LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಾಂಧೀಜಿ–ಶಾಸ್ತ್ರೀ ಜಯಂತಿ: ಭಜನೆ ಮೂಲಕ ನಮನ

Advertisement

ಬಾಗಲಕೋಟೆ: ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲಬಹದ್ದೂರ ಶಾಸ್ತ್ರೀ ಅವರ ಜನ್ಮದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

news_1790917799_0_313.webp

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಇಬ್ಬರೂ ಭಾರತ ಕಂಡ ಅಪ್ರತಿಮ ವ್ಯಕ್ತಿತ್ವಗಳಾಗಿದ್ದು ಶಾಸ್ತ್ರೀಜಿಯವರ ಧೈರ್ಯ, ದಿಟ್ಟ ನಿರ್ಧಾರ, ಪ್ರಾಮಾಣಿಕತೆಗಳ ಮೂಲಕ ದೇಶದ ಅಸ್ಮಿತೆಯನ್ನು ಕಾಪಾಡುವಲ್ಲಿ ತಮ್ಮದೆತಾದ ಛಾಪು ಮೂಡಿಸಿದ್ದಾರೆ. ಪ್ರಧಾನಿಯಾಗಿ ಸೇವೆ ಸಲ್ಲಿಸಿದರೂ ಒಂದು ಸ್ವಂತ ಮನೆಯನ್ನು ಹೊಂದಿರಲಿಲ್ಲ. ಅವರ ಮಕ್ಕಳು ಸಾರ್ವಜನಿಕ ಬಸ್ ಗಳಲ್ಲಿ ಶಾಲೆಗೆ ಹೋಗುತ್ತಿದ್ದರು. ಲಲಿತಾ ಶಾಸ್ತ್ರೀಯವರು ಕೂಡ ಅವರ ಪ್ರಾಮಾಣಿಕತೆಗೆ ಬೆನ್ನೆಲುಭಾಗಿದ್ದರು. ದೇಶ ಸಂಕಟದಲ್ಲಿದ್ದಾಗ ದಿನಕ್ಕೆ ಒಂದು ಹೊತ್ತು ಊಟ ಮಾಡದಂತೆ ಕರೆ ಕೊಟ್ಟ ಅವರು ಮನೆಯಲ್ಲಿಯೂ ಅಡುಗೆ ಮಾಡದಂತೆ ಸೂಚಿಸಿದ್ದರು ಇದು ಅವರ ಪ್ರಾಮಾಣಿಕತೆಯ ಬದ್ಧತೆಗೆ ಸಾಕ್ಷ್ಯವಾಗಿದೆ ಎಂದರು.

ಗಾಂಧೀಜಿಯವರು ಕೇವಲ ವ್ಯಕ್ತಿಯಾಗಿರದೇ ಒಂದು ದೊಡ್ಡ ಶಕ್ತಿಯಾಗಿದ್ದರು. ಜಗತ್ತೆ ಅವರ ವ್ಯಕ್ತಿತ್ವಕ್ಕೆ ಅನುಯಾಯಿಯಾಗಿತ್ತು. ಅಹಿಂಸೆ, ಸ್ವಚ್ಚತೆ ಮತ್ತು ಸತ್ಯ ಈ ಮೂರು ಸಂದೇಶಗಳನ್ನು ನೀಡುವುದರ ಮೂಲಕ ಮಹಾತ್ಮ ಎಂಬ ಹೆಸರಿನಿಂದ ಶಸ್ತ್ರಾಸ್ತ್ರಗಳ ಪ್ರಯೋಗವಿಲ್ಲದೇ ದೇಶಕ್ಕೆ ಸ್ವತಂತ್ರ ತರುವಲ್ಲಿ ಅವರ ಸತ್ಯಾಗ್ರಹಗಳು ಪರಿಣಾಮಕಾರಿಯಾದಂತಹುಗಳು ಎಂದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದ ವತಿಯಿಂದ ಗಾಂಧೀಜಿ ಭಜನೆಗಳನ್ನು ಪ್ರಸ್ತುತಪಡಿಸುವುದರ ಮೂಲಕ ಅವರ ಜೀವನ ಸಂದೇಶ ಮತ್ತು ಮೌಲ್ಯಗಳನ್ನು ಸ್ಮರಣೆ ಮಾಡಿಕೊಳ್ಳುವುದರ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾಂಧೀಜಿ–ಶಾಸ್ತ್ರೀ ಜಯಂತಿ: ಭಜನೆ ಮೂಲಕ ನಮನಚುನಾವಣಾ ಆಯೋಗದ ಕಚೇರಿ ಮೆಟ್ಟಿಲಲ್ಲೇ ಸಿಎಂ, ಸಚಿವರ ಧರಣಿ; ಎಫ್‌ಐಆರ್‌ಗೆ ಪಟ್ಟುಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡೇ 40 ಸಾವಿರ ಕಿಮೀ ಪಾದಯಾತ್ರೆ ಮಾಡಿದ ಗೀತಾ ಮಾತಾಜಿ!ನೈಸ್‌ ವಿಚಾರವಾಗಿ ಡಿಕೆಶಿ ಭೇಟಿಯಾಗಿದ್ದು ಸತ್ಯ – ಸಿದ್ದಲಿಂಗ ಮಹಾಸ್ವಾಮಿಗಳಿಂದ ಸ್ಪಷ್ಟನೆಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ: ಛಲವಾದಿಸಚಿವ ಬಾಲಕೃಷ್ಣ ನಕಲಿ ದಾಖಲೆ ಸೃಷ್ಟಿಸಿ 36 ಎಕರೆ ಜಾಗ ಕಬಳಿಸಿದ್ದಾರೆ: ಮಂಜುನಾಥ್ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ; ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆ, ಹಲವೆಡೆ ಹಾನಿರೈತರಿಗೆ 25 ಸಾವಿರ ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ಭಾಗಿ- ಛಲವಾದಿವಿಧಾನಸೌಧದ ಮೆಟ್ಟಿಲ ಮೇಲೆ ಉರ್ದು ಭಾಷಾ ಹಬ್ಬ ಇಲ್ಲ: ಸಿಎಂ ಕಚೇರಿ