LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತುರ್ತು ಪರಿಸ್ಥಿತಿ ಇದು ಕಾಂಗ್ರೆಸ್ಸ ಮಾಡಿದ ಪ್ರಜಾಪ್ರಭುತ್ವದ ಕಗ್ಗೊಲೆ: ವೀರಣ್ಣ ಚರಂತಿಮಠ

Advertisement

ತುರ್ತು ಪರಿಷ್ಥಿಯಲ್ಲಿ ಸೇರೆವಾಸ ಅನುಭವಿಸಿದ ಹಿರಿಯರಿಗೆ ಸನ್ಮಾನ


ಬಾಗಲಕೋಟೆ : ೧೯೭೫ ಜೂನ ೨೫ ದೇಶದ ಪ್ರಜಾಪ್ರಭುತ್ವದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯವಾಗಿರುವ ತುರ್ತುಪರಿಸ್ಥಿತಿ ಹೇರಿದ ದಿನ. ತಮ್ಮ ಸ್ವಾರ್ಥ ಅಧಿಕಾರದ ಹಪಾಹಪಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅಪಚಾರ ಬಗೆದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿತು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ಅವರು ನಗರದ ಶಿವಾನಂದ ಜಿನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಗುರುವಾರ ಹಮ್ಮಿಕೊಂಡ ತುರ್ತು ಪರಿಸ್ಥಿತಿಯಯ ಕರಳಾದಿನದ ಆಚರಣೆಯಲ್ಲಿ ತುರ್ತು ಪರಿಷ್ಥಿತಿಯಲ್ಲಿ ಸೇರೆವಾಸ ಅನುಭವಿಸಿದ ಹಿರಿಯರಿಗೆ ಗೌರವ ಸನ್ಮಾನವನ್ನು ನೆರೆವೆರಿಸಿ ಮಾತನಾಡಿದ ಅವರು ಜೂನ್ ೨೫, ೧೯೭೫ ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಆಂತರಿಕ ಭದ್ರತೆಯ ನೆಪದಲ್ಲಿ ಹೇರಲಾದ ಈ ತುರ್ತು ಪರಿಸ್ಥಿತಿಯು ಸುಮಾರು ೨೧ ತಿಂಗಳ ಕಾಲ ಮುಂದುವರೆಯಿತು. ಈ ಅವಧಿಯಲ್ಲಿ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು, ಪತ್ರಿಕಾ ಸ್ವಾತಂತ್ರö್ಯವನ್ನು ಹತ್ತಿಕ್ಕಲಾಯಿತು ಮತ್ತು ಲಕ್ಷಾಂತರ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಜೈಲಿನಲ್ಲಿ ಇರಿಸಲಾಯಿತು, ಇದು ಕಾಂಗ್ರೆಸ್ಸ ಮಾಡಿದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದ ಎಲ್ಲ ಮಹನೀಯರ ಧೈರ್ಯ, ತ್ಯಾಗ ಮತ್ತು ಬಲಿದಾನಗಳಿಗೆ ಗೌರವಪೂರ್ವಕ ಪ್ರಣಾಮಗಳನ್ನು ತಿಳಿಸಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಒಂದು ಕೋಟಿಗೂ ಅಧಿಕ ಜನರ ಮೇಲೆ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ, ಲಕ್ಷಕ್ಕೂ ಹೆಚ್ಚು ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ಬಂಧನ ಮತ್ತು ಪತ್ರಿಕಾ ಸ್ವಾತಂತ್್ಯÀ್ತದ ಹರಣದಂತಹ ಭಯಾನಕ ದೌರ್ಜನ್ಯಗಳನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ. ದೇಶದ ಜನತೆ ಈ ಪ್ರಮಾದವನ್ನು ಎಂದಿಗೂ ಕ್ಷಮಿಸುವುದಿಲ್ಲ. ಭಾರತೀಯ ಜನತಾ ಪಕ್ಷದವರು ನಿಜವಾದ ಸಂವಿಧಾನ ರಕ್ಷಕರು ಎಂದರು.

ತುರ್ತು ಪರಿಷ್ಥಿತಿಯಲ್ಲಿ ಸೇರೆವಾಸ ಅನುಭವಿಸಿದ ಬಾಗಲಕೋಟೆಯ ಹಿರಿಯರಾದ ಕಲ್ಲಪ್ಪ ಡಂಗೆ, ರಾಮಣ್ಣ ಬಾರಕೇರ,ವಿಠ್ಠಲ್ ಸಾಳುಂಕೆ, ಗುಂಡುರಾವ ಶಿಂಧೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೇರೆವಾಸ ಅನುಭವಿಸಿದ ಗುಂಡು ಶಿಂಧೆ ಮಾತನಾಡಿದರು.

ಮಹೇಶ ಅಥಣಿ, ಬಸವರಾಜ ಯಂಕAಚಿ,ಡಾ. ಎಂ. ಎಸ್. ದಡ್ಡೆನ್ನವರ, ಮುತ್ತಣ್ಣ ಬೇಣ್ಣೂರ, ಬಸವರಾಜ ಹುನಗುಂದ, ಸತ್ಯನಾರಾಯಣ ಹೆಮಾದ್ರಿ, ಶಿವಾನಂದ ಟವಳಿ, ದುಂಡಪ್ಪ ಏಳಮ್ಮಿ, ಸುರೇಶ ಮಜ್ಜಿಗಿ, ಶಶಿಕಲಾ ಮಜ್ಜಗಿ, ಶಿವಲೀಲಾ ಸಂಬಣ್ಣವರ, ಜ್ಯೋತಿ ಚವ್ಹಾಣ, ನಾಗರತ್ನ ಹಡಗಲಿ, ವಿಜಯಲಕ್ಷ್ಮಿ ಭದ್ರಶೆಟ್ಟಿ, ರವಿ ಧಾಮಜಿ, ಶ್ರೀಧರ ನಾಗರಬೇಟ್ಟ, ಗೀರಿಶ ಬಾಂಡಗೆ, ರಾಜು ತಾಳಿಕೋಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪೋಟೋ ೦೨ ತುರ್ತು ಪರಿಷ್ಥಿತಿಯಲ್ಲಿ ಜೖಲು ಸೇರೆವಾಸ ಅನುಭವಿಸಿದ ಬಾಗಲಕೋಟೆಯ ಹಿರಿಯರಾದ
ಕಲ್ಲಪ್ಪ ಡಂಗೆ, ರಾಮಣ್ಣ ಬಾರಕೇರ,ವಿಠ್ಠಲ್ ಸಾಳುಂಕೆ, ಗುAಡುರಾವ ಶಿಂಧೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ – ರೆಗ್ಯುಲರ್ ಬೇಲ್‌ಗೆ ಅರ್ಜಿ ಸಲ್ಲಿಸಿದ ವಚನಾನಂದ ಸ್ವಾಮೀಜಿಮೊಹರಂ ವೇಳೆ ದುಷ್ಕೃತ್ಯಕ್ಕೆ ಸಂಚು – ವಿಷ ತುಂಬಿದ 14,900 ಕ್ಯಾಪ್ಸೂಲ್ ಜೊತೆ ಪುಣೆಯಲ್ಲಿ ಓರ್ವನ ಬಂಧನRSS ವಿರುದ್ಧ ಅವಹೇಳನಕಾರಿ ಪೋಸ್ಟ್‌ – ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್‌ ಸಮನ್ಸ್‌ರಾಜ್ಯದ ವಿವಿಧ ಜಿಲ್ಲಾ ಕೋರ್ಟ್‌ಗಳಿಗೆ ಹುಸಿ ಬಾಂಬ್ ಬೆದರಿಕೆಕೆಂಪೇಗೌಡ ಜಯಂತಿ ಆಚರಣೆ ವೇಳೆ ಹೈಡ್ರಾಮಾ – ಪ್ರದೀಪ್‌ ಈಶ್ವರ್‌ ವಿರುದ್ಧ ಆಕ್ರೋಶ ಸ್ಫೋಟರಾಮಮಂದಿರಕ್ಕೆ ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೆ ಲೆಕ್ಕ ಎಲ್ಲಿ – ಬಿ.ಕೆ ಹರಿಪ್ರಸಾದ್‌ ಪ್ರಶ್ನೆಶಾಲೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅತಿಥಿ ಶಿಕ್ಷಕ – ಹೃದಯಾಘಾತದಿಂದ ಸಾವುಕಾರಲ್ಲೇ ಪ್ರೇಮಿಗಳ ಗಲಾಟೆ – ಪೆಟ್ರೋಲ್‌ ಬಾಂಬ್‌ ಸಿಡಿಸಿಕೊಂಡು ಯುವಕ ಆತ್ಮಹತ್ಯೆಮೃತ ಪರುತಗೌಡ ಪಾಟೀಲ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಸತೀಶ್ ಜಾರಕಿಹೊಳಿನಿಸರ್ಗ ಕಾಲೋನಿ ಹಾಗೂ ಫಾರ್ಚುನ ಕಾಲೋನಿ ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಆಸಿಫ್ ( ರಾಜು) ಸೆಟ್