LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಖ್ಯ ಚುನಾವಣಾ ಆಯುಕ್ತರು ಮೋದಿ ಸರ್ಕಾರದ ಕೈಗೊಂಬೆ: ಖರ್ಗೆ ವಾಗ್ದಾಳಿ

Advertisement

ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌  ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಜ್ಞಾನೇಶ್‌ ಕುಮಾರ್‌ ಆಡಳಿತಾರೂಢ ಬಿಜೆಪಿಯ ಕೈಗೊಂಬೆ. ಅವರನ್ನು ಆಯುಕ್ತ ಸ್ಥಾನದಿಂದ ತಕ್ಷಣ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಇದ್ದಂತೆಯೇ, ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಐತಿಹಾಸಿಕ ಹೊಣೆಗಾರಿಕೆ ಮತ್ತೊಮ್ಮೆ ಕಾಂಗ್ರೆಸ್ ಹೆಗಲ ಮೇಲೆ ಬಂದಿದೆ. ಬ್ರಿಟಿಷರಿಂದ ನಾವು ಮತದಾನದ ಹಕ್ಕನ್ನು ಹೋರಾಡಿ ಪಡೆದುಕೊಂಡಿದ್ದೆವು. ಇಂದು ಅದೇ ಹಕ್ಕನ್ನು ರಕ್ಷಿಸಲು ಮತ್ತೊಮ್ಮೆ ಹೋರಾಡಬೇಕಾಗಿದೆ. ನಮ್ಮ ಪೂರ್ವಜರು ತಮ್ಮ ತ್ಯಾಗ ಮತ್ತು ಬಲಿದಾನಗಳಿಂದ ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ್ದರು. ಆ ಪ್ರಜಾಪ್ರಭುತ್ವದ ಅಡಿಪಾಯವನ್ನು ಮೋದಿ ಸರ್ಕಾರ 12 ವರ್ಷಗಳಲ್ಲಿ ಸಂಚು ರೂಪಿಸಿ ದುರ್ಬಲಗೊಳಿಸಿದೆ ಎಂದಿದ್ದಾರೆ. 

ಸಂಚಿನ ಮೂಲಕ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತರು ಮೋದಿ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳ ವಿರುದ್ಧವಾಗಿ ಕೆಲಸ ನಡೆಯುತ್ತಿದೆ. ರಕ್ಷಕರೇ ಭಕ್ಷಕರಾಗಿದ್ದಾರೆ. ಸಂವಿಧಾನವು ಯಾರಿಗೆ ಅಧಿಕಾರ ನೀಡಿ, ಜನರ ಮತದಾನದ ಹಕ್ಕಿನ ಕಾವಲುಗಾರನನ್ನಾಗಿ ಮಾಡಿತೋ, ಅವರೇ ಮತಗಳನ್ನು ಕಸಿದುಕೊಳ್ಳುವವರಾಗಿದ್ದಾರೆ. ನಮ್ಮ ಹೋರಾಟ ಯಾವುದೇ ಪಕ್ಷ, ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧವಲ್ಲ. ಭಾರತದ ಮತದಾರರ ಹಕ್ಕುಗಳು, ಸಂವಿಧಾನ ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವುದೇ ನಮ್ಮ ಹೋರಾಟದ ಉದ್ದೇಶ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಕರ್ನಾಟಕದ ಮಹಾದೇವಪುರ ಮತ್ತು ಆಳಂದ ಕ್ಷೇತ್ರದಲ್ಲಿ ನಡೆದ ಅಕ್ರಮಗಳನ್ನು ಬಯಲಿಗೆಳೆದರು. ಅಕ್ರಮದ ಹೊಣೆ ಹೊತ್ತು ಪ್ರಧಾನಿ ಮೋದಿ ಹಾಗೂ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮುಂಬರುವ ಐದು ರಾಜ್ಯಗಳ ಚುನಾವಣೆಗಳಲ್ಲಿ ಯಾವುದೇ ಮತದಾರನ ಹಕ್ಕು ಕಸಿದುಕೊಳ್ಳದಂತೆ ನೋಡಿಕೊಳ್ಳುವುದು ಅತ್ಯಗತ್ಯ ಅದಕ್ಕಾಗಿ ನಾವು ಹೋರಾಟ ಮಾಡಬೇಕು ಎಂದಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರ ಮಾತಿಗೆ ಸಭೆಯಲ್ಲಿದ್ದ ಎಲ್ಲ ನಾಯಕರು ಬೆಂಬಲಿಸಿದ್ದು, ಮುಂದೆ ಈ ವಿಚಾರದಲ್ಲಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಹೋರಾಟ ರೂಪಿಸಲಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾಮಗಾರಿಗೆ ಚಾಲನೆ ದಿವ್ಯಾಂಗ ರರಿಗೆ ಆತ್ಮವಿಶ್ವಾಸ ತುಂಬ ಸಂಕಲ್ಪ  ಉಚಿತ ಸಾಧನ ಸಲಕರಣೆಗಳ ವಿತರಣೆ ಭಾರತ್ ಜೋಡು ಯಾತ್ರೆ ಅಲ್ಲ ಕಾಂಗ್ರೆಸಿಗರ ಪ್ರಚಾರ ಯಾತ್ರೆಎಸ್ಐಆರ್ ಕುರಿತು ವಿನಾಕಾರಣ ರಾಜಕಾರಣ ಮಾಡಬಾರದು ಕಿವಿಮಾತ ಹೇಳಿದ ಮುರುಘೇಂದ್ರ ಗೌಡ ಪಾಟೀಲ್ಲೋಕಸಭೆಯಲ್ಲಿ ಚರ್ಚೆಗೆ ಬಾರದ ಕಾಂಗ್ರೆಸ್ಸಿಗರು ಈಗ ಭಾರತ್ ಜೋಡು ಯಾತ್ರೆ ಮಾಡುತ್ತಿದ್ದಾರೆಕಬ್ಬಿಗೆ 5,500 ರೂ. ನೀಡಿ – ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ, ಜೋಶಿ ಮನೆ ಮುತ್ತಿಗೆ9 ಕಿಮೀ ಕ್ರಮಿಸೋಕೆ 1 ಗಂಟೆ – ಬೆಂಗ್ಳೂರಲ್ಲಿ ಮಳೆಯಿಂದ ಭಾರೀ ಟ್ರಾಫಿಕ್‌ ಜಾಮ್‌!KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಭೂಕಂಟಕ – ಜಮೀನು ಕಬಳಿಕೆ ಆರೋಪದಡಿ FIRSIRನಲ್ಲಿ ಗೋಲ್ಮಾಲ್ ಆರೋಪ; ದೇಶಾದ್ಯಂತ ಹೋರಾಟಕ್ಕೆ ‘ಕೈ’ ಸಜ್ಜು