ಬೆಂಗಳೂರು: ಬಸ್ ಟಿಕೆಟ್ ದರ ಏರಿಕೆ ವಿಚಾರ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ವರದಿ ಗುರುವಾರ, ಶುಕ್ರವಾರ ಸಲ್ಲಿಕೆಯಾಗುವ ಬಗ್ಗೆ ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ನಾಲ್ಕು ಬಾರಿ ಡಿಸೇಲ್ ದರ ಏರಿಕೆ ಮಾಡಿದೆ. ಸದ್ಯ ಬಸ್ ಟಿಕೆಟ್ ದರ ಏರಿಸುವುದ ಅಗತ್ಯವಾಗಿದೆ. ವರದಿ ಸಿದ್ದಪಡಿಸಲು ಹೇಳಿದ್ದೆವು. ಅದರಂತೆ ಗುರುವಾರ, ಶುಕ್ರವಾರ ವರದಿ ಸಲ್ಲಿಕೆಯಾಗಲಿದೆ. ವರದಿ ನೋಡುತ್ತೇನೆ. ವರದಿ ನೋಡಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ದಸರಾದ ಒಳಗೆ ಆಗುತ್ತಾ ಅನ್ನೋದು ಗೊತ್ತಿಲ್ಲ. ಮೊದಲು ವರದಿ ಸಲ್ಲಿಕೆಯಾಗಲಿ. ಏನೇನಿದೆ ನೋಡಿ ಸಿಎಂ ಜೊತೆ ಚರ್ಚಿಸಿ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
