LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೈಸ್ ಯೋಜನೆ ಸರ್ಕಾರ ವಶಪಡಿಸಿಕೊಳ್ಳಬೇಕು – ಜೆಡಿಎಸ್ ನಿಯೋಗದಿಂದ ಸಿಎಸ್‌ಗೆ ಮನವಿ ಸಲ್ಲಿಕೆ

Advertisement
Advertisement
Advertisement

ಬೆಂಗಳೂರು: ನೈಸ್ ಯೋಜನೆ ಸರ್ಕಾರ ಕೂಡಲೇ ವಶಪಡಿಸಿಕೊಳ್ಳಬೇಕು. ಟೋಲ್ ಸಂಗ್ರಹ ನಿಲ್ಲಿಸಬೇಕು ಅಂತ ಜೆಡಿಎಸ್ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಕೆ ಮಾಡಿದೆ.

ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ನೇತೃತ್ವದ ಶಾಸಕರ ನಿಯೋಗ ಸಿಎಸ್‌ಗೆ ಮನವಿ ಸಲ್ಲಿಸಿದ್ರು

ಮನವಿ ಸಲ್ಲಿಕೆ ಬಳಿಕ ಮಾತನಾಡಿದ ಸುರೇಶ್ ಬಾಬು, ನೈಸ್ ಯೋಜನೆಯಲ್ಲಿ ಹಗಲು ದರೋಡೆ ಆಗ್ತಿದೆ. ಯಾರು ಇವರ ರಕ್ಷಣೆ ಮಾಡ್ತಾ ಇದ್ದಾರೆ. ಹೈಕೋರ್ಟ್ ಕೂಡಾ ಟೋಲ್ ಸಂಗ್ರಹ ಮಾಡಬಾರದು ಅಂತ ಹೇಳಿದೆ. ಹೀಗಿದ್ರೂ ಟೋಲ್ ಸಂಗ್ರಹ ನಿಲ್ಲಿಸಿಲ್ಲ. ಕೋರ್ಟ್ ಆದೇಶ ಸರ್ಕಾರ ಉಲ್ಲಂಘನೆ ಮಾಡಿದೆ. ಹೀಗಾಗಿ ಸಿಎಸ್ ಮನವಿ ಮಾಡಿದ್ದೇವೆ. ರಾಜ್ಯಪಾಲರಿಗೆ 4 ಗಂಟೆಗೂ ದೂರು ಕೊಡ್ತೀವಿ ಎಂದರು.

ರಾಜ್ಯ ಸರ್ಕಾರ ಇದಕ್ಕೆ ಒಪ್ಪದೇ ಹೋದ್ರೆ ಕೇಂದ್ರ ಸರ್ಕಾರದ ಮೊರೆ ಹೋಗ್ತೀವಿ.ರಾಷ್ಟ್ರಪತಿಗಳಿಗೂ ದೂರು ಕೊಡೊ ಕೆಲಸ ಮಾಡ್ತೀವಿ. ಕೋರ್ಟ್ ಆದೇಶ ಪಾಲನೆ ಸರ್ಕಾರ ಮಾಡಬೇಕು. ರೈತರ ಭೂಮಿಗೆ ಹಣ ಕೊಡಬೇಕು ಅಂತ ಆಗ್ರಹ ಮಾಡಿದ್ರು.

ವಿಧಾನ ಪರಿಷತ್ ಜೆಡಿಎಸ್ ನಾಯಕ ಭೋಜೇಗೌಡ ಮಾತಾಡಿ, ನೈಸ್ ವಿಚಾರದಲ್ಲಿ ಕೋರ್ಟ್ ಆದೇಶ ಮಾಡಿದೆ. ದೇಶದ ದೊಡ್ಡ ಅಕ್ರಮ ಅಂತ ಕೋರ್ಟ್ ಹೇಳಿದೆ. ಟೋಲ್ ಸಂಗ್ರಹ ನಿಲ್ಲಿಸಬೇಕು. ರೈತರಿಗೆ ಬಾಕಿ ಹಣ ಕೊಡಬೇಕು ಅಂತ ಸರ್ಕಾರವನ್ನ ಒತ್ತಾಯ ಮಾಡಿದ್ರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಲಕ್ಷ್ಮೀ ಹೆಬ್ಬಾಳಕರ್ಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಮೈಸೂರು ದಸರೆಗೆ ದುಬಾರೆಯ 5 ಆನೆಗಳ ಪಯಣಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- UP ವಿದ್ಯಾರ್ಥಿನಿಯ ಅರ್ಜಿ ವಜಾಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 19 ದಿನದಲ್ಲಿ 2.81 ಕೋಟಿ ಕಾಣಿಕೆ ಸಂಗ್ರಹಹನೂರು ಎನ್‌ಕೌಂಟರ್‌ ಪ್ರಕರಣ ಸಿಐಡಿಗೆ ಹಸ್ತಾಂತರಅಕ್ಕಿಯನ್ನು ಎಥೆನಾಲ್‌ ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದೇಕೆ?- ಪ್ರಿಯಾಂಕ್ ಖರ್ಗೆಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ“ಮನೆಗೆಲಸ ಮಾಡು, ವೃದ್ಧ ಪೋಷಕರನ್ನು ನೋಡಿಕೊಂಡಿರು”- ಪತ್ನಿಗೆ ಪತಿ ಆದೇಶಿಸುವಂತಿಲ್ಲಭ್ರಷ್ಟಾಚಾರ ಆರೋಪಿಗೆ ರಾಜಾತಿಥ್ಯ – ನ್ಯಾಯಾಧೀಶರ ದಿಢೀರ್ ರೇಡ್‌ನಲ್ಲಿ ಅಕ್ರಮ ಬಯಲು