LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾಲು ಸಂಗ್ರಹದಲ್ಲಿ ಬೆಮೂಲ್ ಐತಿಹಾಸಿಕ ದಾಖಲೆ

Advertisement

ಬೆಳಗಾವಿ:ಕಿತ್ತೂರು ಕರ್ನಾಟಕ ಭಾಗದಲ್ಲಿಯೇ ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಬೆಮೂಲ್) ಇದೀಗ ಪ್ರತಿದಿನ 3ಲಕ್ಷ ಕೆಜಿ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ರಾಯಬಾಗ ತಾಲೂಕು 61,800 ಕೆಜಿ ಹಾಲು ಸಂಗ್ರಹಿಸುವ ಮೂಲಕ ಮುಂಚೂಣಿಯಲ್ಲಿದ್ದು, ಮೂಡಲಗಿ 32,400, ಅಥಣಿ 31,400, ಗೋಕಾಕ 30,000, ಖಾನಾಪುರ 26,300, ರಾಮದುರ್ಗ 20,900, ಬೆಳಗಾವಿ 14,600, ಕಿತ್ತೂರು 14,200, ಬೈಲಹೊಂಗಲ 12,700, ಹುಕ್ಕೇರಿ 12,500, ಚಿಕ್ಕೋಡಿ 9,000, ಕಾಗವಾಡ 5,000 ಹಾಗೂ ನಿಪ್ಪಾಣಿ 2,000 ಕೆಜಿ ಹಾಲು ಸಂಗ್ರಹಿಸುತ್ತಿವೆ. ಸವದತ್ತಿ ಮತ್ತು ಯರಗಟ್ಟಿ ತಾಲೂಕುಗಳಿಂದ 27,200 ಕೆಜಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಪ್ರತಿದಿನ 65 ಸಾವಿರ ಕೆಜಿ ಎಮ್ಮೆ ಹಾಲು ಹಾಗೂ 2.35 ಲಕ್ಷ ಕೆಜಿ ಹಸುವಿನ ಹಾಲು ಸಂಗ್ರಹವಾಗುತ್ತಿದೆ.

ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಒಕ್ಕೂಟದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಹಾಲು ಉತ್ಪಾದಕ ಸದಸ್ಯರಿಗೆ ಶೇ.60 ರಷ್ಟು ರಿಯಾಯಿತಿ ದರದಲ್ಲಿ ರಬ್ಬರ ಮ್ಯಾಟ್, ಮೇವು ಕತ್ತರಿಸುವ ಯಂತ್ರ ಹಾಗೂ ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಸ್ವಂತ ನಿವೇಶನ ಹೊಂದಿರುವ ಸಹಕಾರಿ ಸಂಘಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ತಲಾ 5 ಲಕ್ಷ ರೂ.ಅನುದಾನ ನೀಡಲಾಗುತ್ತಿದೆ. ಹಾಲು ಉತ್ಪಾದಕರ ಹೈನುಗಾರಿಕಾ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ವಿಮಾ ಸೌಲಭ್ಯ ಕಲ್ಪಿಸಲಾಗಿದ್ದು, ರೈತ ಕಲ್ಯಾಣ ಸಂಘದ ಯೋಜನೆಯಡಿ ಮೃತಪಟ್ಟ ಸದಸ್ಯರ ವಾರಸುದಾರರಿಗೆ -60 ಸಾವಿರ ರೂ.ಪರಿಹಾರಧನ ನೀಡಲಾಗುತ್ತಿದೆ.

ರೈತರು ಹಾಗೂ ಹಾಲು ಉತ್ಪಾದಕರು ಖಾಸಗಿ ಡೇರಿಗಳಿಗೆ ಹಾಲು ಪೂರೈಸುತ್ತಿರುವುದರಿಂದ ಬೆಮೂಲ್‌ನಿಂದ ದೊರೆಯುವ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ರೈತರು ಹಾಗೂ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಬೆಮೂಲ್‌ಗೆ ಪೂರೈಸಿ, ಒಕ್ಕೂಟದ ಮೂಲಕ ದೊರೆಯುವ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು.

ಜಿಲ್ಲೆಯ ಹೈನುಗಾರಿಕಾ ಕ್ಷೇತ್ರದ ಬೆಳವಣಿಗೆ, ಹಾಲು ಉತ್ಪಾದಕರ ಪರಿಶ್ರಮ, ಸಹಕಾರಿ ಮನೋಭಾವ ಹಾಗೂ ಒಕ್ಕೂಟದ ಸಮರ್ಥ ಆಡಳಿತದಿಂದ ಈ ಸಾಧನೆ ಸಾಧ್ಯವಾಗಿದೆ. ಜಿಲ್ಲೆಯ ಹಾಲು ಉತ್ಪಾದಕರು, ಸಹಕಾರಿ ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು, ಕಾರ್ಯದರ್ಶಿಗಳು, ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರಂತರ ಪ್ರಯತ್ನಕ್ಕೆ ಈ ಸಾಧನೆ ಸಾಕ್ಷಿಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆಗಿರುವಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಾಲು ಸಂಗ್ರಹದಲ್ಲಿ ಬೆಮೂಲ್ ಐತಿಹಾಸಿಕ ದಾಖಲೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಹಾಸನಾಂಬ ದೇಗುಲದ ಆವರಣದಲ್ಲಿ ಅವಘಡ, ವಿದ್ಯುತ್ ಶಾಕ್‌ಗೆ ಪ್ರಜ್ಞೆತಪ್ಪಿದ ಕಾರ್ಮಿಕಆರೋಗ್ಯಕರ ಜೀವನಕ್ಕೆ ಸತ್ವಯುತ ಆಹಾರವೇ ಅಡಿಪಾಯ: ಡಾ. ದಿಲೀಪ್ ನಾಟೇಕರರೋಗಿಗಳ ಗುಣಮುಖತೆಗೆ ಆಳವಾದ ಅಧ್ಯಯನ, ಸಮಗ್ರ ಚಿಕಿತ್ಸಾ ವಿಧಾನ ಅಗತ್ಯ: ಡಾ. ಶ್ರೀಪಾದ ಖೆಡೇಕರಮಾರಿಹಾಳ-ಸುಳೇಭಾವಿಯಲ್ಲಿ ನೇಕಾರರ ಪತ್ತಿನ ಸಹಕಾರ ಸಂಘದ ನೂತನ ಶಾಖೆ ಉದ್ಘಾಟಿಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ಅವರೊಳ್ಳಿ ರುದ್ರಸ್ವಾಮಿ ಮಠದಿಂದ ರಾಜಹಂಸಗಡ ಕೋಟೆವರೆಗೆ ಪಾದಯಾತೆ ಸಂಪನ್ನ್ಕಚೇರಿ ಅವಧಿಯಲ್ಲಿ ಢಾಬಾದಲ್ಲಿ ಕುಳಿತು ಮದ್ಯ ಸೇವಿಸಿದ ಖಾನಾಪುರ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹಸುಳೇಭಾವಿಯಲ್ಲಿ ₹1.68 ಕೋಟಿ ವೆಚ್ಚದಲ್ಲಿ ಶ್ರೀ ಮಹಾರಾಣಿ ದೇವಿ ದೇವಸ್ಥಾನ ನಿರ್ಮಾಣಕ್ಕೆ ಚಾಲನೆದಲಿತ ನಾಯಕರ ಏಳಿಗೆ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ- ಜಾರಕಿಹೊಳಿ ಪರ ಡಿಕೆಶಿ ಬ್ಯಾಟಿಂಗ್‌