೋಸ್ ಮಾಡಲಾಗಿತ್ತು. ಸದ್ಯ ಶಾಲೆ ಕ್ಲೋಸ್ ಮಾಡಿಲ್ಲ. ಶಾಲೆ ನಡೆಯುತ್ತಾ ಇದೆ. ಕಳೆದ ವಾರ ಮಕ್ಕಳಲ್ಲಿ ಅನಾರೋಗ್ಯ ಕಂಡು ಬಂದಿತ್ತು. ಕಳೆದ ವಾರ ಮೂರು ದಿನ ಶಾಲೆ ಬಂದ್ ಮಾಡಲಾಗಿತ್ತು. ಈಗ ಮಕ್ಕಳು ರಿಕವರ್ ಆಗಿದ್ದಾರೆ. ಫ್ಲೂ ಇರುವ ಮಕ್ಕಳನ್ನು ಶಾಲೆಗೆ ಬರಬೇಡಿ ಶಾಲಾ ಅಡಳಿತ ಮಂಡಳಿ ಸೂಚನೆ ನೀಡಿದೆ. ಸದ್ಯ ಶಾಲೆ ಎಂದಿನAತೆ ಕಾರ್ಯಾಚರಣೆ ಮಾಡ್ತಿದೆ. ಶಾಲಾ ಆವರಣದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಅಂತ ಪಾಲಿಕೆಗೆ ಆಡಳಿತ ಮಂಡಳಿ ಆಗ್ರಹ ಮಾಡಿದೆ.

ಆರೋಗ್ಯ ಇಲಾಖೆ ಆಯುಕ್ತ ಗುರುದತ್ ಹೆಗ್ಡೆ ಮಾತನಾಡಿ, ಮಕ್ಕಳಿಗೆ ಹೆಚ್1ಎನ್1 ಅನ್ನೋದು ಸುಳ್ಳು. ಇದು ಸುಳ್ಳು ಮಾಹಿತಿ. ಯಾರೂ ಇದನ್ನ ಸ್ಪ್ರೆಡ್ ಮಾಡಬೇಡಿ. ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 ಕಾಣಿಸಿಕೊಂಡಿದೆ. ಮಕ್ಕಳಿಗೆ ಕಾಣಿಸಿಕೊಂಡಿಲ್ಲ. ಪ್ಯಾನಿಕ್ ಆಗಿ ಮಕ್ಕಳು ಶಾಲೆಗೆ ಹೋಗಿಲ್ಲ. ಅಷ್ಟೇ ಯಾರು ಆತಂಕ ಪಡುವಂತಿಲ್ಲ. ಸಾರ್ವಜನಿಕವಾಗಿ ಪ್ಯಾನಿಕ್ ಆಗುತ್ತೆ ಯಾರು ಈ ಥರ ಸುದ್ದಿ ಮಾಡಬೇಡಿ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ಯಾನಿಕ್ ಆಗೋ ರೀತಿ ಮಾಡಬಾರದು. ಈ ಥರ ವಿಚಾರ ನಮ್ಮ ಗಮನಕ್ಕೆ ತಂದು ಸುದ್ದಿ ಮಾಡಿ. ಇದು ಸುಳ್ಳು ದಯಮಾಡಿ ಯಾರೂ ಆತಂಕ ಪಡಬೇಡಿ ಎಂದು ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ಲೈವುಡ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಸುಟ್ಟು ಭಸ್ಮಬೆಳ್ಳಂದೂರು ಪೊಲೀಸರ ಭರ್ಜರಿ ಬೇಟೆ – ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡ್ತಿದ್ದ 800 ಕೆಜಿ ಜಿಲೆಟಿನ್ ಜಪ್ತಿಮದುವೆ ಮನೆಯಲ್ಲೂ ʻಡಿ ಬಾಸ್‌, ಡಿ ಬಾಸ್‌ʼ ಜೈಕಾರ – ಫ್ಯಾನ್ಸ್‌ಗೆ ಬುದ್ಧಿ ಹೇಳಿದ ವಿಜಯಲಕ್ಷ್ಮಿಬಿಜೆಪಿ ಐಟಿ ಸೆಲ್‌ನಿಂದ ಅಮಿತ್ ಮಾಳವೀಯ ಔಟ್‌, ದೀಪಕ್ ಮ್ಹಾಸ್ಕೆಗೆ ಜವಾಬ್ದಾರಿISI ಬೆಂಬಲಿತ ಉಗ್ರ ಜಾಲದ ವಿರುದ್ಧ ಕಾರ್ಯಾಚರಣೆ – ಕರ್ನಾಟಕದಲ್ಲಿ ಮೂವರು ವಶಕ್ಕೆದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾಪ್ರಧಾನಿ ಮೋದಿ ಭೇಟಿಯಾದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ಪಾವನಾ ಹೊಸ ಲುಕ್ – ‘ಡಿಯರ್ ಹಸ್ಬೆಂಡ್’ ಚಿತ್ರತಂಡ ಸೇರಿದ ನಟಿಕೋಟೇಶ್ವರದಲ್ಲಿ ಗಮನಸೆಳೆದ ನಾಗಬನ ಮರಳು ಶಿಲ್ಪಮದುವೆಯಾಗುವಂತೆ ಒತ್ತಾಯ – ಪ್ರೇಯಸಿಯನ್ನು ಕೊಂದು ಗೋಣಿ ಚೀಲದಲ್ಲಿ ಶವ ಬಚ್ಚಿಟ್ಟು ಪ್ರಿಯಕರ ಪರಾರಿ