LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಾಮರಾಜನಗರ ಎನ್‌ಕೌಂಟರ್ ಕೇಸ್ – ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾಧ್ಯತೆ

Advertisement
Advertisement
Advertisement

ಚಾಮರಾಜನಗರ: ಹನೂರಿನಲ್ಲಿ ಮೂವರು ಬೇಟೆಗಾರರ ಎನ್‌ಕೌಂಟರ್ ಸಂಬಂಧ ನಾಳೆ (ಸೋಮವಾರ) ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದಾರೆ.

ತನಿಖೆಯಲ್ಲಿ ಅರಣ್ಯ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಕಣರದ ಪ್ರಮುಖ ಸಾಕ್ಷಿ ಮಹಿಮಾ ದಾಸ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಂದು ಘಟನೆ ಹೇಗಾಯ್ತು? ಏನಾಯ್ತು? ಅನ್ನೋ ಕಂಪ್ಲೀಟ್ ವರದಿ ತಯಾರಿಸಲಾಗಿದ್ದು ಬಹುತೇಕ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. 

ಇತ್ತ ಆ.15ರಂದು ಪ್ರತಿಭಟನೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಆರೋಪದಲ್ಲಿ ಗಂಗನದೊಡ್ಡಿ ಗೋವಿಂದ ಸೇರಿ ಆತನ ಸಹಚರರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಶೂಟೌಟ್ ನಡೆದಿದ್ದ ಕರಡಿಕಲ್ಲು ಒಡ್ಡು ಬಳಿ ಮೂವರು ನರಳಿ ಪ್ರಾಣಬಿಟ್ಟ ಸ್ಥಳದಲ್ಲಿ ರಕ್ತದ ಕಲೆ ಇನ್ನೂ ಮಾಸಿಲ್ಲ. ಅರಣ್ಯ ಸಿಬ್ಬಂದಿ ಗುಂಡೇಟಿಗೆ ಕೇವಲ ನಾಲ್ಕೈದು ಅಡಿಗಳ ಅಂತರದಲ್ಲೇ ಆಂಥೋಣಿಸ್ವಾಮಿ, ಪೀಟರ್, ಕುಮಾರ್ ಸಾವನ್ನಪ್ಪಿದ್ದರು. 

ಇನ್ನು ಮೂವರ ಹತ್ಯೆಗೆ ಪ್ರತೀಕಾರವಾಗಿ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ಉದ್ರಿಕ್ತರು ಡೈನಾಮೈಟ್, ಜಿಲೆಟಿನ್ ಇಟ್ಟು ಸ್ಫೋಟ ಮಾಡಿದ್ರು. ಹೊಳೆಮುರಿದಟ್ಟಿ ಶಿಬಿರ ಸ್ಫೋಟವನ್ನು ಟಾರ್ಗೆಟ್ ಮಾಡಿ ಸ್ಫೋಟಗೊಳಿಸಲಾಗಿತ್ತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದಲ್ಲಿ ಭಿಕ್ಷುಕಿ ನಿಧನ – ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗದೇ ಇರುವವರಿಗೆ ಜಾರಿಯಾಗಲಿದೆ ನೋಟಿಸ್ಹಳೆಯಂಗಡಿಯಲ್ಲಿ ಪಾಳುಬಿದ್ದ ಬಸ್ ತಂಗುದಾಣಕ್ಕೆ ‘ಮೀಡಿಯಾ ಮನಸುಗಳು’ ತಂಡದಿಂದ ಕಾಯಕಲ್ಪಕಾಲು ಜಾರಿ ಹಳಿ ಮೇಲೆ ಬಿದ್ದ ವ್ಯಕ್ತಿ; ರೈಲು ಹರಿದು ಸ್ಥಳದಲ್ಲೇ ಸಾವುಪಾಗಲ್‌ ಪ್ರೇಮಿಯಿಂದ ಟಾರ್ಚರ್‌ – ಕೆರೆಗೆ ಹಾರಿ ಸಾಗರದ ಯುವತಿ ಆತ್ಮಹತ್ಯೆರಾಜ್ಯದಲ್ಲಿ ಹಂದಿ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಳ – 4,125 ಕೇಸ್ ದಾಖಲು; ಆರೋಗ್ಯ ಇಲಾಖೆ ಅಲರ್ಟ್ಪುತ್ತೂರಿನಲ್ಲಿ ಕಳೆದ ಕೆಲವು ತಿಂಗಳಿಂದ ತಾಲಿಬಾನ್‌ ಸಂಸ್ಕೃತಿ ಇದೆ: ನಳಿನ್ ಕುಮಾರ್ ಕಟೀಲ್ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದವನ ವಿರುದ್ಧ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು: ಬೊಮ್ಮಾಯಿಕಾಂಗ್ರೆಸ್‌ನದ್ದು ಸೂಟ್‌ಕೇಸ್ ಬೃಂದಾವನ, ರಾಜ್ಯದ ಇತಿಹಾಸದಲ್ಲೇ ನೈಸ್ ಹಗರಣ ಬಹುದೊಡ್ಡ ಅಕ್ರಮ: ಹೆಚ್‌ಡಿಕೆಮಂಗಳೂರಲ್ಲಿ ಮೀನುಗಾರಿಕಾ ಬೋಟ್‌ ಮುಳುಗಡೆ – 6 ಮೀನುಗಾರರ ರಕ್ಷಣೆ