LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಪ್ಪನ ಅಗ್ರಹಾರ ಪೊಲೀಸರಿಂದ ಪ್ರಜ್ವಲ್ ರೇವಣ್ಣಗೆ ಡ್ರಿಲ್

Advertisement

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ಬಳಿ ಮೊಬೈಲ್ ಪತ್ತೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮೊಬೈಲ್, ಸಿಮ್ ಹಾಗೂ ಪೆನ್‌ಡ್ರೈವ್ ಸರಬರಾಜು ಮಾಡಿದ ಆರೋಪದಡಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಆರೋಪಿಗಳನ್ನು ಎದುರುಬದುರು ಕೂರಿಸಿ ವಿಚಾರಣೆ ನಡೆಸಿದ್ದು, ಪ್ರಜ್ವಲ್ ರೇವಣ್ಣಗೆ ಪೊಲೀಸರು ಡ್ರಿಲ್ ನಡೆಸಿದ್ದಾರೆ.

ಜೈಲಿನ ಸೆಲ್‌ನಲ್ಲಿ ಮೊಬೈಲ್ ಬಳಕೆ ಮಾಡಿದ್ದ ಪ್ರಕರಣದಲ್ಲಿ ಇದೀಗ ತನಿಖೆ ಚುರುಕಾಗಿದೆ. ಜೈಲಿನಲ್ಲಿ ನಡೆದ ಸಿಸಿಬಿ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್, ಸಿಮ್, ಹಾಗೂ ನೋಟ್‌ಬುಕ್ ಪತ್ತೆಯಾಗಿತ್ತು. ಮೊದಲಿಗೆ ಮೊಬೈಲ್ ತನ್ನದೇ ಎಂದು ಹೇಳಿದ್ದ ಪ್ರಜ್ವಲ್, ಬಳಿಕ ಉಲ್ಟಾ ಹೊಡೆದಿದ್ದರು. ಮೊಬೈಲ್ ತನ್ನದಲ್ಲ, ಜೊತೆಯಲ್ಲಿದ್ದ ಪ್ರತಾಪ್‌ನದ್ದು ಎಂದು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲ, ಮೊಬೈಲ್‌ನ ಪಾಸ್‌ವರ್ಡ್ ನೀಡದೇ ಪೊಲೀಸರ ವಿಚಾರಣೆಗೆ ಸಹಕರಿಸಿರಲಿಲ್ಲ. ಇದೀಗ ಮೊಬೈಲ್ ಮತ್ತು ಪೆನ್‌ಡ್ರೈವ್‌ನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ನಿನ್ನೆ ಜೈಲಿನಿಂದ ಪ್ರಜ್ವಲ್ ರೇವಣ್ಣನ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಎರಡು ದಿನಗಳ ಕಾಲ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದಿದ್ದು, ಪರಪ್ಪನ ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ನವೀನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಪ್ರಜ್ವಲ್‌ರನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಕೆಲ ಪ್ರಾಥಮಿಕ ಮಾಹಿತಿಯನ್ನು ಪಡೆದ ಬಳಿಕ ಠಾಣೆಯಲ್ಲೇ ಊಟ ನೀಡಲಾಗಿತ್ತು. ಊಟ ಮಾಡಿದ ಬಳಿಕ ಠಾಣೆಯಲ್ಲೇ ಪ್ರಜ್ವಲ್ ನಿದ್ರೆಗೆ ಜಾರಿದ್ದು, ಬೆಳಗ್ಗೆ ಪೊಲೀಸರು ಮತ್ತೆ ವಿಚಾರಣೆ ನಡೆಸಿದ್ದಾರೆ.

ಎಫ್‌ಎಸ್‌ಎಲ್ ತನಿಖೆ ಹಾಗೂ ಪೊಲೀಸ್ ತನಿಖೆಯಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್‌ನಲ್ಲಿ ಪ್ರಜ್ವಲ್‌ಗೆ ಸಂಪರ್ಕ ಹೊಂದಿರುವ ನಂಬರ್‌ಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಜೈಲಿನ ಸೆಲ್‌ನೊಳಗೆ ಮೊಬೈಲ್ ಹೇಗೆ ಬಂತು ಅನ್ನೋದರ ತನಿಖೆ ನಡೆಸಿದಾಗ ಅಸಲಿ ವಿಚಾರ ಹೊರಬಂದಿದೆ. ಪ್ರಜ್ವಲ್‌ಗೆ ಮೊಬೈಲ್ ಹಾಗೂ ಸಿಮ್ ಸರಬರಾಜು ಮಾಡಿರುವ ಆರೋಪ ಐವರು ಪೊಲೀಸರ ಮೇಲಿದೆ. ಇಬ್ಬರು ಮೊಬೈಲ್ ಕೊಟ್ಟಿದ್ರೆ, ಇನ್ನಿಬ್ಬರು ಸಿಮ್ ಕಾರ್ಡ್ ನೀಡಿದ್ದಾರೆ ಎನ್ನಲಾಗಿದೆ. ನಂತರ ಓರ್ವ ಜೈಲು ವಾರ್ಡನ್ ಮೂಲಕ ಪ್ರಜ್ವಲ್ ಕೈಗೆ ಮೊಬೈಲ್ ತಲುಪಿದೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಇದೀಗ ಈ ಐವರು ಆರೋಪಿಗಳ ಜೊತೆ ಪ್ರಕರಣದ A1 ಆರೋಪಿ ಪ್ರತಾಪ್ ಮತ್ತು A2 ಆರೋಪಿ ಪ್ರಜ್ವಲ್ ರೇವಣ್ಣರನ್ನು ಎದುರುಬದುರು ಕೂರಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 10 ಗಂಟೆಯ ಬಳಿಕ ಪ್ರಜ್ವಲ್ ರೇವಣ್ಣಗೆ ಡ್ರಿಲ್ ಶುರು ಮಾಡಿದ ಪೊಲೀಸರು ಮೊಬೈಲ್ ಪಾಸ್‌ವರ್ಡ್ ಕೇಳಿದ್ದಾರೆ. ಪೆನ್‌ಡ್ರೈವ್, ನೋಟ್‌ಬುಕ್, ಮೊಬೈಲ್‌ನಲ್ಲಿ ಪತ್ತೆಯಾದ ನಂಬರ್‌ಗಳು, ಜೈಲಿನ ಸೆಲ್‌ನೊಳಗೆ ಮೊಬೈಲ್ ಹೇಗೆ ಬಂತು, ಮೊಬೈಲ್ ಯಾರು ತಂದುಕೊಟ್ರು, ಸಿಮ್ ಯಾರು ನೀಡಿದ್ರು ಎಂದು ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಈ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆ ಇದೆ. ಮೊಬೈಲ್ ಪಾಸ್‌ವರ್ಡ್‌ನಿಂದ ಹಿಡಿದು ಪೆನ್‌ಡ್ರೈವ್‌ನಲ್ಲಿರುವ ಮಾಹಿತಿ, ಜೈಲಿನ ಸೆಲ್‌ಗೆ ಮೊಬೈಲ್ ತಲುಪಿದ ಮಾರ್ಗದವರೆಗೂ ಪೊಲೀಸರು ಇಂಚಿಂಚು ಮಾಹಿತಿ ಕಲೆಹಾಕಲಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಾಲು ಸಂಗ್ರಹದಲ್ಲಿ ಬೆಮೂಲ್ ಐತಿಹಾಸಿಕ ದಾಖಲೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಹಾಸನಾಂಬ ದೇಗುಲದ ಆವರಣದಲ್ಲಿ ಅವಘಡ, ವಿದ್ಯುತ್ ಶಾಕ್‌ಗೆ ಪ್ರಜ್ಞೆತಪ್ಪಿದ ಕಾರ್ಮಿಕಆರೋಗ್ಯಕರ ಜೀವನಕ್ಕೆ ಸತ್ವಯುತ ಆಹಾರವೇ ಅಡಿಪಾಯ: ಡಾ. ದಿಲೀಪ್ ನಾಟೇಕರರೋಗಿಗಳ ಗುಣಮುಖತೆಗೆ ಆಳವಾದ ಅಧ್ಯಯನ, ಸಮಗ್ರ ಚಿಕಿತ್ಸಾ ವಿಧಾನ ಅಗತ್ಯ: ಡಾ. ಶ್ರೀಪಾದ ಖೆಡೇಕರಮಾರಿಹಾಳ-ಸುಳೇಭಾವಿಯಲ್ಲಿ ನೇಕಾರರ ಪತ್ತಿನ ಸಹಕಾರ ಸಂಘದ ನೂತನ ಶಾಖೆ ಉದ್ಘಾಟಿಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ಅವರೊಳ್ಳಿ ರುದ್ರಸ್ವಾಮಿ ಮಠದಿಂದ ರಾಜಹಂಸಗಡ ಕೋಟೆವರೆಗೆ ಪಾದಯಾತೆ ಸಂಪನ್ನ್ಕಚೇರಿ ಅವಧಿಯಲ್ಲಿ ಢಾಬಾದಲ್ಲಿ ಕುಳಿತು ಮದ್ಯ ಸೇವಿಸಿದ ಖಾನಾಪುರ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹಸುಳೇಭಾವಿಯಲ್ಲಿ ₹1.68 ಕೋಟಿ ವೆಚ್ಚದಲ್ಲಿ ಶ್ರೀ ಮಹಾರಾಣಿ ದೇವಿ ದೇವಸ್ಥಾನ ನಿರ್ಮಾಣಕ್ಕೆ ಚಾಲನೆದಲಿತ ನಾಯಕರ ಏಳಿಗೆ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ- ಜಾರಕಿಹೊಳಿ ಪರ ಡಿಕೆಶಿ ಬ್ಯಾಟಿಂಗ್‌