LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ ಫಾರ್ಮ್ 7 ದುರುಪಯೋಗ, SIT ರಚನೆ ಮಾಡಲಿ: ರಾಮಲಿಂಗಾರೆಡ್ಡಿ

Advertisement

ಬೆಂಗಳೂರು: ರಾಜ್ಯದಲ್ಲಿ ಫಾರ್ಮ್ 7 ದುರುಪಯೋಗವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆ ಮಾಡಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.

ಜಯನಗರದಲ್ಲಿ ಫಾರ್ಮ್ 7 ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಸೌಮ್ಯಾ ರೆಡ್ಡಿ ದೂರು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಈಗಾಗಲೇ FIR ದಾಖಲಾಗಿದೆ ಎಂದು ಹೇಳಿದರು.

ಸಿಎಂ ಜೊತೆ ಸೇರಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಬಿಜೆಪಿ ಶಾಸಕರ ಕಚೇರಿಯಿಂದ RSS ಕುಮ್ಮಕ್ಕಿನಿಂದ ಕಾಂಗ್ರೆಸ್ ಮತಗಳನ್ನು ಕದಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಜಯನಗರದಲ್ಲಿ ಈ ಬಗ್ಗೆ ಆಡಿಯೋ ಕೂಡ ವೈರಲ್ ಆಗಿದೆ. ಸೌಮ್ಯಾ ರೆಡ್ಡಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು. RSS ಕುಮ್ಮಕ್ಕಿನಿಂದ ಹಾಗೂ ಬಿಜೆಪಿ ಪಕ್ಷದಿಂದ ಈ ಕೆಲಸ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಆಡಿಯೋ ಆಧರಿಸಿ ತನಿಖೆ ನಡೆಸಬೇಕು ಎಂದು ಹೇಳಿದರು.

CID ತನಿಖೆ ನಡೆಸಲಿ ಅಥವಾ SIT ರಚನೆ ಮಾಡಲಿ. ರಾಜ್ಯದ ಹಲವು ಕಡೆ ದೂರುಗಳು ದಾಖಲಾಗುತ್ತಿವೆ. ಹೀಗಾಗಿ ಸರ್ಕಾರ SIT ರಚಿಸಿ ತನಿಖೆ ನಡೆಸಬೇಕು ಎಂದು ರಾಮಲಿಂಗಾರೆಡ್ಡಿ ಒತ್ತಾಯಿಸಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಡುರಾತ್ರಿ ಚನ್ನಪಟ್ಟಣ ಆಸ್ಪತ್ರೆಗೆ ಯು.ಟಿ ಖಾದರ್‌ ಭೇಟಿ – ಸಿಬ್ಬಂದಿಗೆ ತರಾಟೆಮೈಸೂರು ಅರಮನೆಗೆ ನಟಿ ಕಾಜಲ್ ಅಗರ್ವಾಲ್ ಭೇಟಿ – ಸೆಲ್ಫಿಗೆ ಮುಗಿಬಿದ್ದ ಜನಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ – ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ, ಜೆಡಿಎಸ್‌ ದೂರುತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನದೇವರ ಕೋಣೆಯಲ್ಲೇ ಕೆಜಿಗಟ್ಟಲೆ ಗಾಂಜಾ ಸಂಗ್ರಹ; 22 ವರ್ಷದ ಯುವಕ ಅರೆಸ್ಟ್ನನಗೆ ಮದ ಇದ್ದರೆ ಇಳಿಸಲಿ, ನಾನು ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ: ಡಿಕೆಶಿಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ – ಮುಗಿಲುಮುಟ್ಟಿದ ಪೋಷಕರ ಆಕ್ರಂದನಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ – ಮುಗಿಲುಮುಟ್ಟಿದ ಪೋಷಕರ ಆಕ್ರಂದನಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ – ಮುಗಿಲುಮುಟ್ಟಿದ ಪೋಷಕರ ಆಕ್ರಂದನರಾಜ್ಯದಲ್ಲಿ ಫಾರ್ಮ್ 7 ದುರುಪಯೋಗ, SIT ರಚನೆ ಮಾಡಲಿ: ರಾಮಲಿಂಗಾರೆಡ್ಡಿ