ಬೆಳಗಾವಿ: ಫೇಸ್ಬುಕ್ನಲ್ಲಿ ಪ್ರೀತಿಯ ಬಲೆ ಬೀಸಿ ವಿದೇಶದಿಂದ ಲವ್ಗಿಫ್ಟ್ ಕಳುಹಿಸುವುದಾಗಿ ನಂಬಿಸಿ, 7.05 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಯರಗಟ್ಟಿ ತಾಲೂಕಿನ ಕುರುಬಗಟ್ಟಿಯ ಲಕ್ಕಪ್ಪ ಸನ್ನಿಂಗನವರ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೋಸಂಜೆಲ್ ಪಾಜ್ ಹೆಸರಿನ ಫೇಸ್ಬುಕ್ ಖಾತೆಯಿಂದ ಸ್ನೇಹದ ಕೋರಿಕೆ ಸಲ್ಲಿಸಿ, ಪರಿಚಯ ಬೆಳೆಸಿಕೊಂಡು, ಮೊಬೈಲ್ ಸಂಖ್ಯೆ ಪಡೆದು ವಾಟ್ಸಾಪ್ ಮೂಲಕ ನಿರಂತರ ಕರೆ ಹಾಗೂ ಚಾಟ್ ನಡೆಸಿ ಪ್ರೀತಿಯ ನಾಟಕವಾಗಿದ್ದಾರೆ. ನಂತರ ನನಗೆ 80 ಸಾವಿರ ಪೌಂಡ್ (1.03 ಕೋಟಿ ರೂ.) ಮೌಲ್ಯದ ದುಬಾರಿ ಗ್ಟ್ಿ ಕಳುಹಿಸುತ್ತಿದ್ದು, ಪಾರ್ಸೆಲ್ ಬಿಡುಗಡೆ, ಮನಿ ಲಾಂಡರಿಂಗ್ ಸರ್ಟಿಫಿಕೇಟ್, ಆದಾಯ ತೆರಿಗೆ ಪಾವತಿಗೆ ಬೇಕಿದೆ ಎಂದು ಹಂತ ಹಂತವಾಗಿ ಏ.17ರಿಂದ ಮೇ 22ರವರೆಗೆ ವಿವಿಧ ಖಾತೆಗಳಿಗೆ ಒಟ್ಟು 7.05 ಲ ಹಣ ಆನ್ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ಮೋಸ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



