LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೌನ್ಸೆಲಿಂಗ್ ಜಾಗೃತಿಗೆ 65 ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯಾಗಾರ: ಕೆಇಎ

ಬೆಂಗಳೂರು: ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ 65 ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೇ 25ರಿಂದ 30ರ ವರೆಗೆ ಸಿಇಟಿ ಸೀಟು‌ ಹಂಚಿಕೆ ಮಂಥನ ಕಾರ್ಯಾಗಾರವನ್ನು ಆಯೋಜಿಸಿದ್ದು, ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಮೇ 28ರಂದು ಹೊರತುಪಡಿಸಿ ಎಲ್ಲ ದಿನ ನಿತ್ಯ ಎರಡು ಸೆಷನ್ಸ್ (ಬೆಳಿಗ್ಗೆ 10 ರಿಂದ 12, ಮಧ್ಯಾಹ್ನ‌ 2 ರಿಂದ ಸಂಜೆ 4 ಗಂಟೆವರೆಗೆ) ನಡೆಯಲಿದ್ದು, ನುರಿತ ಹಾಗೂ ಕೆಇಎಯಿಂದ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಥನದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು/ಪೋಷಕರು ಕೆಇಎ ವೆಬ್ ಸೈಟ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡೇ ಕಾಲೇಜುಗಳಿಗೆ ಹೋಗಬೇಕು. ಇದಕ್ಕೆ ವೆಬ್ ಸೈಟ್ ನಲ್ಲಿ ಲಿಂಕ್ ಬಿಟ್ಟಿದ್ದು ಅದರಲ್ಲಿ ಸಮಯ ಹಾಗೂ ಕಾರ್ಯಕ್ರಮ ನಡೆಯುವ ಕಾಲೇಜುಗಳನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ‌ ನೀಡಿದ್ದಾರೆ.

ಎಷ್ಟೊ ಬಾರಿ ವಿದ್ಯಾರ್ಥಿಗಳಿಗೆ ಒಳ್ಳೆಯ ರಾಂಕಿಂಗ್  ಬಂದಿದ್ದರೂ ಆಪ್ಷನ್ಸ್ (Options) ದಾಖಲಿಸುವಾಗ ಆಗುತ್ತಿದ್ದ ಸಣ್ಣಪುಟ್ಟ ತಪ್ಪುಗಳಿಂದಾಗಿ ಅನೇಕ ಮಂದಿಗೆ ಇಷ್ಟದ ಕಾಲೇಜು ಕೈತಪ್ಪಿ ಹೋಗುತ್ತಿತ್ತು. ಇದು ಸೈಬರ್ ಸೆಂಟರ್ ನವರು ಮಾಡುತ್ತಿದ್ದ ಎಡವಟ್ಟುಗಳ ಜೊತೆಗೆ ವಿದ್ಯಾರ್ಥಿ/ಪೋಷಕರಲ್ಲಿನ ಮಾಹಿತಿ ಕೊರತೆ ಕೂಡ ಕಾರಣವಾಗಿತ್ತು. ಈ ಎಲ್ಲ ಕಾರಣಗಳಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ವರ್ಷ ಸೀಟು ಹಂಚಿಕೆ ಮಂಥನ ಆರಂಭಿಸಲಾಯಿತು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಹೀಗಾಗಿ ಈ ಬಾರಿಯೂ ಮತ್ತಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸೀಟು ಹಂಚಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಆಪ್ಷನ್ಸ್ (Options) ದಾಖಲಿಸುವುದು ಹೇಗೆ? ಸೀಟು ಹಂಚಿಕೆ ನಂತರ ಒಪ್ಪಿಗೆಯಾದರೆ ಛಾಯ್ಸ್ ಆಯ್ಕೆ ಹೇಗೆ? ಒಂದು ವೇಳೆ ಇನ್ನೂ ಉತ್ತಮ ಕಾಲೇಜಿನ ಸೀಟು ನಿರೀಕ್ಷೆ ಇದ್ದರೆ ಏನು ಮಾಡಬೇಕು? ಶುಲ್ಕ ಪಾವತಿ ಹೇಗೆ? ಇತ್ಯಾದಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವುದೇ ಈ ಮಂಥನದ ಉದ್ದೇಶ ಎಂದು ಅವರು ವಿವರಿಸಿದ್ದಾರೆ.

ನೀಟ್ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯ ಇಲ್ಲ. ಬೇಕಾದರೆ ಅವರ ಬದಲಿಗೆ‌ ಪೋಷಕರು ಹೋಗಿ ಮಾಹಿತಿ ಪಡೆದರೂ ಸಾಕು ಎಂದು ಅವರು ಸಲಹೆ ನೀಡಿದ್ದಾರೆ.

Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಗ್ಲಾ ವಲಸಿಗರು ಎಂಬ ಶಂಕೆ: ತನಿಖೆ ನಡೆಸಿ 20 ಜನರನ್ನು ಬಿಟ್ಟು ಕಳುಹಿಸಿದ ಬೆಳಗಾವಿ ಪೊಲೀಸರುಬಕ್ರೀದ್ ಸಂದರ್ಭದಲ್ಲಿ ಗೋ ಹತ್ಯೆ ತಡೆಯುವಂತೆ ಕಮಿಷನರ್ ಗೆ ಮನವಿಬಾದಾಮಿ ಅಗಸ್ತ್ಯ ಹೊಂಡದಲ್ಲಿ ಈಜಲು ಹೋದ ಯುವಕ ನಾಪತ್ತೆವರದಕ್ಷಿಣೆ ಕಿರುಕುಳ ಆರೋಪ – ನೇಣು ಬಿಗಿದು ಕಾನ್‌ಸ್ಟೇಬಲ್ ಪತ್ನಿ ಆತ್ಮಹತ್ಯೆಕುಟುಂಬ ಸಮೇತ ರಾಯರ ದರ್ಶನ ಪಡೆದ ಕೆ.ಎಸ್.ಈಶ್ವರಪ್ಪವಿಮಾನ ಟಿಕೆಟ್ ಬುಕ್ಕಿಂಗ್ ಶುಲ್ಕ ದುಪ್ಪಟ್ಟು – ತನಿಖೆಗೆ ಜೋಶಿ ಆದೇಶಕುಡಿದ ಮತ್ತಲ್ಲಿ ಟ್ರಾಫಿಕ್‌ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ವಿಡಿಯೋ ವೈರಲ್‌ಎಲ್ಲಾ ಹೊರೆ ಜನರ ಮೇಲೆ ಹಾಕ್ತಿದ್ರೆ, ಮೋದಿ ಯಾವಾಗ ಜವಾಬ್ದಾರಿ ತಗೋತಾರೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆಆರ್‌ಡಿಪಿಆರ್ ಕಚೇರಿಯಲ್ಲಿ ಗುಂಡು, ತುಂಡು ಪಾರ್ಟಿ: ಎಇಇ ಸೇರಿ ಮೂವರು ಅಮಾನತು