LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಪ್ಪನ ಅಗ್ರಹಾರದಲ್ಲಿ ಮೊಬೈಲ್‌ ಪತ್ತೆ ಪ್ರಕರಣ – 2ನೇ ಎಫ್‌ಐಆರ್‌ ದಾಖಲು

Advertisement
Advertisement

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ  ಮೊಬೈಲ್‌ಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ 2ನೇ ಎಫ್‌ಐಆರ್‌ ದಾಖಲಾಗಿದೆ.

ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಮೂರು ಮೊಬೈಲ್, 2 ಪೆನ್‌ಡ್ರೈವ್ ಸಿಕ್ಕಿದ್ದವು. ಬಳಿಕ ಜೈಲಾಧಿಕಾರಿಗಳು ನಡೆಸಿದ ದಾಳಿ ವೇಳೆ 2 ಮೊಬೈಲ್ ಹಾಗೂ 1 ಪೆನ್‌ಡ್ರೈವ್ ಪತ್ತೆಯಾಗಿತ್ತು. ಅಲ್ಲದೇ ಸಿಮ್ ಇಲ್ಲದ ಕಲ್ಲಿನಿಂದ ಜಚ್ಚಿ ಒಡೆದು ಹಾಕಿರುವ ಎರಡು ಫೋನ್, ಒಂದು ಪೆನ್‌ಡ್ರೈವ್ ಪತ್ತೆಯಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆಗಸ್ಟ್ 11ರ ರಾತ್ರಿ 11:30 ರಿಂದ ತಡರಾತ್ರಿ 2 ಗಂಟೆ ವರೆಗೂ ಜೈಲಾಧಿಕಾರಿಗಳು ದಾಳಿ ನಡೆಸಿದರು. ಭದ್ರತಾ ವಿಭಾಗ-01, 02 ಮತ್ತು 03ರಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಭದ್ರತಾ ವಿಭಾಗ-02ರ ಹಿಂಭಾಗ ಭಾಗ-01ರ ಕೆಳಭಾಗದ ಖಾಲಿ ಜಾಗದಲ್ಲಿ 1 ಮೊಬೈಲ್, ಪೆನ್‌ಡ್ರೈವ್ ಪತ್ತೆಯಾಗಿದ್ದವು.

ಕಲ್ಲಿನ ಕೆಳಗೆ ಸಿಮ್ ಇಲ್ಲದ ಮೊಬೈಲ್, 32 ಜಿಬಿ ಪೆನ್ ಡ್ರೈವ್ ಸಿಕ್ಕಿತ್ತು. ಭದ್ರತಾ ವಿಭಾಗ 02 ರ ಹಿಂಭಾಗದ ಖಾಲಿ ಜಾಗದಲ್ಲಿ ಕಲ್ಲಿನ ಕೆಳಗೆ ಒಂದು ಮೊಬೈಲ್ ಪತ್ತೆಯಾಗಿತ್ತು. ನಿಷೇಧಿತ ವಸ್ತು ಜೈಲಿನ ಒಳಗೆ ತಂದವರು, ಬಳಸಿದವರ ಪತ್ತೆ ಮಾಡಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಆರ್ ಅಂದಾನಿ ನೀಡಿದ ದೂರಿನ ಅನ್ವಯ ಎಫ್.ಐ.ಆರ್ ದಾಖಲಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕದ 18 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ224 ಶಾಸಕರೂ ನನಗೆ ಒಂದೇ, ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಡಿಕೆಶಿವರದಕ್ಷಿಣೆಗೆ ಬೆಳಗಾವಿ ಬಂಜಾರ ಸಮಾಜ ಬ್ರೇಕ್: ನಿಯಮ ಮೀರಿದರೆ 11 ಲಕ್ಷ ದಂಡವಿಧಾನ ಪರಿಷತ್‌ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನಲ್ಲಿ ಕರ್ಮಕಾಂಡ – ಡ್ರೆಸ್ಸಿಂಗ್‌ ರೂಂ, ಲೇಡಿಸ್ ಟಾಯ್ಲೆಟ್‌ನಲ್ಲಿ ಸಿಸಿಟಿವಿ ಪತ್ತೆಇಂಡಿಗೋ ವಿಮಾನ ರದ್ದಾಗಿದ್ದಕ್ಕೆ ರಂಪಾಟ – ಲಗೇಜ್‌ ಬೆಲ್ಟ್‌ ಏರಿ ಕಿರುಚಾಡಿದ ಮಹಿಳೆಪುಣೆಯ 6,000 ಕೋಟಿ ಮೌಲ್ಯದ ಡ್ರಗ್ಸ್ ಮಾಫಿಯಾ ಕೇಸ್ – ಪ್ರಕರಣದ ಕಿಂಗ್‌ಪಿನ್ ವಿರೇಂದ್ರ ಬೈಸೋಯಾ ಅರೆಸ್ಟ್ಪುಣೆಯ 6,000 ಕೋಟಿ ಮೌಲ್ಯದ ಡ್ರಗ್ಸ್ ಮಾಫಿಯಾ ಕೇಸ್ – ಪ್ರಕರಣದ ಕಿಂಗ್‌ಪಿನ್ ವಿರೇಂದ್ರ ಬೈಸೋಯಾ ಅರೆಸ್ಟ್ಭವ್ಯ ತಿರಂಗಾ ರ್ಯಾಲಿ ದೇಶಭಕ್ತಿಯ ಸಂಭ್ರಮದೊಂದಿಗೆ ಯಶಸ್ವಿ3 ನಿಮಿಷದಲ್ಲಿ ಹನುಮಾನ್ ಚಾಲೀಸ ಪಠಣ – ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 4 ವರ್ಷದ ಬಾಲಕ!