ರಾಮನಗರ: ಕಾಂಗ್ರೆಸ್ ಹಾಗೂ ಮೈತ್ರಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್ ಜಟಾಪಟಿ ಜೋರಾಗಿದ್ದು, ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪೋಸ್ಟರ್ ವಾರ್ ಆರಂಭಿಸಿದೆ.
ಇಂದು ಬಿಡದಿಗೆ ಬಿಜೆಪಿ ನಿಯೋಗ ಭೇಟಿ ಹಿನ್ನೆಲೆ ಕಾಂಗ್ರೆಸ್ ಪೋಸ್ಟರ್‌ಗಳನ್ನ (Poster) ಅಂಟಿಸಿ ಬಿಜೆಪಿಯನ್ನ ಟೀಕಿಸಿದೆ. ಯೋಜನೆ ವಿರುದ್ಧ ಪಾದಯಾತ್ರೆಗೆ ಕರೆ ನೀಡಿರುವ ಜೆಡಿಎಸ್ ವಿರುದ್ಧವೂ ಪೋಸ್ಟರ್ ಹಾಕಿ ವ್ಯಂಗ್ಯಮಾಡಿದೆ. ರೈತರ ಭೂಮಿ ಕದ್ದ ಆರ್.ಅಶೋಕ್, ಬಿರಿಯಾನಿ ಅಡ್ಡೆಯ ಚಿಲ್ಲರೆ ನಾರಾಯಣಸ್ವಾಮಿ, ಆರ್‌ಟಿಜಿಎಸ್ ಕಳ್ಳ ವಿಜಯೇಂದ್ರಗೆ ಬಿಡದಿ ಟೌನ್ ಶಿಪ್‌ಗೆ ಸ್ವಾಗತ ಎಂದು ಪೋಸ್ಟರ್ ಅಂಟಿಸಲಾಗಿದೆ.
ಅಲ್ಲದೇ ಹೆಚ್‌ಡಿಕೆ, ನಿಖಿಲ್, ಅನಿತಾ ಕುಮಾರಸ್ವಾಮಿ ಫೋಟೋವನ್ನೂ ಹಾಕಿ ಬೇನಾಮಿ ಆಸ್ತಿ ಒಡೆಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಿಡದಿಯ ಹಲವೆಡೆ ಪೋಸ್ಟರ್ ಅಂಟಿಸಿ ಮೈತ್ರಿ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.




